ಕೊಳ್ಳೇಗಾಲ: ಹನೂರು ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಅಹಾಕಾರ ಉಂಟಾಗಿದೆ ರಾಜ್ಯ ಸರ್ಕಾರ ಕಣ್ಣಿದ್ದು ಕುರುಡಾಗಿದೆ ನೀರಿಗಾಗಿ ಪರದಾಟ ಹೆಚ್ಚಾಗಿದೆ ಹೀಗಾಗಿ ಕೆರೆ ಹೂಳೆತ್ತುವ ಕಾರ್ಯಕ್ರಮದ ಮೂಲಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚ ಅಧ್ಯಕ್ಷರಾದ ವೆಂಕಟೇಶ್ ತಿಳಿಸಿದರು
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಲೂರು ಬಳಿ ಬರುವ ಮೊಳಗನ ಕಟ್ಟೆ ಗ್ರಾಮದ ರಾಚ ಶೆಟ್ಟಿ ದೊಡ್ಡಿಯ ಸಿದ್ಧ ಶೆಟ್ಟಿ ಕೆರೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಅವರು ಗುದ್ದಲಿ ಪೂಜೆ ನಡೆಸಿ ನಂತರ ಅವರು ಮಾತನಾಡಿದರು . .
ಹನೂರು ತಾಲೂಕಿನಲ್ಲಿ ಮಳೆ ಕ್ಷೀಣಿಸಿರುವುದರಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಭಾರತೀಯ ಜನತಾ ಪಾರ್ಟಿಯ 300ಕ್ಕೂ ಹೆಚ್ಚು ಸರ್ವಸದಸ್ಯರ ಮೂಲಕ ಗ್ರಾಮದ ಕೆರೆಯಲ್ಲಿ ಊಳೆತ್ತುವ ಮೂಲಕ ರಾಜ್ಯ ಸರ್ಕಾರ ಕಣ್ಣಿದ್ದು ಕುರುಡಾಗಿದೆ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಕಿಲೋಮೀಟರ್ ತೆರಳಿ ನೀರು ಸಂಗ್ರಹಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ ಹೀಗಾಗಿ ಜನ ಜಾನುವಾರುಗಳು ಸಹ ಮೇವು ಮತ್ತು ನೀರು ಇಲ್ಲದೆ ಪರದಾಡುವಂಥ ಸ್ಥಿತಿ ಉಂಟಾಗಿರುವುದರಿಂದ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಲು ಮೀನಾ ಮೇಷ ಎಣಿಸುತ್ತಿದೆ ಹೀಗಾಗಿ ರೈತರಿಗೆ ಬರ ಪೀಡಿತ ಪ್ರದೇಶ ಎಂದು ಘೋಷಣೆಯ ನಂತರ ರೈತನಿಗೆ ಎಕರೆಗೆ 50,000 ಪರಿಹಾರ ನೀಡಬೇಕು ಪರಿಗಣಿಸದಿದ್ದರೆ ಕ್ಷೇತ್ರದಲ್ಲಿರುವ ಕೆರೆಗಳನ್ನು ಭಾರತೀಯ ಜನತಾ ಪಾರ್ಟಿ ವತಿಯಿಂದ ಊಳೆತ್ತುವ ಮೂಲಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಜೊತೆಗೆ ಮುಂದಿನ ದಿನಗಳಲ್ಲಿ ಮಲೆ ಮಹದೇಶ್ವರ ಮಂಡಲ ವತಿಯಿಂದ ಕೌದಳ್ಳಿ ಗ್ರಾಮದಲ್ಲಿ ಮಹಿಳಾ ಮೂರ್ಚ ವತಿಯಿಂದ ಕೆರೆ ಹೂಳೆತ್ತುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷರಾದ ಎಸ್ ನಿರಂಜನ್ ಕುಮಾರ್ ಮಾತನಾಡಿ : ಮಳೆ ಇಲ್ಲದೆ ಕಂಗಾಲಾಗಿ ಸಂಕಷ್ಟಕ್ಕೀಡಾಗಿರುವ ರೈತರ ಬೆಳೆಗಳಿಗೆ ಸರ್ಕಾರ ಬರ ಪರಿಹಾರ ನೀಡಲು, ಬರಪೀಡಿತ ಪ್ರದೇಶ ತಾಲೂಕು ಎಂದು ಘೋಷಣೆ ಮಾಡಬೇಕು ಅದನ್ನು ಬಿಟ್ಟು ರೈತರ ಸಹಾಯಕ್ಕೆ ಧಾವಿಸದೆ ರೈತ ವಿರೋಧಿ ಸರ್ಕಾರ ಆಗಿದೆ ಬಿಡದಿಯಲ್ಲಿ ಟೌನ್ ಶಿಪ್ ಮಾಡಲು ರಿಯಲ್ ಎಸ್ಟೇಟ್ ದಂಧೆಗೆ ಎಳೆದಿರುವ ಸರ್ಕಾರ ವಿರೋಧಿಸುತ್ತಿದ್ದರು ಅದನ್ನು ಮಾಡೇ ತೀರುತ್ತೇವೆ ಎಂದು ಮುಂದಾಗಿರುವ ಸರ್ಕಾರ ರೈತ ವಿರೋಧಿ ಸರ್ಕಾರ ಆಗಿದೆ ಹೀಗಾಗಿ ಬರಪರಿಸ್ಥಿತಿ ರೈತರಿಗೆ ಸಹಾಯ ಹಸ್ತ ನೀಡಬೇಕು ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರ ಪರಿಸ್ಥಿತಿಯಲ್ಲಿ ರೈತರಿಗೆ 25000 ಹಣ ಸಹ ನೀಡಿದೆ ಹೀಗಾಗಿ ರಾಜ್ಯ ಸರ್ಕಾರ ಬರ ಪರಿಸ್ಥಿತಿಯಲ್ಲಿರುವ ರೈತನಿಗೆ 50,000 ಹಣ ಪರಿಹಾರ ನೀಡಬೇಕು ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ತಿಳಿಸಿದರು.
ಮಾಶಾಸನ ನೀಡಲು ಆಗ್ರಹ
ರಾಜ್ಯ ಸರ್ಕಾರ ಕಳೆದ 7 ,8, ತಿಂಗಳಿನಿಂದ ವಯೋವೃದ್ಧರಿಗೆ ವಿಧವೆಯರಿಗೆ ಪೈಲ್ವಾನರಿಗೆ ಮತ್ತು ವಿಶೇಷ ಚೇತನ ಅಂಗವಿಕಲರಿಗೆ ಮಾಸಾಸನ ತಡೆಹಿಡಿದಿರುವುದರಿಂದ ಕುಟುಂಬದ ನಿರ್ವಹಣೆ ಜೊತೆಗೆ ಅವರಿಗೆ ಬೇಕಾದ ಆಹಾರ ಪದಾರ್ಥ ಮತ್ತು ಔಷಧಿಗಳನ್ನು ಪಡೆಯಲು ಬಳಸಿಕೊಳ್ಳುತ್ತಿದ್ದರು ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ತಡೆಹಿಡಿದಿರುವ ಮಾಸಾಹವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಸರ್ಕಾರ ದಿವಾಳಿಯಾಗಿದೆ ಇದರ ಬಗ್ಗೆ ಸಂಬಂಧಪಟ್ಟ ಸಚಿವರಾಗಲಿ ಶಾಸಕರುಗಳಾಗಲಿ ಮಾಶಾಸನದ ಬಗ್ಗೆ ಮಾತನಾಡುತ್ತಿಲ್ಲ ಸರ್ಕಾರದ ಪರಿಸ್ಥಿತಿ ಕೆಟ್ಟ ಪರಿಸ್ಥಿತಿಯಾಗಿದೆ ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಮಾತನಾಡಿ : ಜಿಲ್ಲೆ ಹಾಗೂ ರಾಜ್ಯದಲ್ಲಿ ಮಳೆ ಅಭಾವ ಹಿನ್ನೆಲೆಯಲ್ಲಿ ಆಗಿರುವ ಬರ ಪರಿಸ್ಥಿತಿಯನ್ನು ನೀಗಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಜೊತೆಗೆ ಜಿಲ್ಲೆ ಹಾಗೂ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ನಂತರ ಕೇಂದ್ರ ಸರ್ಕಾರಕ್ಕೆ ವರದಿಯ ಪ್ರಸ್ತಾವನೆ ಸಲ್ಲಿಸಬೇಕು ಅದನ್ನು ಬಿಟ್ಟು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿರುವುದು ಕೇಂದ್ರ ಸರ್ಕಾರದ ಮೇಲೆ ಗೂಭೆ ಕೂರಿಸುತ್ತಿದೆ ರಾಜ್ಯ ಸರ್ಕಾರ ಕೂಡಲೇರಾಜ್ಯದಲ್ಲಿರುವ ಜಿಲ್ಲೆ ಹಾಗೂ ತಾಲೂಕುಗಳಲ್ಲಿರುವ ಬರ ಪರಿಸ್ಥಿತಿಯನ್ನು ಅವಲೋಕನ ಮಾಡಿ ಅಧ್ಯಯನ ತಂಡವನ್ನು ಕಳಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ನಂತರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು
