
ನಾವು ಮತ್ತು ನಮ್ಮ ಟೀಚರು
🤓ನಾ 7th ಓದುವಾಗ ಮೊದಲ ಗಣಿತ ಟೆಸ್ಟ್. ಏನಿಲ್ಲ 25 ಅಂಕಗಳ ಟೆಸ್ಟಿಗೆ ಪೂರಾ 25 ಸೊನ್ನೆ ತಗೊಂಡಿದ್ದೆ. ಗಣಿತ ಟೀಚರ್ ಲಲಿತಾ ಮ್ಯಾಡಮ್ ಸಹ ಅಸ್ಟೆ ನನ್ನ ಸಾಲವನ್ನೇನು ಉಳಿಸಿಕೊಳ್ಳಲಿಲ್ಲ. ಸೀರೆಯ ಸೆರಗನ್ನು ತೆಗೆದು ಸಿಗಿಸಿದವರೇ “ಎಲ್ಲಿ ಎರಡೂ ಕೈ ನೀಡು” ಎಂದರು. ಮತ್ತೆ ಒಂದೇ ಕೈಯಿಗೆ ಮೋಸ ಆಗಬಾರದಲ್ಲ. ಎರಡೂ ಕೈಯಿಗೂ ಸೇರಿಸಿ 25 ಸೊನ್ನೆಗೆ ಭರ್ತಿ 25 ಏಟು ಕೊಟ್ಟು ಕಳಿಸಿದರು. ಅದನ್ನ ಬಂದು ಅಣ್ಣನ ಹತ್ತಿರ ಕೈ ತೋರಿಸಿ ಹೇಳಿದೆ. “ನಾಚಿಕೆ ಆಗೋಲ್ವಾ ಅದನ್ನ ಬೇರೆ ನಗುತ್ತಾ ಹೇಳ್ತಾ ಇದ್ದೀಯಲ್ಲ?” ಎಂದು ಅವನೂ ಉಗಿದ🏑🤪
📚ವಿಜ್ಞಾನ ತರಗತಿ, ಪಾಠದ ಮಧ್ಯದಲ್ಲಿ ಪ್ರಕಾಶ್ ಸರ್ ಕೇಳಿದರು “ನಾವು ಉಸಿರಾಡುವುದು ಯಾವ ಅನಿಲ?”. “ಆಕ್ಸಿಜನ್….” ಹೇಳಲು ಬಾಯಿ ತೆರೆದೆ ಅರ್ಧಕ್ಕೆ ಬಾಯಿ ಸ್ಟ್ರಕ್ ಆಯಿತು. ನಾನು ಆಕಳಿಸುತ್ತಿದ್ದೇನೆ ಎಂದುಕೊಂಡು ಅವರು ಎದ್ದುನಿಲ್ಲಿಸಿ ಬೈದರು. ಎಂತ ಬ್ಯಾಡ್ ಲಕ್😔 ಪಾಪ ನಾನು 🙆♀️
📙📖ಹಿಂದಿ textbook ಒಳಗೆ ಗೈಡ್ ಇಟ್ಟುಕೊಂಡು ಪಾಠ ಮಾಡುತ್ತಿದ್ದ ಹಿಂದಿ ಸರ್. ಹಿಂದಿ ಪುಸ್ತಕ ತಂದಿಲ್ಲವೆಂದು ನನ್ನನ್ನೂ ಮತ್ತಿಬ್ಬರನ್ನು ಆಚೆಗೆ ಹೋಗಿ ಕಾಲು ಒಳಗಡೆಯಿಂದ ಕಿವಿ ಹಿಡಿದು ನಿಂತುಕೊಳ್ಳಿ ಎಂದರು. ನನ್ನ ಸುಂದರಿ ಫ್ರೆಂಡ್ ಮೊದಲ ಬೆಂಚ್ ನಲ್ಲಿಯೇ ಕೂತಿದ್ದರಿಂದ ಅವಳು ಬುಕ್ ಇಲ್ಲದೆ ಕೂತಿದ್ದದ್ದು ಎಲ್ಲರಿಗೂ ಚೆನ್ನಾಗೇ ಕಾಣುತಿತ್ತು. ಆದರೂ ಅವಳನ್ನು ಆಚೆ ಕಳಸಲೇ ಇಲ್ಲ. ನಾನು 4-5 ನಿಮಿಷ ಕಾದೆ. ತಡೆಯಲಾಗಲಿಲ್ಲ. “ಸರ್, ಪಿಂಕಿ ಸಹ ಬುಕ್ ತಂದಿಲ್ಲ” ಎಂದೆ. ಸುಮ್ಮನೆ ನಿಲ್ಲಿಸಿದವರು, ಅದನ್ನು ಹೇಳಿದಮೇಲೆ ಬಂದು ಸರ್ರಿಯಾಗಿ ಕೊಟ್ಟರು. ಹೊಡೆದರೂ ಹೊಡೆಯಲಿ ಪರವಾಗಿಲ್ಲ ಆದ್ರೆ ಪಿಂಕಿಯನ್ನು ಆಚೆ ಕಳುಹಿಸಲೇ ಇಲ್ಲ. actually ದುಃಖಕರ ವಿಷಯ ಅಂದ್ರೆ ಅದು😕👊.
🛵ತಾತ ಸ್ಕೂಟರಿನಲ್ಲಿ ಊರಿಗೆ ಬಂದದ್ದು ನೋಡಿ ಖುಷಿಯಿಂದ 3ನೇ ಕ್ಲಾಸು ಓದುತ್ತಿದ್ದ ನಾನು, ನನಗಿಂತ ಚಿಕ್ಕವನಾದ ಪಕ್ಕದ ಮನೆ ಮಂಜು (ಇನ್ನಿಬ್ಬರು ಇದ್ದರು ಹೆಸರು ನೆನಪಿಲ್ಲ)ಎಲ್ಲರೂ ಓಡಿಬಂದೆವು🏃♀️. ಓಡುವ ರಭಸದಲ್ಲಿ ಮಂಜು ನನ್ನನ್ನ ತಳ್ಳಿಬಿಟ್ಟ. ಬಿದ್ದು ಕಾಲು ತರಚಿ ರಕ್ತ ಬರಲಾರಂಭಿಸಿತು🤸♂️. ಅಪ್ಪನ ಹತ್ತಿರ ಸತ್ಯ ಹೇಳಿದರೆ, ನಮ್ಮೆಲ್ಲರಿಗೂ ಸೇರಿಸಿ ಕಚ್ಚಾಯ ಬೀಳುತ್ತವೆ. So… ಇಡೀ ಶಾಲೆಗಿದ್ದ ಒಬ್ಬರೇ ಮೇಸ್ಟ್ರು “ಚನ್ನಂಗೆರೆ ಮಾಸ್ಟ್ರು ಹೊಡೆದರು” ಎಂದು ಹೇಳಿಬಿಟ್ಟೆ. ಅವರು ಕೊಟ್ಟರೆ ಸರಿಯಾಗೇ ಕೊಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದ್ದರಿಂದ, ಅದನ್ನೇ ನಂಬಿಕೊಂಡ ಅಪ್ಪ, “ನೋಡಿ ಕ್ಲಾಸ್ ಲೀಡರ್ ಆಗಿರುವ ನನ್ನ ಮಗಳನ್ನೇ ಹಿಂಗೆ ರಕ್ತ ಬರುವ ಹಂಗೆ ಹೊಡೆದಿದ್ದಾರೆ” ಎಂದು ಬೇರೆಯವರ ಹತ್ತಿರ ಹೇಳುತ್ತಿದ್ದದ್ದು ಕೇಳಿ ನನಗೆ ನಗು ಬರ್ತಾ ಇತ್ತು. ‘ಪಾಪ ಸರ್ರು’ 🙏😜
✍🏻 ರಶ್ಮಿ ಕೆ. ವಿಶ್ವನಾಥ್
ಮೈಸೂರು