/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಕೊಳ್ಳೇಗಾಲ: ಮಂಟೇಸ್ವಾಮಿ ಪ್ರಾಧಿಕಾರ ರಚನೆಗೆ ಸಾಹಿತ್ಯ ಮಿತ್ರಕೂಟದಿಂದ ಮನವಿ
Image

ಕೊಳ್ಳೇಗಾಲ: ಮಂಟೇಸ್ವಾಮಿ ಪ್ರಾಧಿಕಾರ ರಚನೆಗೆ ಸಾಹಿತ್ಯ ಮಿತ್ರಕೂಟದಿಂದ ಮನವಿ

ಕೊಳ್ಳೇಗಾಲ: ಮಂಟೇಸ್ವಾಮಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರವನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸಾಹಿತ್ಯ ಮಿತ್ರಕೂಟದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಹಶಿಲ್ದಾರ್ ಮುಖೇನಾ ಸರಕಾರಕ್ಕೆ ಮನವಿ ಸಲ್ಲಿಸಿ ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಬಾಳಗುಣಸೆ ಮಂಜು ಮಾತನಾಡಿ, ಮಂಟೇಸ್ವಾಮಿ ನೀಲಗಾರ ಪರಂಪರೆ ಮತ್ತು ಜನಪದ ಕಾವ್ಯವು ಜಿಲ್ಲೆಯಷ್ಟಲ್ಲ, ಕನ್ನಡ ಸಂಸ್ಕೃತಿ ಮತ್ತು ವಿಶ್ವ ಜಾನಪದ ಲೋಕಕ್ಕೂ ಹೆಮ್ಮೆಯಾಗಿದ್ದು, 12ನೇ ಶತಮಾನ ಶರಣರ ವಚನ ಚಳುವಳಿಯ ಮುಂದುವರೆದ ಭಾಗವಾಗಿದೆ. ಈ ಪರಂಪರೆ ಜಾತ್ಯಾತೀತ, ಸಮಾನತೆಯ ಸಮಾಜ ನಿರ್ಮಾಣದ ಉದ್ದೇಶ ಹೊಂದಿದೆ.
ಏಪ್ರಿಲ್ 24, 2025 ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಟೇಸ್ವಾಮಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ.
ಈ ನಿರ್ಣಯವನ್ನು ಸ್ವಾಗತಿಸಿ, ಚಿಕ್ಕಲ್ಲೂರು ಸಿದ್ದಪ್ಪಾಜಿ ಮತ್ತು ಕುರುಬನಕಟ್ಟೆ ಲಿಂಗಯ್ಯ ಚನ್ನಯ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ತ್ವರಿತವಾಗಿ ಪ್ರಾರಂಭವಾಗಬೇಕೆಂದು ಒತ್ತಾಯಿಸಿದರು.

ಸರ್ಕಾರ ಈ ಪ್ರಾಧಿಕಾರದ ಮೂಲಕ ಮಠ ಪೀಠಾಧಿಪತಿಗಳ ಹಕ್ಕು, ಬಾಧ್ಯತೆ ಮತ್ತು ಆಚರಣೆಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮವನ್ನಿಟ್ಟಿದ್ದು ಪ್ರಾಧಿಕಾರದಿಂದ ಭಕ್ತರಿಗೆ ವಸತಿ, ಕುಡಿಯುವ ನೀರು, ಸ್ನಾನಘಟ್ಟ, ಶೌಚಾಲಯ, ಭೋಜನಾಲಯ ಉತ್ತಮ ರಸ್ತೆ ಮತ್ತು ಸಾರಿಗೆ ಸೌಲಭ್ಯ ಪ್ರವಾಸೋದ್ಯಮ, ಸ್ಥಳೀಯ ವ್ಯಾಪಾರ ಮತ್ತು ಗ್ರಾಮಗಳ ಅಭಿವೃದ್ಧಿಗೆ ಸಹಕಾರವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಸಾಹಿತ್ಯ ಮಿತ್ರಕೂಟದ ಅಧ್ಯಕ್ಷರು ಬಾಳಗುಣಸೆ ಮಂಜುನಾಥ್, ಪ್ರೋ.ದೊಡ್ಡಲಿಂಗೇಗೌಡ, ಸಾಹಿತಿಗಳು ಶಂಕನಪುರ ಮಹದೇವ, ಶಂಭುಲಿಂಗಸ್ವಾಮಿ, ಚನ್ನಮಾದೇಗೌಡ, ರಾಮಯ್ಯ, ಬಿಎಸ್ಐ ಅಧ್ಯಕ್ಷರು ರಾಚಪ್ಪಾಜಿ, ಲೋಕೇಶ್, ಶಿವಣ್ಣ, ಸುಂದರೇಶ್, ಅರುಣ್, ಕಾತ್ಯಾಯಿನಿ, ಸುಂದರಣ್ಣ, ಕುಮಾರಸ್ವಾಮಿ, ರಿಯಾಜ್ ಅಲಿ, ಗೋಪಾಲನಾಯಕ ಹಾಗೂ ಇತರರು ಇದ್ದರು.

ವರದಿ: ನಿಂಪು ರಾಜೇಶ್

Releated Posts

ಕೊಳ್ಳೇಗಾಲ: ಪೌರಕಾರ್ಮಿಕರಿಗೆ ಊಟ ಬಡಿಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ಸಮಾಜದಲ್ಲಿ ಕೊಳಕು ಮುಕ್ತ ಪ್ರದೇಶವಾಗಲು ಪೌರಕಾರ್ಮಿಕರು ಮುಖ್ಯ ಕಾರಣವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹೇಳಿದರು. ಪಟ್ಟಣದ ಸಿಡಿಎಸ್ ಭವನದಲ್ಲಿ ಬುಧವಾರ ಪೌರ…

ByByN Rajesh Feb 11, 2026

ಕೊಳ್ಳೇಗಾಲ ನಗರಸಭೆ – ಜಿಲ್ಲಾಧಿಕಾರಿ ಶ್ರೀ ರೂಪ ಅವರಿಂದ ಉಳಿತಾಯ ಬಜೆಟ್ ಮಂಡನೆ

ಕೊಳ್ಳೇಗಾಲ ನಗರಸಭೆಯ ೨೦೨೬-೨೭ನೇ ಸಾಲಿನ ಬಜೆಟ್‌ನ ಪಕ್ಷಿ ನೋಟ ಕೊಳ್ಳೇಗಾಲ, ಫೆ, ೧೦- ಕೊಳ್ಳೇಗಾಲ ನಗರಸಭೆಯ ಸಭಾಂಗಣದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಫೆ.೧೦…

ByByN Rajesh Feb 10, 2026

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಅಯ್ಕೆ

ಕೊಳ್ಳೇಗಾಲ. ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ 8…

ByByN Rajesh Feb 9, 2026

ಕೊಳ್ಳೇಗಾಲ : ಗ್ಯಾರೆಂಟಿ ಯೋಜನೆಗಳಿಂದ ನವ ಕರ್ನಾಟಕ ನಿರ್ಮಾಣ – ಶಾಸಕ ಎ.ಆರ್.ಕೃಷ್ಣಮೂರ್ತಿ

ಸರ್ಕಾರದ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳು ನವಕರ್ನಾಟಕ ನಿರ್ಮಾಣಕ್ಕೆ ಸಹಕಾರಿ: ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಕೊಳ್ಳೇಗಾಲ. ರಾಜ್ಯಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗಾಗಿ…

ByByN Rajesh Jan 17, 2026

Leave a Reply

Your email address will not be published. Required fields are marked *

Scroll to Top