ಕೊಳ್ಳೇಗಾಲ: ಕ್ಷೇತ್ರ ವ್ಯಾಪ್ತಿಯ ಮಧ್ಯರಂಗನಾಥಸ್ವಾಮಿ ದೇವಾಲಯಕ್ಕೆ ಶಾಸಕ ಎಂ.ಆರ್.ಮಂಜುನಾಥ್ ರವರು ಭೇಟಿ ನೀಡಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.

ತಾಲೂಕಿನ ಸತ್ತೆಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವಂತಹ ಮಧ್ಯರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು ಕಾಮಗಾರಿಯನ್ನು ಯಾವುದೇ ಲೋಪದೋಷವಾಗದಂತೆ ಅಚ್ಚುಕಟ್ಟಾಗಿ ನಿರ್ವಹಿಸಿ ಮುಂದಿನ ಜನವರಿ ತಿಂಗಳೊಳಗೆ ಅಂತ್ಯಗೊಳಿಸಿ ಬರುವಂತಹ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಿಕೊಡುವುದುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಸತ್ತೇಗಾಲ ಗ್ರಾ.ಪಂ.ಅಧ್ಯಕ್ಷ ರಾದ ಮಲ್ಲೇಶ್, ಚಾಮುಲ್ ನಿರ್ದೇಶಕರಾದ ಮಹಾದೇವಪ್ರಸಾದ್, ಪ್ರಭುಸ್ವಾಮಿ, ಜೇಸಿಮ್ ಪಾಷ, ಜಯರಾಮು, ಗೋಪಾಲ್ ನಾಯಕ, ಶಾಂತರಾಜು, ಚಿನ್ನಸ್ವಾಮಿ, ಶಿವು ಇತರರು ಇದ್ದರು.

ವರದಿ: ನಿಂಪು ಬ್ರದರ್ಸ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.