
ಕೊಳ್ಳೇಗಾಲ. ಗೌರಿ ಗಣೇಶ ಹಬ್ಬದ ಅಂಗವಾಗಿ ಇಂದು ಪೊಲೀಸ್ ಇಲಾಖೆ ವತಿಯಿಂದ ಪಥ ಸಂಚಲನ ಮಾಡಲಾಯಿತು.
ಪಟ್ಟಣ ಪೊಲೀಸ್ ಠಾಣೆ ಮುಂಭಾಗದಿಂದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಕವಿತಾ ರವರ ನೇತೃತ್ವದಲ್ಲಿ ಪಥಸಂಚಲನ ನಡೆಸಿದರು.
ಬಳಿಕ ಮಾತನಾಡಿದ ಅವರು, ಈ ಸಾರಿ ಜಿಲ್ಲೆಯಲ್ಲಿ ಒಟ್ಟು 1193 ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅದರಲ್ಲಿ 5 ಗಣಪತಿ ಅತೀ ಸೂಕ್ಷ್ಮ ಪ್ರದೇಶ ಹಾಗೂ 135 ಗಣಪತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ.
ಇದರ ವಿಸರ್ಜನೆ 1 ದಿನ 3 ದಿನ 5 ದಿನ ಹಾಗೂ 9 ದಿನ ದಿನಗಳಲ್ಲಿ ಹೆಚ್ಚು ಗಣಪತಿ ವಿಸರ್ಜನೆ ನಡೆಯಲಿದೆ. ಆ ವೇಳೆ ಪೊಲೀಸರು ಯಾವ ಯಾವ ರೀತಿ ಸಿದ್ಧತೆ ಮಾಡಿದ್ದಾರೆ ಹಾಗೂ ಅತ್ಯಂತ ಶಾಂತಿಯುತವಾಗಿ ನಡೆಯುತ್ತದೆ ಎಂಬ ನಂಬಿಕೆ ಜನರಲ್ಲಿ ಉಂಟಾಗಬೇಕೆಂಬ ಉದ್ದೇಶದಿಂದ ಇಂದು ಪಥಸಂಚಲನ ಮಾಡಲಾಗಿದೆ ಎಂದರು.
ಗಣಪತಿ ಹಬ್ಬವನ್ನು ಎಲ್ಲರೂ ಸಹಾ ಶಾಂತಿ ಸೌಹರ್ದತೆಯಿಂದ ನಡೆಸಬೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್ಪಿ ಧರ್ಮೇಂದ್ರ, ಸರ್ಕಲ್ ಇನ್ಸ್‌ಪೆಕ್ಟರ್ ಶಿವಮಾದಯ್ಯ,ವನರಾಜು ಹಾಗೂ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.
ವರದಿ : ನಿಂಪು ರಾಜೇಶ್