
ಹನೂರು : ವಿಚಿತ್ರ ರೋಗಕ್ಕೆ ಜಾನುವಾರು ಬಲಿ
-ಒಂದರಿಂದ ಮತ್ತೊಂದಕ್ಕೆ ಹರಡುತ್ತಿರುವ ರೋಗ
-ಬೆಳೆ ನಷ್ಟದ ನಡುವೆ ರೈತರು ಕಂಗಾಲು
ಜಾನುವಾರುಗಳು ವಿಚಿತ್ರ ರೋಗಕ್ಕೆ ಬಲಿಯಾಗುತ್ತಿರುವ ಘಟನೆ ಹನೂರು ತಾಲೂಜಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ನಡೆದಿದೆ.
ಕುರಟ್ಟಿ ಹೊಸೂರು ಗ್ರಾಮದ ರೈತ ಮುನಿಸಿದ್ದ ಎಂಬವರಿಗೆ ಸೇರಿದ ಮೂರು ಕರುಗಳ ಮೈಮೇಲೆ ಗುಳ್ಳೆಗಳು ಬಂದು ಸಾವನ್ನಪ್ಪಿವೆ.
ಕಳೆದ ಹಲವಾರು ದಿನಗಳಿಂದ ಜಾನುವಾರುಗಳಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದು ಗಂಟುಗಳು ಬಂದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿವೆ. ಹಸುಗಳಿಗಿಂತ ಕರುಗಳಿಗೆ ಬೇಗನೆ ಈ ರೋಗ ಹರಡುತ್ತಿದ್ದು ಈಗಾಗಲೇ ರೈತ ಮುನಿಸಿದ್ದ ಶೆಟ್ಟಿ ಅವರಿಗೆ ಸೇರಿದ ಮೂರು ಕರುಗಳು ಸಾವನ್ನಪ್ಪಿದ್ದು 4 ದಿನಗಳ ಹಿಂದೆ ಕೂಡ ಒಂದು ಕರು ಈ ಕಾಯಿಲೆಗೆ ಬಲಿಯಾಗಿದೆ.
ಕಾಯಿಲೆ ತಡೆಗಟ್ಟಿ ಪರಿಹಾರ ಕೊಡಿ:
ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಗುಳ್ಳೆ ಮಾದರಿ ಅಂಟುರೋಗವು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಜಾನುವಾರುಗಳ ಸಾವು ತಡೆಗಟ್ಟಬೇಕು ಜೊತೆಗೆ ಸಾವನ್ನಪ್ಪಿರುವ ಜಾನುವಾರು ಕರುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ವಿಚಿತ್ರ ಕಾಯಿಲೆ ಹೈನುಗಾರಿಕೆಗೆ ಕುತ್ತು : ಮಳೆ ಇಲ್ಲದೆ ಕಂಗಾಲಾಗಿರುವ ರೈತನಿಗೆ ಹೈನುಗಾರಿಕೆ ಹೆಚ್ಚು ಒತ್ತು ನೀಡುವ ಸಂದರ್ಭದಲ್ಲಿ ವಿಚಿತ್ರ ಕಾಯಿಲೆಯಿಂದ ಜಾನುವಾರುಗಳು ಸಾವನ್ನಪ್ಪಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಹೀಗಾಗಿ ಸಂಬಂಧಪಟ್ಟ ಪಶು ಸಂಗೋಪನ ಇಲಾಖೆ ಅಧಿಕಾರಿಗಳು ವಿಚಿತ್ರ ಕಾಯಿಲೆಯಿಂದ ಸಾವನ್ನಪ್ಪುತ್ತಿರುವ ಜಾನುವಾರುಗಳ ಸಂರಕ್ಷಣೆಗೆ ಮುಂದಾಗಬೇಕು ಜೊತೆಗೆ ರೈತರಿಗೆ ಉಂಟಾಗುತ್ತಿರುವ ನಷ್ಟ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ರೈತ ಮುನಿಸಿದ್ದ ಒತ್ತಾಯಿಸಿದ್ದಾರೆ.
ವರದಿ : ನಿಂಪು ರಾಜೇಶ್