ಕೊಳ್ಳೇಗಾಲ. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ಚಾ.ನಗರ ಜಿಲ್ಲಾಧ್ಯಕ್ಷರಾಗಿ ಶಬ್ಬೀರ್ ಪಾಷರವರನ್ನು ನೇಮಕ ಮಾಡಿ ಆದೇಶಪತ್ರವನ್ನು ಸಂಘಟನೆಯ ರಾಜ್ಯಾಧ್ಯಕ್ಷರು ಪಿ.ಕೃಷ್ಣೇಗೌಡ್ರು ನೀಡಿದರು.
ನಂತರ ನೂತನ ಜಿಲ್ಲಾಧ್ಯಕ್ಷ ಶಬ್ಬೀರ್ ಪಾಷ ಮಾತನಾಡಿ, ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ್ದ ನಮ್ಮ ಸಂಘಟನೆಯ ಎಲ್ಲಾ ವರಿಷ್ಠರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯ ಎಲ್ಲಾ ತಾಲ್ಲೂಕು ಮಟ್ಟದ ಪದಾಧಿಕಾರಿಗಳನ್ನು ನೇಮಕ ಮಾಡುವ ಮುಖಾಂತರ ಕನ್ನಡಿಗರ ರಕ್ಷಣೆ ಹಾಗೂ ಕನ್ನಡ ಭಾಷೆಯ ಉಳಿವಿಗೆ ಶ್ರಮಿಸುವುದಾಗಿ ಹೇಳಿದರು.
ಈ ಸಂಧರ್ಭದಲ್ಲಿ ಚಾ.ನಗರ ಮಹಿಳಾ ಘಟಕ ಜಿಲ್ಲಾಧ್ಯಕ್ಷರು ಭಾಗ್ಯ, ಮಳವಳ್ಳಿ ತಾಲ್ಲೂಕು ಅಧ್ಯಕ್ಷರು ಮೊಹಮ್ಮದ್ ಇರ್ಫಾನ್ ವಾರ್ಸಿ, ಗೌರವ ಸದಸ್ಯರು ತೌಸೀಫ್ ಬೇಗ್, ಮಹಮ್ಮದ್ ನವಾಜ್ ವಾರಸಿ, ಕಾರ್ಯಕರ್ತರು ಹಾಗೂ ಇತರರು ಹಾಜರಿದ್ದರು
