/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಸಾಹಿತ್ಯ
  • ಲೆಕ್ಕಾಚಾರವೇ ಇಲ್ಲಿ….ಯುವ ಸಾಹಿತಿ ಕೆ.ಅನುರಾಧ ಸಿಂಗನಲ್ಲೂರು ಅವರ ಲೇಖನ
Image

ಲೆಕ್ಕಾಚಾರವೇ ಇಲ್ಲಿ….ಯುವ ಸಾಹಿತಿ ಕೆ.ಅನುರಾಧ ಸಿಂಗನಲ್ಲೂರು ಅವರ ಲೇಖನ

ಲೆಕ್ಕಾಚಾರವೇ ಇಲ್ಲಿ

ನಮ್ಮದು ವೈವಿಧ್ಯಮಯ ದೇಶ
ಹೇಳಲು ಎಷ್ಟೊಂದು ಸೊಗಸು
ಹೇಳಿದವರೆಷ್ಟೊ ಕೇಳಿದವರೆಷ್ಟೋ…
ಆದ್ರೆನೂ ಬಂತು ಪ್ರಯೋಜನ
ಉಳ್ಳವರು ಮನಬಂದಂತೆ ಕುಣಿಯುವಾಗ
ಇಲ್ಲದವರು ಕೈ ಕಟ್ಟಿ ಕಣ್ಣು ಮುಚ್ಚಿಕುಳಿತುಕೊಳ್ಳುವರಾ….?
ಧರ್ಮ-ಧರ್ಮದೊಳಗೆ ನೊಕಿ
ಧರ್ಮವನ್ನು ಜಾತಿ ಯೊಳಗೆ ನೊಕಿ
ಜಾತಿ-ಜಾತಿಯನ್ನೊಳಗೆ ನೊಕಿ
ಜಾತಿಯೊಳಗೆ ಮನಸ್ಸತ್ವವನ್ನು ನೊಕಿ
ತಾನು ತನ್ನದೇ ಮಿಗಲೆಂದು
ಹುಚ್ಚೆದ್ದಿರುವಾಗ ಮಾಧ್ಯಮಗಳು
ಪ್ರಚಾರಗಿಟ್ಟಿಸಿಕೊಳ್ಳಲು ಹಿಂದೆ ಸರಿಯುವುದುಂಟೆ.
ರಾಜಕೀಯ ಒಗ್ಗರಣೆ ಹಾಕದಿರುವುದುಂಟೆ.
ಅದು ಸರಿ ಇದು ತಪ್ಪು
ಇದು ಸತ್ಯ ಅದು ಸುಳ್ಳು
ಎಲ್ಲಾ ಅವರವರ ಮೂಗಿನ ನೇರಕ್ಕೆ
ಇದೆಷ್ಟು ದಿನ?
ಸಂಧಾನ ಮಾಡಲು ಮಾಯಾವಿಯೂ ಇಲ್ಲಾ
ಸಹಿಸಿಕೊಳ್ಳಲು ಧರ್ಮರಾಯನೂ ಇಲ್ಲಾ
ತ್ಯಾಗ ಮಾಡಲು ಕರ್ಣನೂ..ಇಲ್ಲಾ..
ಇದು ಕಲಿಗಾಲವಾದರೂ..
ವಿಶ್ವಜ್ಙಾನಿಯ ಲೆಕ್ಕಾಚಾರವೇ ಇಲ್ಲಿ.
ಸಮಾನತೆಯ ಜ್ಯೋತಿಯೂ ಬಿರುಗಾಳಿಯಲ್ಲಿಯೂ
ತಂಗಾಳಿಯಾಗುವುದು.
ನಿಂದಿಸದವರೆಲ್ಲಾ ದೊಡ್ಡವರಲ್ಲ
ಅಧಿಕಾರದ ದರ್ಪವಷ್ಟೇ.
ಹೆಣ್ಣು ರಾಷ್ಟ್ರಪತಿಯಾಗುವಂತಿಲ್ಲ
ಮುಸ್ಲಿಂ ಹೆಣ್ಣು ದಸರಾ ಉದ್ಘಾಟಿಸುವಂತಿಲ್ಲ
ಸೌಜನ್ಯಳಿಗೆ ನ್ಯಾಯ ಕೊಡಿಸುವರಿಲ್ಲ,
ಲಿಂಗತ್ವಕ್ಕೆ ಚೌಕಟ್ಟು ಕೊಟ್ಟಿರುವವರು
ಧರ್ಮದ ಗುಂಗಿನಲ್ಲಿರುವವರು
ಮದವೇರಿದ ಅಯ್ಯೋಗರು
ಇದು ನಿಮ್ಮ ಸಂಸ್ಕೃತಿನಾ?
ಇದೇ ನಿಮ್ಮ ಧರ್ಮ ನಾ?
ಮಾನವೀಯತೆವಿಲ್ಲದ ನಿಮ್ಮ ಧರ್ಮ ಸಂಸ್ಕೃತಿಯ
ಮೂಟೆ ಕಟ್ಟಿ ಮೂಲೆಯಲ್ಲಿ ಹಾಕಿ
ಮನುಷ್ಯ ಮನುಷ್ಯತ್ವ ತಿಳಿದು
ಬದುಕದಿದ್ದರೆ ಪಶುಗಿಂತಲೂ ಕಡೆ
ಬದಲಾವಣೆ ಜಗದ ನಿಯಮ ನೆನಪಿರಲಿ

