ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹನೂರು ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ಅನುದಾನ ನೀಡಲಾಗಿತ್ತು. ಈ ಪೈಕಿ ಎಂಟು ಕೋಟಿ ವೆಚ್ಚದಲ್ಲಿ ಸುಳ್ವಾಡಿ ಗ್ರಾಮದಿಂದ  ಅನುದಾನದಲ್ಲಿ ಮಾಟಳ್ಳಿ ಗ್ರಾಮದ ವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾನ್ಯಜನಪ್ರಿಯ ಶಾಸಕರಾದ ಶ್ರೀ ಎಂ.ಆರ್ ಮಂಜುನಾಥ್ ತಿಳಿಸಿದರು.

 ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ 9. 50 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

 ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲಾರ್ ಗ್ರಾಮದಿಂದ ಗೋಪಿನಾಥಂ ಗ್ರಾಮದವರೆಗೆ ಅಜ್ಜಿಪುರ ದಂಟಲ್ಲಿ ಕುರಟ್ಟಿ ಹೊಸೂರು, ಪಿ ಜಿ ಪಾಳ್ಯ ಗ್ರಾಮದಿಂದ ವಿ ಎಸ್ ದೊಡ್ಡಿ, ಮಾವತ್ತೂರು ಗ್ರಾಮದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

 ಸುಳ್ವಾಡಿ  ಗ್ರಾಮದಿಂದ ಮಾಟಳ್ಳಿ ಗ್ರಾಮದವರೆಗೆ ನಾಲ್ಕು ಕಿಲೋಮೀಟರ್ ರಸ್ತೆ ಹಾಗೂ ೧೮೪೦ ಮೀಟರ್ ಸಿಸಿ ರಸ್ತೆ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೆಲವು ಕಡೆ ನಡೆಯುತ್ತಿದ್ದು ಕೆಲವರು ಹೈಕೋರ್ಟ್ ಗೆ ಪ್ರಕರಣ ದಾಖಲು ಮಾಡಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಅವರಿಗೂ ಸಹ ಪರಿಹಾರ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಕೆಲವರು ಯಾವುದೇ ನಿರೀಕ್ಷೆಯಿಲ್ಲದ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದರು.

 ವಡಕೆ ಹಳ್ಳ ಗ್ರಾಮದಿಂದ ರಾಮಪುರ ಗ್ರಾಮದ ವರೆಗಿನ 74 ಕಿ.ಮೀ ರಸ್ತೆಯು ರಾಜ್ಯ ಹೆದ್ದಾರಿಯಾಗಿ , ಮೇಲ್ದರ್ಜೆಗೇರಿದೆ. ಈ ರಸ್ತೆಯನ್ನು ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಲು 37 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದರು.

 ಕಳೆದ ಹಲವಾರು ವರ್ಷಗಳಿಂದ ಎಲಚಿಕೆರೆ ಗ್ರಾಮದಲ್ಲಿ ಮಿನಿ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು ಈ ಹಿನ್ನೆಲೆ 35 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

 ಕೌದಳ್ಳಿ ಗ್ರಾಮದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ಆದ್ಯತೆಯ ಮೇರೆಗೆ ಬಡಾವಣೆಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಒಟ್ಟಾರೆ ಹನೂರು ಕ್ಷೇತ್ರದ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ  ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

 ಮಾರ್ಟಳ್ಳಿ ಗ್ರಾಮದಲ್ಲಿರುವ ಚೆಕ್ ಡ್ಯಾಮ್ ಹಾಗೂ ಕೆರೆಗಳನ್ನು ಖಾಸಗಿ ಏಜೆನ್ಸಿಯ ಮೂಲಕ  ಸರ್ವೆ ನಡೆಸಲಾಗುತ್ತಿದೆ. ನಾನು ಸಹ ಮೂರು ಬಾರಿ ಕಾಲುವೆಗಳನ್ನು ಸರ್ವೆ ಮಾಡಿದ್ದೇನೆ. ಈಗಾಗಲೇ ಡಿಪಿಆರ್ ಮಾಡು ಹೂಳು ತೆಗೆಸಲು ಯೋಜನೆ ರೂಪಿಸಲಾಗುತ್ತಿದೆ. ಅನುದಾನ ವನ್ನು ಕ್ರೋಢಿಕರಿಸಿ ಯಾರು ಊಹೆ ಮಾಡಲು ಸಾಧ್ಯವಾಗದಷ್ಟು  ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