ಮಳೆಯ ಅಭಾವ ಮುನ್ನೆಚ್ಚರಿಕೆ ಕ್ರಮಗಳು ಇಲ್ಲ
ರಾಜ್ಯ ಸರ್ಕಾರ ಬರಪರಿಸ್ಥಿತಿಯನ್ನು ಅರಿಯುವುದನ್ನು ಬಿಟ್ಟು ಟೌನ್ ಶಿಪ್ ನಲ್ಲಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ಮುಳುಗಿದೆ ಹೀಗಾಗಿ ಅದನ್ನು ಬಿಟ್ಟು ರಾಜ್ಯದಲ್ಲಿ ಆಗುತ್ತಿರುವ ಬರ ಪರಿಸ್ಥಿತಿಯ ಅವಲೋಕನದ ಜೊತೆಗೆ ಕೂಡಲೇ ಕೆರೆಗಳ ಉಳೆತ್ತುವ ಮೂಲಕ ನೀರಾವರಿಗೆ ಮಳೆ ಬಂದ ಸಂದರ್ಭದಲ್ಲಿ ಶೇಖರಣೆ ಮಾಡಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಬಿಜೆಪಿ ಪಕ್ಷದ ವತಿಯಿಂದಲೇ ತಾಲೂಕಿನಲ್ಲಿ ಕೆರೆಗಳ ಊಳೆತ್ತುವ ಮೂಲಕ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಜನತೆ ನೋಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಬಗ್ಗೆ ಗಂಭೀರವಾಗಿ ಪರಿಗಣಿಸಿ ರೈತರಿಗೆ ನೆರವಾಗಬೇಕು ಎಂದು ತಿಳಿಸಿದರು . .
ಇದೇ ಸಂದರ್ಭದಲ್ಲಿ ಪರಿಹಾರ ನಿಗಮದ ಮಾಜಿ ಅಧ್ಯಕ್ಷರಾದ ರಾಮಚಂದ್ರು ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರಪ್ಪ ಹೊನ್ನೂರು ಮಹದೇವಸ್ವಾಮಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾದ ನೂರೊಂದು ಶೆಟ್ಟಿ ಮಾಜಿ ಅಧ್ಯಕ್ಷರಾದ ಆರ್ಸುಂದರ್ ರಾಜ್ಯ ಕಾರ್ಯಕಾರಣಿ ಸದಸ್ಯರುಗಳಾದ ಡಾ. ಬಾಬು ಕೆರೆಹಳ್ಳಿ ಮಹಾದೇವಸ್ವಾಮಿ ಜಿಲ್ಲಾ ಉಪಾಧ್ಯಕ್ಷರುಗಳಾದ ನಾಗೇಂದ್ರ ನಟರಾಜ ಗೌಡ ಮಂಡಲದ ಅಧ್ಯಕ್ಷರುಗಳಾದ ರುಸ್ ಬೇಂದರ ಸ್ವಾಮಿ ಮುರುಗೇಶ್ ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಉಪ್ಪಾರ್ ಒಬಿಸಿ ಮಂಡಲ ಅಧ್ಯಕ್ಷರುಗಳಾದ ಬಸವರಾಜ್ ಮಾದೇಶ್ ಮತ್ತು ಲೋಕೇಶ್ ಜಟ್ಟಿ ಚಿರಂಜೀವಿ ನಾಗಲಕ್ಷ್ಮಿ ಮೀನಾ ಗುರುಪಾದ ಸ್ವಾಮಿ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು ....
ವರದಿ: ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.