ಕೊಳ್ಳೇಗಾಲ : ಕೊಳ್ಳೇಗಾಲ ಮೀಸಲು ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಕಾಲು ನೋವಿನಿಂದ ಬಳಲುತ್ತಿದ್ದು ಕಳೆದ ಒಂದು ವಾರದಿಂದ ವಿಶ್ರಾಂತಿ ಯಲ್ಲಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರು ನಲ್ಲಿ ದೇವಾಲಯವೊಂದಕ್ಕೆ ಹೋಗಿ ಬರುವಾಗ ಎಡವಿ ಬಿದ್ದರು ಎಂದು ಹೇಳಲಾಗಿದ್ದು. ಇದು ಖಚಿತವಾಗಿಲ್ಲ.

ಆದರೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಕಾಲು ನೋವಿನಿಂದ ಬಳಲುತ್ತಿರುವುದು ನಿಜವಾಗಿದೆ. ಕಳೆದ ಒಂದು ವಾರದಿಂದ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿ ಕೊಂಡಿಲ್ಲ.

ಮಾಜಿ ಸಚಿವ ಎನ್.ಮಹೇಶ್ ಅವರು ಸಹ‌ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರನ್ನು ಭೇಟಿಮಾಡಿ ಕುಶಲೋಪಚಾರಿ ವಿಚಾರಿಸಿದ್ದಾರೆ.

ಇನ್ನೂ ಕೆಲವು ದಿನಗಳು ಶಾಸಕರಿಗೆ ವಿಶ್ರಾಂತಿ ಅಗತ್ಯ ಇದೆ ಎಂದು ತಿಳಿದು ಬಂದಿದ್ದು. ಆದಷ್ಟು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ.

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.