ಕೊಳ್ಳೇಗಾಲ. ಸಂಘಟನೆಯ ಹೆಸರು ಹೇಳಿಕೊಂಡು ಮರಳು ತುಂಬಿದ್ದ ಲಾರಿಯನ್ನು ಅಡ್ಡಗಟ್ಟಿ ಬೆದರಿಕೆ ಹೊಡ್ಡಿ ಹಣ ವಸೂಲಿ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಜರುಗಿದೆ.
ಯುವಕರ್ನಾಟಕ ವೇದಿಕೆಯ ಜಿಲ್ಲಾಧ್ಯಕ್ಷ ಮೊಹಮ್ಮದ್ ಅಯಾಜ್ @ಅಯಾಜ್ ಕನ್ನಡಿಗ, ಜಿಲ್ಲಾ ಸಲಹಾ ಗೌರವಾಧ್ಯಕ್ಷ ಇದ್ರೀಶ್ ಪಾಷಾ ಹಾಗೂ ತೋಸಿಫ್ ಎನ್ನುವರು ಬಂಧಿತ ಆರೋಪಿಗಳು.
ಇವರುಗಳು ಜು.14 ರಂದು ರಾತ್ರಿ ಹಂಪಾಪುರ ಮರಳು ಜಾಡಿನಲ್ಲಿ ಪರ್ಮೀಟ್ ನೀಡಿ ಮರಳು ತುಂಬಿಕೊಂಡು ಕನಕಪುರ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಲಾರಿಯನ್ನು ನರೀಪುರ ಗ್ರಾಮದ ಬಳಿ ಅಡಗಟ್ಟಿ ಲಾರಿ ಚಾಲಕ ಶಿವಮಾದು ಗೆ ಬೆದರಿಕೆ ಹಾಕಿ ಪೋನ್ ಮೂಲಕ ಹತ್ತು ಸಾವಿರ ಹಣ ವಸೂಲಿ ಮಾಡಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವರದಿ - ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.