ಭೂಮಿಯ ಮೇಲೆ ನಮ್ಮ ಬಿಜೆಪಿ ಪಕ್ಷ ಇರುವವರೆಗೂ ಸಂವಿಧಾನ ಬದಲಾವಣೆ ಇಲ್ಲ
ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ
ಕೊಳ್ಳೇಗಾಲ:ಭೂಮಿ ಮೇಲೆ ನಮ್ಮ ಪಕ್ಷ ಅಧಿಕಾರದಲ್ಲಿ ಇರುವ ವರೆಗೂ ಸಂವಿಧಾನ ಬದಲಾವಣೆ ಮಾತೇ ಇಲ್ಲ ಎಂದು ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಪಟ್ಟಣದ ಭ್ರಮರಾಂಬಕಲ್ಯಾಣ ಮಂಟಪದಲ್ಲಿ ಚಾಮರಾಜನಗರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಡೆದ ಸಂವಿಧಾನ ಸಮರ್ಪಣಾ ದಿನ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಛಲವಾದಿ ನಾರಾಯಣ ಸ್ವಾಮಿ ಉದ್ಘಾಟಿಸಿದರು.ಬಳಿಕ ಮಾತನಾಡಿ, ನಮ್ಮ ಪಕ್ಷದ ಯಾರೋ ಒಬ್ಬ ಸಂಸದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದನ್ನೇ ಕಾಂಗ್ರೆಸ್ ನವರು ಇನ್ನು ಜನತೆ ಮುಂದೆ ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲsa ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ನಾಯಕ ಎಂಬುದನ್ನು ಇಡೀ ದೇಶದ ಜನರೇ ಒಪ್ಪಿದ್ದಾರೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಅತಿ ದೊಡ್ಡ ಪಕ್ಷ ಎಂಬುದು ಈ ಹಿಂದೆ ಇತ್ತು, ಆದರೆ ಈಗ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್ ಗೆ ಮಾತ್ರ ಸೀಮಿತವಾಗಿಸಿಕೊಂಡಿದೆ. 75 ವರ್ಷಗಳ ಕಾಲ ದೇಶದಲ್ಲಿ ರಾಜ್ಯಭಾರ ನಡೆಸಿರುವ ಕಾಂಗ್ರೆಸ್ ಸರ್ಕಾರ ದಲಿತರನ್ನು ಗುಲಾಮರನ್ನಗಿಸಿಕೊಂಡಿದೆ. ದೇಶದಲ್ಲಿ ಎಲ್ಲಿಯೂ ಕೂಡ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ.
ಬಿಜೆಪಿ ಪಕ್ಷ ಮೀಸಲಾತಿ ವಿರೋಧಿ ಪಕ್ಷ ಎಂದು ಹೇಳುವ ಕಾಂಗ್ರೆಸ್ಸಿಗರು ಕರ್ನಾಟಕದಲ್ಲಿ ಎಸ್ಸಿ ಗೆ 15% ನಿಂದ 18% ಗೆ, ಎಸ್ಟಿ ಗೆ 3 ರಿಂದ 7% ಮೀಸಲಾತಿ ಹೆಚ್ಚಳ ಮಾಡಿದ್ದು ನಮ್ಮ ಬಿಜೆಪಿ ಪಕ್ಷದ ಬಸವರಾಜ ಬೊಮ್ಮಾಯಿ ಸರ್ಕಾರ.
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದ ಜಮ್ಮು-ಕಾಶ್ಮೀರದ ಜನರಿಗೆ 370 ನೇ ವಿಧಿಯನ್ನು ರದ್ದುಗೊಳಿಸಿ, ದೇಶಾದ್ಯಂತ ಜನರಿಗೆ ಸಿಗುವ ಎಲ್ಲಾ ಮೂಲಭೂತ ಸೌಕರ್ಯಗಳು ಅವರಿಗೂ ಸ್ವಾತಂತ್ರ್ಯದ ಹಕ್ಕುಗಳು ಸಿಗಲಿ ಎಂದು 370ನೇ ವಿಧಿ ರದ್ದುಗೊಳಿಸಿದ್ದು ನಮ್ಮ ಸರ್ಕಾರ ಎಂದರು
ಕಾಂಗ್ರೆಸ್ ಪಕ್ಷವು ಕುಟುಂಬ ರಾಜಕಾರಣವನ್ನು ಮುಂದುವರಿಸುತ್ತಾ ಬಂದಿದೆ. ಅವರವರ ಕುಟುಂಬದವರಷ್ಟೇ ಬೆಳೆಯಬೇಕೆ ಹೊರತು ಯಾರು ಸತ್ತರು ಚಿಂತೆ ಇಲ್ಲ.
ಎಸಿಪಿಟಿಎಸ್ಪಿ ಯೋಜನೆ ಜಾರಿ ತಂದಿದ್ದು ನಾವು ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಯೋಜನೆಯಲ್ಲಿ ಈವರೆಗೂ ಎಸ್ಸಿ ಎಸ್ಟಿ ಜನರಿಗೆ ಯಾವುದೇ ರೀತಿಯ ಹಣವನ್ನು ತಲುಪಿಸಿಲ್ಲ. ಯೋಜನೆ ತಂದದ್ದು ಅವರೇ ಹಣವನ್ನು ಲೂಟಿ ಮಾಡಿದ್ದು ಅವರ ಎಂದು ಆರಂಭಿಸಿದರು. ಬಾಬಾ ಸಾಹೇಬರು ಹೇಳಿದ ಹಾಗೆ ಕಾಂಗ್ರೆಸ್ ಸುಡುವ ಮನೆ ಎಂದಿದ್ದರು ಆದರೆ ಕಾಂಗ್ರೆಸ್ ಈಗಾಗಲೇ ಸುಟ್ಟು ಹೋಗಿದೆ ಎಂದರು.
