ಹನೂರು : ಪಟ್ಟಣದ 11ನೇ ವಾರ್ಡಿನ ವಿನಾಯಕ ನಗರ ಸಮೀಪದ ಜಮೀನಿನಲ್ಲಿ ನೂತನವಾಗಿ ಶ್ರೀ ಸತ್ಯ ಶಿರಡಿ ಸಾಯಿಬಾಬಾ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪತ್ರಕರ್ತ ಹಾಗೂ ದೇವಸ್ಥಾನದ ನಿರ್ಮಾತೃಗಳಾದ ಜಿ ದೇವರಾಜ್ ನಾಯ್ಡು ಮನವಿ ಮಾಡಿದ್ದಾರೆ.

 ಹನೂರು ಪಟ್ಟಣ ವ್ಯಾಪ್ತಿಯ ಜಿ ದೇವರಾಜ್ ನಾಯ್ಡು ರವರ ಜಮೀನಿನಲ್ಲಿ ಶ್ರೀ ಸತ್ಯ ಶಿರಡಿ ಸಾಯಿಬಾಬಾ ದೇವಾಲಯದ ನಿರ್ಮಾಣಕ್ಕೆ ಜೇಷ್ಠ ಮಾಸ ಶುಕ್ಲ ಪಕ್ಷ ಏಕಾದಶಿ ಸ್ವಾತಿ ನಕ್ಷತ್ರದಲ್ಲಿ ಜೂನ್ 25ರ ಗುರುವಾರ ಬೆಳಿಗ್ಗೆ 8.10 ರಿಂದ ಬೆಳಗ್ಗೆ 9 : 10ರವರೆಗೆ ಸಲ್ಲುವ  ಶುಭ ಕಟಕ ಲಗ್ನದಲ್ಲಿ ಶ್ರೀ ಸತ್ಯ ಶಿರಡಿ ಸಾಯಿ ದೇವಾಲಯದ ಶಂಕುಸ್ಥಾಪನೆ ನಡೆಯಲಿದೆ.

 ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಬೇಕೆಂದು ಮನವಿ ಮಾಡಿದ್ದಾರೆ.

ವರದಿ- ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.