ಹನೂರು, ದೇಶದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರವರ ಧರ್ಮಪತ್ನಿ ಚೆನ್ನಮ್ಮನವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್ ಅವರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಳಿಕ ಶಾಸಕರು ಮಾತನಾಡಿ ಚೆನ್ನಮ್ಮನವರು ಸರಳತೆ ಮತ್ತು ಸೇವೆಯ ಪ್ರತೀಕವಾಗಿದ್ದರು. ದೇವೇಗೌಡರವರ ರಾಜಕೀಯ ಮತ್ತು ಸಾಮಾಜಿಕ ಜೀವನಕ್ಕೆ ಸದಾ ಬೆಂಬಲವಾಗಿ ನಿಂತಿದ್ದರು. ಅವರ ನಿಧನದಿಂದ ರಾಜ್ಯದ ಜನತೆ ತುಂಬಲಾರದ ನಷ್ಟ ಅನುಭವಿಸಿದೆ" ಎಂದು ತಿಳಿಸಿದರು.

"ದಿವಂಗತ ಚೆನ್ನಮ್ಮನವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ. ಮತ್ತು ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವೇಗೌಡರ ಕುಟುಂಬಕ್ಕೆ ಭಗವಂತ ನೀಡಲಿ" ಎಂದು ಪ್ರಾರ್ಥಿಸಿದರು.

ಪಟ್ಟಣದ ಜೆಡಿಎಸ್ ಕಚೇರಿ ಹಾಗೂ ಎಚ್ ನಾಗಪ್ಪ ವೃತ್ತ  ಖಾಸಗಿ ಬಸ್ ನಿಲ್ದಾಣದಲ್ಲಿ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ದಿವಂಗತ ಚೆನ್ನಮ್ಮನವರಿಗೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಎರಡು ನಿಮಿಷ ಮೌನಾಚರಣೆ ಆಚರಿಸುವ ಮೂಲಕ ಭಕ್ತಿ ಪೂರ್ವ ಶ್ರದ್ದಾಂಜಲಿ ಸಲ್ಲಿಸಿದ್ದರು.


 ಈ ಸಂದರ್ಭದಲ್ಲಿ ಮಂಜೇಶ್ ಗೌಡ, ರಾಜು ಗೌಡ, ಸಿದ್ದರಾಜು, ಆನಂದ್ ಕುಮಾರ್, ಸಿಂಗನಲ್ಲೂರು ರಾಜಣ್ಣ, ಸತೀಶ್, ವಿಜಯಕುಮಾರ್, ಶ್ರೀರಂಗ, ಚಿನ್ನ ವೆಂಕಟ,ರಾಚಪ್ಪ,ಎಸ್,ಆರ್ ಮಹದೇವ್, ನಟರಾಜು ಗೌಡ,ಅಮೀನ್, ವೆಂಕಟೇಶ್, ಮಹೇಶ್, ಸೇರಿದಂತೆ ಸಾರ್ವಜನಿಕರು ಸಹ ಉಪಸ್ಥಿತರಿದ್ದರು...

ವರದಿ- ನೂರುಲ್ಲಾ ಕೌದಳ್ಳಿ

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.