ಕೊಳ್ಳೇಗಾಲ: ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನೆ ಸಂಬAಧವಾಗಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ಭೀಮನಗರದ ಮುಖಂಡರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಡುವೆ ನಡೆದ ಸಭೆ ಫಲಪ್ರದವಾಗಿದ್ದು ಇನ್ನೊಂದು ವಾರದೊಳಗೆ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲು ಎಲ್ಲರೂ ಸರ್ವಸಮ್ಮತವಾಗಿ ಒಪ್ಪಿಕೊಂಡಿದ್ದಾರೆ.
ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಚಾಮರಾಜನಗರದ ನಿವಾಸದಲ್ಲಿ ಶನಿವಾರ ನಡೆದ ಸಬೆಯಲ್ಲಿ ಕೊಳ್ಳೇಗಾಲದಿಂದ ಭೀಮನಗರದ ಸುಮಾರು ೫೦ಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದರು.
ಭವನ ನಿರ್ಮಾಣ ಕಾಮಗಾರಿ ಆರಂಭಗೊAಡು ಸುಮಾರು ವರ್ಷಗಳೇ ಕಳೆದಿದೆ. ಹಾಗೂ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದು ಹೋಗಿದೆ. ಆದರೆ ಭವನವನ್ನು ಇದುವರೆವಿಗೂ ಲೋಕಾರ್ಪಣೆ ಮಾಡಲು ಆಗಿಲ್ಲ. ಇದು ಕೊಳ್ಳೇಗಾಲ ಪಟ್ಟಣ ಸೇರಿದತೆ ತಾಲೂಕಿನ ಗ್ರಾಮೀಣ ಭಾಗದ ದಲಿತ ಬಂಧುಗಳ ನೋವಿಗೆ ಕಾರಣವಾಗಿದೆ. ಆದ್ದರಿಂದ ಆದಷ್ಟು ಬೇಗನೆ ಭವನ ಉದ್ಘಾಟನೆಯನ್ನು ತಾವೇ ನಿಂತು ನಡೆಸಿ ಕೊಡಬೇಕು ಎಂದು ಅದ್ಯಕ್ಷ ಆನಂದಮೂರ್ತಿ ಮತ್ತು ಅನೇಕ ಮುಖಂಡರು ಮನವಿ ಮಾಡಿ ಕೊಂಡರು.
ಇದಕ್ಕೆ ಸ್ಪಂದಿಸಿದ ಶಾಸಕರು, ಭವನವನ್ನು ಅತ್ಯಂತ ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ಮಾಡಿಸಬೇಕು ಎಂಬ ಹಂಬಲ ನನಗೂ ಇದೆ. ಖಂಡಿತವಾಗಿ ಭವನವನ್ನು ಆದಷ್ಟು ಬೇಗನೆ ಉದ್ಘಾಟನೆ ಮಾಡೋಣ ಎಂದು ಸಹಮತ ವ್ಯಕ್ತಪಡಿಸಿದರು.
ಮುಂದಿನ ವಾರ ಮತ್ತೊಮ್ಮೆ ಸಚಿವ ಸಂಪುಟ ರಚನೆ ನಡೆಯಲಿದೆ. ಈ ಪ್ರಕ್ರಿಯೆ ಮುಗಿದ ನಂತರ ದಿನಾಂಕ ನಿಗದಿ ಮಾಡೋಣ ರಾಜ್ಯದ ನಾಯಕರನ್ನು ಕರೆದು ಭವನ ಉದ್ಘಾಟನೆ ಮಾಡಿಸೋಣ ಎಂದರು.
ಸಭೆಯಲ್ಲಿ ಕೊಳ್ಳೇಗಾಲದಿಂದ ಭೀಮನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅದ್ಯಕ್ಷ ಆನಂದಮೂರ್ತಿ, ಕಾರ್ಯದರ್ಶಿ ಪಾಪಣ್ಣ, ವರದರಾಜು, ರಾಚಪ್ಪಾಜಿ, ಲಿಂಗರಾಜು, ಶಂಕರ್ ಚೇತನ್, ಸಿದ್ದಯ್ಯ, ಸಿದ್ದಪ್ಪಾಜಿ, ಬಿ.ಮೂರ್ತಿ, ಮಂಜುನಾಥ್, ಪಿ.ಕೃಷ್ಣರಾಜು, ದಿಲೀಪ್ ಸಿದ್ದಪ್ಪಾಜಿ, ಅಮಾಸೆ ಮಹದೇವ, ಇನ್ನೂ ಮುಂತಾದವರು ಇದ್ದರು.
ವರದಿ- ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.