/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಮಾನಸ ಶಿಕ್ಷಣ ಸಂಸ್ಥೆಯ ಬಾಬು ಅವರಿಗೆ ದೊಡ್ಡಿಂದುವಾಡಿಯಲ್ಲಿ ಸನ್ಮಾನ ಹಾಗೂ ನಾಡಪ್ರಭು ಕೆಂಪೇಗೌಡ ನಾಮಫಲಕ ಅನಾವರಣ
Image

ಮಾನಸ ಶಿಕ್ಷಣ ಸಂಸ್ಥೆಯ ಬಾಬು ಅವರಿಗೆ ದೊಡ್ಡಿಂದುವಾಡಿಯಲ್ಲಿ ಸನ್ಮಾನ ಹಾಗೂ ನಾಡಪ್ರಭು ಕೆಂಪೇಗೌಡ ನಾಮಫಲಕ ಅನಾವರಣ

ನಾಡಪ್ರಭು ಕೆಂಪೇಗೌಡರ ನಾಮಫಲಕ ಹಾಗೂ ಭಾವಚಿತ್ರ ಅನಾವರಣ

ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆ ಗ್ರಾಮದ ಒಕ್ಕಲಿಗರ ಅಂಗಡಿಮನೆ ಬೀದಿಯಲ್ಲಿ ನಾಡಪ್ರಭು ಕೆಂಪೇಗೌಡರ ಹೆಬ್ಬಾಗಿಲಿನ ಎರಡನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ನಾಡಪ್ರಭು ಕೆಂಪೇಗೌಡರ ಬಳಗದ ವತಿಯಿಂದ ಕೆಂಪೇಗೌಡರ ನಾಮಫಲಕ ಮತ್ತು ಭಾವಚಿತ್ರ ಅನಾವರಣ ಮಾಡಲಾಯಿತು.

ಕೆಂಪೇಗೌಡರ ಭಾವಚಿತ್ರಕ್ಕೆ ಗ್ರಾಮದ ಮುಖಂಡರಾದ ಕುಮಾರ್ ಗೌಡರವರು ಪುಷ್ಪಾರ್ಚನೆ ಮಾಡಿ ನಾಡಿಗೆ ಕೆಂಪೇಗೌಡರು ನೀಡಿರುವ ಕೊಡುಗೆಗಳು ಮಾಡಿರುವ ಸಾಧಾರಣೆ ಕೆಲಸಗಳನ್ನು ಸ್ಮರಿಸಿದರು.

ನಾಡಪ್ರಭು ಕೆಂಪೇಗೌಡರ ಹೆಬ್ಬಾಗಿಲಿನ ನಿರ್ಮಾತೃಗಳಾದ ಗ್ರಾಮದ ಮಾನಸಿ ಶಿಕ್ಷಣ ಸಂಸ್ಥೆಯ ಬಾಬು.ಕೆ ರವರನ್ನು ಕೆಂಪೇಗೌಡರ ಬಳಗದ ವತಿಯಿಂದ ಅಂಗಡಿ ಮನೆ ಬೀದಿಯ ನಿವಾಸಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಬುರವರು ನಾಡಪ್ರಭು ಕೆಂಪೇಗೌಡರ ಉದಾತ್ತ ವ್ಯಕ್ತಿತ್ವ ಜನಪರ ಕಾಳಜಿ ಆದರ್ಶಗಳನ್ನು ಯುವಜನತೆ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಸಿ ರಾಜು, ಕೃಷ್ಣಗೌಡ, ರವಿ, ಮೆಡಿಕಲ್ ಮಾದೇಶ, ಡಿ ಮಾದೇಶ, ಲಿಖಿತ್, ಪ್ರೀತಮ್, ಏರ್‌ಟೆಲ್ ನಾಗೇಂದ್ರ, ಗೋಪಾಲ್. ಕೆಂಪೇಗೌಡ ಬಳಗದ ಪದಾಧಿಕಾರಿಗಳು ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

  • ನಿಂಪುವಾರ್ತೆ

Releated Posts

ಕೊಳ್ಳೇಗಾಲ: ಪೌರಕಾರ್ಮಿಕರಿಗೆ ಊಟ ಬಡಿಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ಸಮಾಜದಲ್ಲಿ ಕೊಳಕು ಮುಕ್ತ ಪ್ರದೇಶವಾಗಲು ಪೌರಕಾರ್ಮಿಕರು ಮುಖ್ಯ ಕಾರಣವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹೇಳಿದರು. ಪಟ್ಟಣದ ಸಿಡಿಎಸ್ ಭವನದಲ್ಲಿ ಬುಧವಾರ ಪೌರ…

ByByN Rajesh Feb 11, 2026

ಕೊಳ್ಳೇಗಾಲ ನಗರಸಭೆ – ಜಿಲ್ಲಾಧಿಕಾರಿ ಶ್ರೀ ರೂಪ ಅವರಿಂದ ಉಳಿತಾಯ ಬಜೆಟ್ ಮಂಡನೆ

ಕೊಳ್ಳೇಗಾಲ ನಗರಸಭೆಯ ೨೦೨೬-೨೭ನೇ ಸಾಲಿನ ಬಜೆಟ್‌ನ ಪಕ್ಷಿ ನೋಟ ಕೊಳ್ಳೇಗಾಲ, ಫೆ, ೧೦- ಕೊಳ್ಳೇಗಾಲ ನಗರಸಭೆಯ ಸಭಾಂಗಣದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಫೆ.೧೦…

ByByN Rajesh Feb 10, 2026

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಅಯ್ಕೆ

ಕೊಳ್ಳೇಗಾಲ. ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ 8…

ByByN Rajesh Feb 9, 2026

ಕೊಳ್ಳೇಗಾಲ : ಗ್ಯಾರೆಂಟಿ ಯೋಜನೆಗಳಿಂದ ನವ ಕರ್ನಾಟಕ ನಿರ್ಮಾಣ – ಶಾಸಕ ಎ.ಆರ್.ಕೃಷ್ಣಮೂರ್ತಿ

ಸರ್ಕಾರದ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳು ನವಕರ್ನಾಟಕ ನಿರ್ಮಾಣಕ್ಕೆ ಸಹಕಾರಿ: ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಕೊಳ್ಳೇಗಾಲ. ರಾಜ್ಯಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗಾಗಿ…

ByByN Rajesh Jan 17, 2026

Leave a Reply

Your email address will not be published. Required fields are marked *

Scroll to Top