ಮಾಜಿ ಸಚಿವ ಎನ್ ಮಹೇಶ್ ಮಾತನಾಡಿ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷಗಳು ಕಳೆಯುತ್ತಾ ಬಂದಿದೆ, ಈವರೆಗೂ ಸಂವಿಧಾನದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಆದರೆ ದೇಶದಲ್ಲಿ 75 ವರ್ಷಗಳ ರಾಜ್ಯಭಾರ ನಡೆಸಿರುವ ಕಾಂಗ್ರೆಸ್ ಸಂವಿಧಾನದಲ್ಲಿ ಒಟ್ಟು 106 ತಿದ್ದುಪಡಿಗಳನ್ನು ಮಾಡಿದೆ
ಅದರಲ್ಲಿ ಕಾಂಗ್ರೆಸ್ 75, ಕಾಂಗ್ರೆಸ್ಸೇ ತರ ಸರ್ಕಾರ 31 ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 8, ಅಟಲ್ ಬಿಹಾರ್ ವಾಜ್ಪೇಯ್ 14, ತಿದ್ದುಪಡಿಗಳನ್ನು ಮಾಡಲಾಗಿದೆ. ಆದರೆ ನಮ್ಮ ಸರ್ಕಾರ ಮಾಡಿರುವ ತಿದ್ದುಪಡಿಗಳು ದೇಶದ ಜನರಿಗೆ ಒಳಿತಾಗುವ ತಿದ್ದುಪಡಿಗಳಾಗಿವೆ. ಕಾಂಗ್ರೆಸ್ನವರು ತಮ್ಮ ಕುಟುಂಬದ ಒಳಿತಿಗಾಗಿ ಅಧಿಕಾರದ ಮಾಡಿರುವ ತಿದ್ದುಪಡಿಗಳಾಗಿವೆ
ಎಂದರು.
ಕಾರ್ಯಕ್ರಮಕ್ಕೆ ಮುನ್ನ ಅಂಬೇಡ್ಕರ್ ವೃತ್ತದ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಕಾರ್ಯಕರ್ತರೊಡನೆ ಅಂಬೇಡ್ಕರ್ ವೃತ್ತದಿಂದ ಬ್ರಹ್ಮರಂಬ ಕಲ್ಯಾಣ ಮಂಟಪದವರೆಗೆ ಬೈಕ್ ರ್ಯಾಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಚಾಮರಾಜನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಿರಂಜನ್ ಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ಉಪಾಧ್ಯಕ್ಷರು ಏನ್ ಮಹೇಶ್
ಮಾಜಿ ಶಾಸಕರಾದ ಎಸ್ ಬಾಲರಾಜ್ ಮಾಜಿ ವಿಧಾನ ಪರಿಷತ್ ಪ್ರೊ ಮಲ್ಲಿಕಾರ್ಜುನ ಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಕೊಡ ಪ್ರಕಾಶ್, ಹೊನ್ನೂರು ಮಹಾದೇವಸ್ವಾಮಿ, ಮಾಜಿ ನಿಗಮ ಮಂಡಳಿ ಅಧ್ಯಕ್ಷರು ಎಂ ರಾಮಚಂದ್ರ, ಡಾಕ್ಟರ್ ಬಾಬು ಮೋರ್ಚಾ ಗಳ ಅಧ್ಯಕ್ಷರು ಹನೂರು ವೆಂಕಟೇಶ್, ನೂರೊಂದಶೆಟ್ಟಿ, ಜಯ ಸುಂದರ, ಆರ್ ಸುಂದರ ಮೂರ್ತಿ, ಚಂದ್ರು, ಜಿಲ್ಲಾ ಉಪಾಧ್ಯಕ್ಷರು ಅರಕಲವಾಡಿ ನಾಗೇಂದ್ರ, ನಟರಾಜ್ ಗೌಡ, ರೇವಣ್ಣ, ಬೂದಿ ತಿಟ್ಟು ಶಿವಕುಮಾರ್,ಮಹೇಶ್, ಮಂಡಲ ಅಧ್ಯಕ್ಷರು ಗಳು ಚಿಂತು ಪರಮೇಶ್, ಅನಿಲ್, ವೃಷಬೇಂದ್ರೆ, ಸಾಹಿತಿ ಕೋಡಿ ಉಗನೇ ಮಂಜು, ಶ್ರೀ ಧರ್ sc ಮೋರ್ಚಾ ಮಂಡಲ್ ಸಿದ್ದಪ್ಪ ಮೋರ್ಚಾ ಅಧ್ಯಕ್ಷರು ಮಂಡಲ್ ಪದಾಧಿಕಾರಿಗಳು ಇದ್ದರು.
ವರದಿ: ನಿಂಪು ಬ್ರದರ್ಸ್
For more information about this story, visit our website regularly. We will keep you updated as more details emerge about this development. Follow Ra. Power 28 for all the latest news from Karnataka, covering politics, sports, crime, health, and more.