
ಕೊಳ್ಳೇಗಾಲ : ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ ಸಿಸಿ ಚರಂಡಿ ಹಾಗೂ ರಸ್ತೆ ಕಾಮಗಾರಿಗೆ ಶಾಸಕ ಎಂ. ಆರ್ ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.
ಹನೂರು :- ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ಗ್ರಾಮದಲ್ಲಿ ಕಾವೇರಿ ನದಿಗೆ ತೆರಳುವ ಈಶ್ವರನ ದೇವಸ್ಥಾನದ ತನಕ ಸಿಸಿ ಚರಂಡಿ ಹಾಗೂ ರಸ್ತೆ ನಿರ್ಮಾಣ ಮಾಡುವ ಕಾರ್ಯಕ್ಕೆ ಕ್ಷೇತ್ರದ ಶಾಸಕ ಎಂ ಆರ್ ಮಂಜುನಾಥ್ ರವರು ಭೂಮಿ ಪೂಜೆ ನೆರವೇರಿಸಿದರು.
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆ ಹಾಗೂ ಮಳೆ ಪರಿಹಾರ ಯೋಜನೆಯ ಅಡಿಯಲ್ಲಿ ಎರಡು ಕೋಟಿ ವೆಚ್ಚದಲ್ಲಿ ಮಾರಮ್ಮನ ದೇವಸ್ಥಾನದಿಂದ ಕಾವೇರಿ ನದಿ ಸಮೀಪದ ಈಶ್ವರನ ದೇವಸ್ಥಾನದ ತನಕ ಸಿ ಸಿ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಪಡಿಸಲು ಭೂಮಿ ಪೂಜೆ ನೆರವೇರಿಸಿ ನಂತರ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿದರು.
ಗ್ರಾಮದಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಶಾಸಕರನ್ನು ಬರ ಮಾಡಿಕೊಂಡು.
ಶಾಸಕ ಮಂಜುನಾಥ್ ರವರ 53 ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಸತ್ತೇಗಾಲದ ಗ್ರಾಮಸ್ಥರು ಬೃಹತ್ ಗಾತ್ರದ ಹಾರ ಹಾಕಿ ಕೇಕ್ ಕತ್ತರಿಸಿ ವಿಜೃಂಭಣೆಯಿಂದ ಆಚರಣೆ ಮಾಡಿದರು.
ಇದೇ ಸಮಯದಲ್ಲಿ ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲೇಶ್, ಉಪಾಧ್ಯಕ್ಷರಾದ ಸುವರ್ಣ, ಗ್ರಾಮ ಪಂಚಾಯಿತಿ ಸದಸ್ಯರು ಗಳಾದ ಕವಿತಾ, ದೇವಿಕಾ, ವಸಂತ, ನಾಗರಾಜು, ಚಿಕ್ಕವೆಂಕಟನಾಯ್ಕರು, ಗೋವಿಂದ, ಮರೀಲಿಂಗೇಗೌಡ, ಮಹದೇವ್, ಮಲ್ಲೇಶ್, ಉಮೇಶ್, ರಾಜೇಂದ್ರ, ಮಾಜಿ ಅಧ್ಯಕ್ಷರುಗಳಾದ ಶಾಂತಕುಮಾರಿ,ಕೆಂಪರಾಜು,ಪ್ರಭು,ಚೇತನ್ ಮಂಜೇಶ್ ಗೌಡ, ಹಾಗೂ ಗ್ರಾಮಸ್ಥರು ಇದ್ದರು…
ವರದಿ : ನಿಂಪು ರಾಜೇಶ್
![/* Change button hover color to red */
button:hover,
.wp-block-button__link:hover,
input[type="submit"]:hover {
background-color: red !important;
color: #fff !important; /* Makes text white for contrast */
}](https://rapower28.com/wp-content/uploads/2025/08/WhatsApp-Image-2025-08-23-at-7.28.55-AM-2-1024x454.jpeg)













