ಹನೂರು - ಅಕ್ಟೋಬರ್ ತಿಂಗಳಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಿರುವ ಅಂತರಾಷ್ಟ್ರೀಯ ವಿಶ್ವ ಬೌದ್ಯಾ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಹನೂರು ಭಾಗದ ಎಲ್ಲಾ ಜನರು ಸಹಕರಿಸಬೇಕೆಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ  ಹಾಗೂ ವಿಶ್ವ ಬೌದ್ಧ ಸಮ್ಮೇಳನ ಆಚರಣೆ ಸಮಿತಿ ಅಧ್ಯಕ್ಷರು ಆಗಿರುವ ಎಆರ್ ಕೃಷ್ಣಮೂರ್ತಿ ತಿಳಿಸಿದರು

ಹನೂರು ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಹನೂರು ತಾಲೂಕು ಎಲ್ಲ ಗ್ರಾಮಗಳ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು

ಬಾಬಾ ಸಾಹೇಬರ ಆಸೆಯ ದಂತೆ ನಡೆಯಲಿರುವ ಈ ಬೌದ್ಧ ಸಮ್ಮೇಳನ ಸಮುದಾಯದ ಎಲ್ಲರಲ್ಲೂ ಅರಿವು ಮತ್ತು ಜಾಗೃತಿ ಮೂಡಿಸಲಿದೆ ಬದುಕಿಗೆ ಹೊಸ ದಿಕ್ಕನ್ನು ತೋರಿಸಲಿದೆ ಎಂದು ಅವರು ತಿಳಿಸಿದರು

ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಅನುಯಾಯಿಗಳು ಈ ಒಂದು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ

ಪ್ರಥಮ ಸಮ್ಮೇಳನ ಕಳೆದ ವರ್ಷ ಮೈಸೂರಿನಲ್ಲಿ ಆಯೋಜಿಸಲಾಗಿತ್ತು ಎರಡನೇ ಅವಧಿಗೆ ನಡೆಯುತ್ತಿರುವ ಈ ಸಮ್ಮೇಳವು ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದು ಎಲ್ಲಾ ಸಮುದಾಯಗಳ ಎಲ್ಲಾ ಸಂಘಟನೆಗಳ ಜನರ ಸಂಪೂರ್ಣ ಸಹಕಾರದೊಂದಿಗೆ ಈ ಒಂದು ಸಮ್ಮೇಳನವು ಯಶಸ್ವಿಯಾಗಬೇಕು ಎಂದು ನೆರೆದಿದ್ದ ಜನರಲ್ಲಿ ಅವರು ಮನವಿ ಮಾಡಿಕೊಂಡರು

ಸಮ್ಮೇಳನ ಯಶಸ್ವಿಗಾಗಿ ಸುಮಾರು 12 ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದ ಅವರು ಈ ಒಂದು ಸಮ್ಮೇಳನಕ್ಕೆ ಕೋಟ್ಯಾಂತರ ರೂಗಳ ವೆಚ್ಚ ಆಗಲಿದ್ದು ಬೌದ್ಧ ಅನುಯಾಯಿಗಳು ಹಾಗೂ ಅಂಬೇಡ್ಕರ್ ಅಭಿಮಾನಿಗಳು ಹಾಗೂ ಸಮಸ್ತ ಜನತೆ ಈ ಒಂದು ಕಾರ್ಯಕ್ರಮದ ಯಶಸ್ವಿಗಾಗಿ ತಮ್ಮ ಕೈಲಾದ ಆರ್ಥಿಕ ಸಹಾಯಕ್ಕೆ ಸ್ವಯಂ ಪ್ರೇರಿತರಾಗಿ ಮುಂದಾಗಬೇಕೆಂದು ಅವರು ಸಭೆಯಲ್ಲಿ ಕರೆ ನೀಡಿದರು

ಇಂದು ನಡೆದ ಸಭೆಯಲ್ಲಿ ಬೌದ್ಧ ದಿಕ್ಕುಗಳಾದ ಮನೋರಕಿತ ಬಂತೇಜಿ ಸುಗತಪಾಲ ಬಂತ್ತೇಜಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ದೊಡ್ಡಿಂದುವಾಡಿ ಸಿದ್ದರಾಜು ಹಾಗೂ ಮುಖಂಡರಾದ ವೆಂಕಟರಮಣ ಸ್ವಾಮಿ ಕೃಷ್ಣಮೂರ್ತಿ ನಾಗಯ್ಯ ಬಾಲರಾಜು ಸೇರಿದಂತೆ ಹನೂರು ಭಾಗದ ಎಲ್ಲಾ ಗ್ರಾಮಗಳ ಮುಖಂಡರುಗಳು ಭಾಗವಹಿಸಿದ್ದರು

ವರದಿ- ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.