ಅನುರಾಧ ಕೆ ಸಿಂಗಾನಲ್ಲೂರು
ಯುವ ಸಾಹಿತಿ ಮತ್ತು ಕನ್ನಡ ಸಹಾಯಕ ಪ್ರಾಧ್ಯಾಪಕರು

Releated Posts

ಬಂಧು – ಖ್ಯಾತ ಕವಿಯಿತ್ರಿ ರಶ್ಮಿ ಕೆ ವಿಶ್ವನಾಥ್ ಅವರ ಅರ್ಥಪೂರ್ಣ ಲೇಖನ

ಬಂಧುಭಾಸ್ಕರನಿಗೂ ಮುಂಚೆ ತಾನೇ ಎದ್ದುಬಿಡುವಎತ್ತುಗಳನ್ನೂ ಎಬ್ಬಿಸಿ ಉಳಲಿಕ್ಕೋಗುವಬಿತ್ತು ಬೆಳೆದು ಹೊಟ್ಟೆಗಿಷ್ಟು ಕೂಳು ನೀಡುವಹಾಲು ಮೊಸರು ತುಪ್ಪಗಳನ್ನೂ ಕೊಡುವಈ ಹೆಮ್ಮೆಯ ರೈತನಿಗೊಮ್ಮೆ ನಮಿಸಿಬಿಡುವ ಹೊತ್ತು ಗೊತ್ತು…

ByByN Rajesh Dec 18, 2025

ಬಾಲ್ಯದ ಆಟ…ಆ ಹುಡುಗಾಟ..ಲೇಖಕಿ ರಶ್ಮಿ ಕೆ. ವಿಶ್ವನಾಥ್ ಅವರ ಲೇಖನ

ಬಾಲ್ಯದ ಆಟ…… ಆ ಹುಡುಗಾಟ ನನ್ನ ಬಾಲ್ಯದ ನೆನಪುಗಳು ಲೆಕ್ಕವಿಲ್ಲದಷ್ಟು. ಆದರೆ ಈಗಿನ ಮಕ್ಕಳಿಗೆ ಆ ಪುಣ್ಯವಿಲ್ಲ ಎನ್ನಬಹುದು. ಅದಕ್ಕೆ ಕಾರಣ ಪೋಷಕರೂ ಸಹ…

ByByN Rajesh Sep 15, 2025

ಓವರ್ ಟೂರಿಸಂ….ಖ್ಯಾತ ಬರಹಗಾರ್ತಿ ರಶ್ಮಿ ಕೆ ವಿಶ್ವನಾಥ್ ಅವರ ಕಿರುಲೇಖನ

ಪ್ರವಾಸಾತಿರೇಕ (ಓವರ್ ಟೂರಿಸಂ) ಪ್ರವಾಸ ಬೇಕಾ? ಹೌದು ಬೇಕೇ ಬೇಕು. ‘ಕೋಶ ಓದಿ ನೋಡು, ದೇಶ ಸುತ್ತಿ ನೋಡು’ ಅಂತ ಅಷ್ಟಿಲ್ಲದೇ ಹೇಳ್ತಾರಾ? ನಮ್ಮ…

ByByN Rajesh Sep 7, 2025

ನಾವು ಮತ್ತು ನಮ್ಮ ಟೀಚರ್ – ಯುವ ಸಾಹಿತಿ ರಶ್ಮಿ ಕೆ. ವಿಶ್ವನಾಥ್ ಅವರ ಅರ್ಥಪೂರ್ಣ ಲೇಖನ

ನಾವು ಮತ್ತು ನಮ್ಮ ಟೀಚರು 🤓ನಾ 7th ಓದುವಾಗ ಮೊದಲ ಗಣಿತ ಟೆಸ್ಟ್. ಏನಿಲ್ಲ 25 ಅಂಕಗಳ ಟೆಸ್ಟಿಗೆ ಪೂರಾ 25 ಸೊನ್ನೆ ತಗೊಂಡಿದ್ದೆ.…

ByByN Rajesh Sep 6, 2025

Leave a Reply

Your email address will not be published. Required fields are marked *

Scroll to Top