ಕೊಳ್ಳೇಗಾಲ. ತಾಲ್ಲೂಕಿನ ಮುಳ್ಳೂರು ಗ್ರಾಮದಿಂದ 1.5 ಕೋಟಿ ವೆಚ್ಚದಲ್ಲಿ 4.83 ಕೀ.ಮೀ ಉದ್ದದ ರಸ್ತೆ ಡಾಂಬರೀಕರಣಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಇಂದು ಚಾಲನೆ ನೀಡಿದರು.
ಮುಳ್ಳೂರು ಗ್ರಾಮದಲ್ಲಿ ಶಾಸಕರ ಅನುದಾಡಿ 1.5 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಗುದ್ದಲಿಪೂಜೆ ನಡೆಸಿ ಬಳಿಕ ಮಾತನಾಡಿ, ಗುಣಮಟ್ಟದ ಕಾಮಗಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂಧರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ರಾಜೇಂದ್ರ, ಮುಳ್ಳೂರು ಗ್ರಾ.ಪಂ. ಅಧ್ಯಕ್ಷರು ಕಮಲಮ್ಮ, ಉಪಾಧ್ಯಕ್ಷರು ದೊರೆರಾಜು, ಕಸಬಾ ಪಿಎಸಿಸಿ ನಿರ್ದೇಶಕರು ಮಂಜುನಾಥ್, ನಾಡಗೌಡ್ರು ಇಂದ್ರೇಶ್, ಅಂಗಡಿ ಸಿದ್ದಣ್ಣ, ಎಂ.ಕೆ.ಪುಟ್ಟಸ್ವಾಮಿ, ಸಿದ್ದಪ್ಪಸ್ವಾಮಿ, ನಂಜುಂಡಸ್ವಾಮಿ, ಶೇಖರ್, ಮಾದೇಶ್, ಬಾಬು, ಲೋಕೇಶ್, ಅನಿಲ್, ಸಿದ್ದಪ್ಪ, ರಾಚೇಗೌಡ, ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್ ಇಂಜಿನಿಯರ್ ಸುರೇಂದ್ರ, ಜಯಶ್ರೀ, ಗುತ್ತಿಗೆದಾರ ವಿನಯ್,ಹಾಗೂ ಇತರರು ಇದ್ದರು.
ವರದಿ : ನಿಂಪು ಬ್ರದರ್ಸ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.