 490 ಕೋಟಿ ಏತ ನೀರಾವರಿ ಯೋಜನೆಯಲ್ಲಿ ಬಿದರಳ್ಳಿ ಹಳ್ಳಕ್ಕೆ ನೀರು ಹರಿಸಿ ಚಕ್ ಡ್ಯಾಮ್ ಅಗಲೀಕರಣ ಮಾಡಿ  ನಾಲ್ ರೋಡ್ ಗ್ರಾಮದವರೆಗೆ , ಸಂತೆಕಾನೆ ಗ್ರಾಮದಿಂದ ಸುಳ್ವಾಡಿ ಗ್ರಾಮದವರೆಗೆ,  ಕೊಂಬೆ ಹಳ್ಳದವರೆಗೆ ನೀರು ಹರಿಸಲು ಕ್ರಮ ವಹಿಸಲಾಗುತ್ತಿದೆ ಪಣಕೋಬೆ ಸಮೀಪ ಹಾಲೇರಿ ಹಳ್ಳಕ್ಕಿಂತಲೂ ಬೃಹತ್ ಜಲಾಶಯ ನಿರ್ಮಾಣ ಮಾಡಬಹುದು ಅದನ್ನು ಸಹ ಅಭಿವೃದ್ಧಿಪಡಿಸಲು ಪರಿಶೀಲನೆ ನಡೆಸಲಾಗಿದೆ. ಈ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಲಾಗಿದೆ. ಸರ್ವೆ ಕಾರ್ಯ ಮುಗಿದ ನಂತರ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

 ರಾಮಪುರ ಗ್ರಾಮದಿಂದ ನಾಲ್ ರೋಡ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದ ಮೂರು ಕಿಲೋಮೀಟರ್ ರಸ್ತೆ ಅಭಿವೃದ್ಧಿ ಆಗಬೇಕಿದೆ ಈ ಕಾಮಗಾರಿ ಪೂರ್ಣಗೊಳಿಸಲು 10 ಕೋಟಿ ಅನುದಾನ ಬೇಕಿದ್ದು ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ತಂದು ರಸ್ತೆ ಅಭಿವೃದ್ಧಿಪಡಿಸಲಾಗುವುದು.

ಇದೆ ಸಮಯದಲ್ಲಿಲೋಕೋಪಯೋಗಿ ಇಲಾಖೆಯ ಎಇಇ ಚಿನ್ನಣ್ಣ,ಕೆ ಆರ್ ಐ ಎಲ್ ಇಂಜಿನಿಯರ್ ಕಾರ್ತಿಕ್ ಮಾಜಿ 
ತಾಲೂಕು ಪಂಚಾಯತ್ ಸದಸ್ಯರಾದ ಮಣಿ,ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ,ಡಿ ಆರ್ ಹಾರ್ಡ್ವೆರ್ ಸೀನಣ್ಣ, ಬಾಲಯ್ಯ, ಸಂದೆವು, ಪೌಲ್ ರಾಜ್, ಅಂತೋನಿಸ್ವಾಮಿ,ಕಾಶಿಮ್, ಜೋಸೆಫ್, ಚಾರ್ಲ್ಸ್, ಚಿನ್ನವೆಂಕಟ್, ವಿನೋದ್,ಡೇವಿಡ್ ಬಿಲ್ಲಾ, ತಿರುಪತಿ, ಹೂಗ್ಯಾಮ್ ಗ್ರಾಮ ಪಂ ಮಾಜಿ ಅಧ್ಯಕ್ಷರಾದ ಮುರುಗೇಶ್,ಸೇಲ್ವಮ್, ಜಪಮಾಲೆ,ಪಳನಿಸ್ವಾಮಿ,ವಿಜಯ್ ಕುಮಾರ್, ಡಿ ಕೆ ರಾಜು, ಎಸ್ ಆರ್ ಮಹದೇವ್, ಸೌಕಯ್ಯ, ಮಹೇಶ್, ರಾಜೇಂದ್ರ, ಸೆಂಥಿಲ್,ತಿರುಪತಿ,ಸೇರಿದಂತೆ ಇನ್ನಿತರರು ಇದ್ದರು...
ವರದಿ - ನೂರುಲ್ಲಾ ಕೌದಳ್ಳಿ


ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.