ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ
ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ ಮಂಗಳವಾರ ಇಲಾಖೆ ವತಿಯಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ಹಮ್ಮಿ ಕೊಳ್ಳಲಾಗಿತ್ತು.
ಸೆಸ್ಕಾಂ ಉಪವಿಭಾಗ ಕಚೇರಿ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಇಇ ತಬ್ಸಮ್ ಬಾನು ಅವರು, ಎಇಇ ರಾಜು ಅವರಿಗೆ ಗೌರವ ಸನ್ಮಾನ ಮಾಡುವ ಮೂಲಕ ಕರ್ತವ್ಯ ದಿಂದ ನಿವೃತ್ತಿ ಹೊಂದಿದೆ ರಾಜು ಅವರನ್ನು ಬೀಳ್ಕೊಟ್ಟರು.
ಈ ವೇಳೆ ಮಾತನಾಡಿದ ಅವರು,, ರಾಜು ಅವರ ಜೊತೆಗೆ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ ಅವರಲ್ಲಿರುವ ತಾಳ್ಮೆ ಮತ್ತು ಸಹನೆ ನಿಜವಾಗಿಯೂ ಮೆಚ್ಚುವಂತಹದ್ದು ಎಂದರು. ಕೊಳ್ಳೇಗಾಲದಂತಹ ಸ್ಥಳದಲ್ಲಿ ರೈತ ವರ್ಗದವರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕರ್ತವ್ಯ ನಿರ್ವಹಿಸಿ ಇಲಾಖೆಗೂ ಒಳ್ಳೆಯ ಹೆಸರು ತಂದಿದ್ದಾರೆ ಇವರ ಅವಧಿಯಲ್ಲಿ ಎರಡು ನೂತನ ಪವರ್ ಸ್ಠಷನ್ ಆಗಿದ್ದು ಸಂತಸ. ಎಲ್ಲಾ ಕಾಲದಲ್ಲಿಯೂ ಇವರ ಹೆಸರು ಅಜರಾಮರವಾಗಿರುತ್ತದೆ ಎಂದರು.
ಇಲಾಖೆಯ ಇನ್ನಿತರ ಅಧಿಕಾರಿಗಳು ಮಾತನಾಡಿದರು. ನಿಮ್ಮ ಸುದೀರ್ಘ 32 ವರ್ಷದ ಸೇವೆಯಲ್ಲಿ ಏನೊಂದು ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿರುವುದು ಹೆಗ್ಗಳಿಕೆ ಎಂದರು. ನಿಮ್ಮ ಮಾರ್ಗದರ್ಶನ ನಮಗೆ ಇನ್ನೂ ಮುಖ್ಯ ಎಂದರು.
ನಿವೃತ್ತಿ ಸನ್ಮಾನ ಸ್ವೀಕರಿಸಿದ ಎಇಇ ಎಂ ರಾಜು ಅವರು ಮಾತನಾಡಿ, ನನಗೆ ನಿಮ್ಮೆಲ್ಲರ ಈ ಪ್ರೀತಿ ಮತ್ತು ವಿಶ್ವಾಸ ಕಂಡು ಮಾತನಾಡಲೇ ಆಗುತ್ತಿಲ್ಲ ಎಂದು ಭಾವುಕರಾದರು. ಬಡತನದಲ್ಲಿ ಬೆಳೆದ ನಾನು ತಂದೆ ತಾಯಿಗಳ ಹಾದಿಯಲ್ಲಿ ನಡೆದೆ. ಕುಟುಂಬದ ಜೊತೆಗೆ ಕರ್ತವ್ಯದಲ್ಲೂ ಉತ್ತಮವಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗೆ ಇದೆ ಎಂದರು. ನಿವೃತ್ತಿ ನಂತರವೂ ಇಲಾಖೆಗೆ ಗೌರವ ತರುವ ಕೆಲಸದಲ್ಲಿ ತೊಡಗಿಸಿ ಕೊಳ್ಳುತ್ತೇನೆ ಎಂದರು.
ರೈತ ಸಂಘದ ಮುಖಂಡ ಬಸವರಾಜ್ ಅವರು ರಾಜು ಅವರಿಗೆ ಪುಷ್ಪಾಭಿಷೇಕ ಮಾಡಿದರು. ನಂತರ ನೀವು ಕರೆಂಟ್ ಕೊಟ್ಡಿದ್ದರಿಂದ ನಮಗೆ ಒಳ್ಳೆಯ ಬೆಳೆ ಬಂದಿದೆ ಎಂದು ಹೇಳಿ ಸಣ್ಣ ಈರುಳ್ಳಿ ಗಿಫ್ಟ್ ಆಗಿ ನೀಡಿದ್ದು ವಿಶೇಷವಾಗಿತ್ತು.
ಸಮಾರಂಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ರೈತ ಮುಖಂಡರು ಇಲಾಖೆಯ ಸಿಬ್ಬಂದಿ ಮತ್ತು ನೌಕರರು ಹಾಗೂ ಕುಟುಂಬ ವರ್ಗದವರು ಶಾಲು ಹಾರ ಪೇಟ ಹಾಕಿ ಸನ್ಮಾನಿಸಿದರು.
ಎಇಇ ಲಿಂಗರಾಜು, ರಂಗಸ್ವಾಮಿ, ಸಂತೋಷ್ ಕುಮಾರ್, ಶ್ರೀನಿಧಿ, ಲೆಕ್ಕಾಧಿಕಾರಿ ವಿನೋದ್ ಕುಮಾರ್, ಆಂತರಿಕ ಲೆಕಾಧಿಕಾರಿ ಪ್ರಸನ್ನ, ನೌಕರರ ಸಂಘದ ಅಧ್ಯಕ್ಷ ರೇವಣ್ಣ, ಕಾರ್ಯಕಾರಿ ಸಮಿತಿ ಸದಸ್ಯ ಮಹದೇವಯ್ಯ, ಗುತ್ತಿಗೆದಾರ ಸಂಘದ ಅಧ್ಯಕ್ಷ ನಾಗರಾಜು, ಹಾಗೂ ಎಇಇ ರಾಜು ಅವರ ತಂದೆ ಮಾದಯ್ಯ ಇನ್ನಿತರರು ಇದ್ದರು.
ನಿಂಪುವಾರ್ತೆ
For more information about this story, visit our website regularly. We will keep you updated as more details emerge about this development. Follow Ra. Power 28 for all the latest news from Karnataka, covering politics, sports, crime, health, and more.