
ಕೊಳ್ಳೇಗಾಲ : ಸೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕೊಳ್ಳೇಗಾಲ ಉಪವಿಭಾಗ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಆಯೋಜಿಸಲಾಗಿತ್ತು,
ಸೆಸ್ಕಾಂ ಆವರಣದಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಹೆಚ್ಚು ಸಮಸ್ಯೆಗಳ ಬಗ್ಗೆ ಯಾವುದೇ ದೂರುಗಳು ಬರಲಿಲ್ಲ.
ಸೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಬಸ್ಸುಮ್ ಅಪ್ಸಾ ರವರು ಮಾತನಾಡಿ ಕಳೆದ ವರ್ಷದ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ದೂರುಗಳ ಸಮಸ್ಯೆಗಳನ್ನು ಬಗೆ ಹರಿಸಲಾಗಿದೆ ಈ ಸಭೆಯಲ್ಲಿ ಅಷ್ಟೇನು ಸಮಸ್ಯೆಗಳು ಆಗಿಲ್ಲ, ಈಗಾಗಲೇ ಸಾರ್ವಜನಿಕರು ಹೇಳಿದ್ದ ಕೆಲಸಗಳನ್ನು ಮಾಡಿದ್ದೇವೆ ಈ ಸಭೆಯಲ್ಲಿ ವಿದ್ಯುತ್ ಪೂರೈಕೆಯ ಬಗ್ಗೆ ಕೆಲವರು ಕೇಳಿದ್ದಾರೆ ವಿದ್ಯುತ್ ಕಂಬಗಳನ್ನು ಅಳವಡಿಸಲು ಕೇಳಿದ್ದಾರೆ ನಮ್ಮ ಇಂಜಿನಿಯರ್ ಗಳಿಗೆ ಲೈನ್ ಮೆನ್ ಗಳಿಗೆ ಆದಷ್ಟು ಕೆಲಸ ಗಳನ್ನು ಮಾಡಿಸಿ ಕೊಡುತ್ತೇವೆ, ನಾವು ಇರುವುದೇ ಸಾರ್ವಜನಿಕರ ಸೇವೆಗಾಗಿ ಎಂದರು
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಂ.ರಾಜು, ಮಹಾದೇವ, ಗಣಪತಿ, ಹಾಗು ಇನ್ನಿತರರು ಇದ್ದರು
ವರದಿ : ನಿಂಪು ರಾಜೇಶ್