
ಕೊಳ್ಳೇಗಾಲ. ತವರು ಮನೆಗೆ ಹೋದ ಪತ್ನಿ ಕಾಣೆಯಾಗಿರುವ ಬಗ್ಗೆ ವ್ಯಕ್ತಿಯೊಬ್ಬ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾನೆ
ಜಕ್ಕಳ್ಳಿ ವಾಸಿ ಜ್ಞಾನಪ್ರಕಾಶ್ ಎನ್ನುವನ ಪತ್ನಿ ಜೋಸ್ಫಿನ್ ಬಿಲೇಜಿ(28) ಎಂಬಾಕೆ ಕಾಣೆಯಾಗಿರುವಳು.
ಇವರಿಬ್ಬರೂ ಕಳೆದ ಜೂನ್ 15 ರಲ್ಲಿ ವಿವಾಹವಾಗಿದ್ದು, ಕಳೆದ ತಿಂಗಳ 23 ರಂದು ಪ್ರಕಾಶಪಾಳ್ಯದಿಂದ ಜೋಸ್ಫಿನ್ ಬಿಲೇಜಿ ತಂದೆ ಡೋಮನಿಕ್ ರವರು ಜಕ್ಕಳ್ಳಿ ಬಂದು ಹಬ್ಬಕ್ಕೆ ಬರುವಂತೆ ತಿಳಿಸಿದ್ದರಿಂದ, ನನ್ನ ಹೆಂಡತಿಯನ್ನು ಪ್ರಕಾಶಪಾಳ್ಯಕ್ಕೆ ಕಳುಹಿಸಿದ್ದೆ.
. ಆದರೆ ಆಕೆಯ ತಂದೆ ಎರಡು ದಿನದ ನಂತರ ಪೋನ್ ಮಾಡಿ ಹಬ್ಬಕ್ಕೆ ಬರಲಿಲ್ಲ ಎಂದಾಗ ತಿಳಿದು ಎಲ್ಲಾ ಕಡೆ ಹುