ಕೊಳ್ಳೇಗಾಲ: ಕರ್ತವ್ಯ ಮುಗಿಸಿ ಕೊಂಡು ಮನೆಗೆ ತೆರಳುತ್ತಿದ್ದ ಕೊಳ್ಳೇಗಾಲ ಸೆಸ್ಕಾಂ ಸಿಬ್ಬಂದಿ ಮೇಲೆ ಅಪರಿಚಿತ ದ್ವಿಚಕ್ರ ಡಿಕ್ಕಿ ಹೊಡೆದ ಪರಿಣಾಮ ಸೆಸ್ಕಾಂ ಮಹಿಳಾ ಸಿಬ್ಬಂಧಿಯೊಬ್ಬರು ತೀರ್ವ ಗಾಯಗೊಂಡಿರುವ ಘಟನೆ ಗುರುವಾರ ಸಾಯಂಕಾಲ ನಡೆದಿದೆ.
ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಜ್ಯೂನಿಯರ್ ಅಸಿಸ್ಟೆಂಟ್ ಪದ್ನ ಅವರು ಗಾಯಗೊಂಡವರು.
ಸಾಯಂಕಾಲ ಕರ್ತವ್ಯ ಮುಗಿಸಿ ಕಚೇರಿಯಿಂದ ಹೊರಬಂದು ಬಸ್ ನಿಲ್ದಾಣ ಕಡೆಗೆ ತೆರಳುತ್ತಿದ್ದ ವೇಳೆ, ಕೃಷ್ಣ ಟಾಕೀಸ್ ಕಡೆಯಿಂದ ವೇಗವಾಗಿ ಬಂದ ದ್ವಿಚಕ್ರ ಸವಾರನೊಬ್ಬ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆ ಸೆಸ್ಕಾಂ ಕಚೇರಿ ಮುಂದೆಯೇ ನಡೆದಿದೆ.
ಅಪಘಾತದಲ್ಲಿ ಸೆಸ್ಕಾಂ ಸಿಬ್ಬಂದಿ ಪದ್ಮ ಅವರ ಕಾಲಿಗೆ ತೀವ್ರ ಗಾಯವಾಗಿದ್ದು, ವಿಪರೀತವಾದ ರಕ್ತ ಹೊರಬಂದಿದೆ.
ಕೂಡಲೇ ಜೊತೆಯಲ್ಲಿ ಇದ್ದ ಜೆಇ ಗಾನವಿ ಮತ್ತು ಸೆಸ್ಕಾಂ ಸಿಬ್ಬಂದಿಗಳು ಪದ್ಮ ಅವರನ್ನು ಉಪಚರಿಸಿ ತಕ್ಷಣ ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ.
ಡಿಕ್ಕಿ ಹೊಡೆದ ಅಪರಿಚಿತ ಬೈಕ್ ಸವಾರ ಪರಾರಿಯಾಗಿದ್ದಾನೆ. ಸ್ಥಳೀಯ ಅಂಗಡಿಗಳ ಮುಂದೆ ಇರುವ ಸಿಸಿ ಟಿವಿ ಯಲ್ಲಿ ಬೈಕ್ ಸವಾರನ ಪತ್ತೆಗೆ ಮುಂದಾಗಿದ್ದಾರೆ.

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.