ಕೊಳ್ಳೇಗಾಲ :  “ಯಶಸ್ವಿಯಾಗಿ ನಡೆದ 52ನೇ ತಿಂಗಳ ಕಣ್ಣಿನ ತಪಾಸಣಾ ಶಿಬಿರ ” ಹೆಚ್.ಕೃಷ್ಣಸ್ವಾಮಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಗಳು ಕೊಳ್ಳೇಗಾಲ , ರೋಟರಿ ಮಿಡ್- ಟೌನ್ ಹಾಗೂ  ಕೊಯಮತ್ತೂರು  ಅರವಿಂದ ಕಣ್ಣಿನ ಆಸ್ಪತ್ರೆ ರವರ ಸಹಯೋಗದೊಂದಿಗೆ ಸತತ 52 ನೇ  ತಿಂಗಳಾ ಉಚಿತ "ನೇತ್ರ ನಿರಂತರ " ಹೆಸರಿನ ಕಣ್ಣಿನ ತಪಾಸಣಾ ಶಿಬಿರವು ದಿನಾಂಕ:-12-07- 2026 ನೇ ಭಾನುವಾರದಂದು ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಆವರಣ ಕೊಳ್ಳೇಗಾಲದಲ್ಲಿ ಯಶಸ್ವಿಯಾಗಿ ನಡೆಯಿತು, ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ aಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಶ್ರೀಮತಿ ಪ್ರೇಮಲತಾ ಕೃಷ್ಣಸ್ವಾಮಿ ರವರು ರವರು  ಈ ಕಾರ್ಯಕ್ರಮವನ್ನು ಸತತ 52 ತಿಂಗಳುಗಳಿಂದ ನಡೆಸುತ್ತಾ ಬಂದಿದ್ದು ಈಗಾಗಲೇ 5734 ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡು ಅದರಲ್ಲಿ 3440 ಜನರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಈ ಕಾರ್ಯಕ್ರಮವು ರೋಟರಿ ಮಿಟ್ ಟೌನ್ ಹಾಗೂ ರೋಟರಿ ಸಂಸ್ಥೆ ಕೊಳ್ಳೇಗಾಲ ಮತ್ತು ಕೊಳ್ಳೇಗಾಲ ಮಹಾಜನತೆಯ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು ಇದೇ ಸಂದರ್ಭದಲ್ಲಿ ರೋಟರಿ ಮಿಡ್ ಟೌನ್ ಸಂಸ್ಥೆಯ ಹಿರಿಯ ಸದಸ್ಯರು ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷರಾದ ಜೆ ಹರ್ಷರವರ ಜನ್ಮದಿನಾಚರಣೆಯನ್ನು ಅರವಿಂದ್ ಕಣ್ಣಾಸ್ಪತ್ರೆಯ ಸಿಬ್ಬಂದಿಗಳ ಹಾಗೂ ತಪಾಸಣೆಗಾಗಿ ಬಂದಿದ್ದಂತಹ ಜನರೊಟ್ಟಿಗೆ ಸರಳವಾಗಿ ಆಚರಿಸಲಾಯಿತು ಜನ್ಮದಿನಾಚರಣೆಯನ್ನು ಆಚರಿಸಿಕೊಂಡಂತಹ ಜೆ ಹರ್ಷರವರು ಮಾತನಾಡಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ ನನ್ನ ಜನ್ಮದಿನವನ್ನು ಆಚರಿಸಿದ್ದು ನನ್ನ ಪುಣ್ಯವೆಂದು ಭಾವಿಸುತ್ತೇನೆ ಹಾಗೆಯೇ ನಿಮ್ಮೆಲ್ಲ ಹಿರಿಯರ ಆಶೀರ್ವಾದ ನನ್ನ ಮೇಲೆ ಸದಾ ಇರಲಿ ನಿಮ್ಮೆಲ್ಲರ ಈ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಹಾಗೆಯೇ ಪ್ರತಿ ತಿಂಗಳು ಎರಡನೇ ಭಾನುವಾರ ನಡೆಯುವ ಉಚಿತ ನೇತ್ರ ನಿರಂತರ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಇತರರಿಗೂ ಕಾರ್ಯಕ್ರಮದ ಅನುಕೂಲಗಳನ್ನು  ಪಡೆದುಕೊಳ್ಳಬೇಕೆಂದು ತಿಳಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು ಕಾರ್ಯಕ್ರಮದಲ್ಲಿ. ರೋಟಿನ್ ಸಂಸ್ಥೆ ಕಾರ್ಯದರ್ಶಿ ಸಂಪತ್ ಕುಮಾರ್ . ರೋ. ಸತೀಶ್ ಬಾಬು, ರೋ. ಗಿರೀಶ್ ಜಡೆ ಉಮಾಶಂಕರ್ , ದಕ್ಷಿಣಾಮೂರ್ತಿ  ಹಾಗೂ  ಅರವಿಂದ ಕಣ್ಣಿನ ಆಸ್ಪತ್ರೆಯ ಡಾ. ವಿಕಾಸ್ ಕುಮಾರ್ , ಡಾ. ನರೇಂದ್ರ ರಾಜಕ್ , ಡಾ. ಕಠವಿಕಾರ್ ಅನುರಾಗ್ ಪರಾಗ್ , ಹಾಗೂ ಅರವಿಂದ ಕಣ್ಣಿನ ಆಸ್ಪತ್ರೆಯ ಸಂಯೋಜಕರಾದ ವಿಜಯ್ ಕುಮಾರ್ ರವರು ವಿಶ್ವಚೇತನ ವಿದ್ಯಾ ಸಂಸ್ಥೆಯ  ವ್ಯವಸ್ಥಾಪಕರಾದ ರವಿತೇಜ ರವರು ಆಸ್ಪತ್ರೆಯ ಸಿಬ್ಬಂದಿಗಳು, ಸಂಸ್ಥೆಯ ಸಿಬ್ಬಂದಿಗಳಾದ ,ಕು. ರಮ್ಯ , ಶಾಂತರಾಜು. ಸಿದ್ದಾರ್ಥ್ ಹಾಗೂ  ಸಿಬ್ಬಂದಿ ವರ್ಗದವರು
ಹಾಜರಿದ್ದರು.
ಈ ದಿನದ ಶಿಬಿರದಲ್ಲಿ 166 ರೋಗಿಗಳನ್ನು  ತಪಾಷಣೆಗೆ ಒಳಪಟ್ಟಿದ್ದು ಅದರಲ್ಲಿ 81 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಅರವಿಂದ ಕಣ್ಣಿನ ಆಸ್ಪತ್ರೆ ಕೊಯಮತೂರಿಗೆ ಕಳುಹಿಸಿಕೊಡಲಾಯಿತು.
ವರದಿ: ನಿಂತು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.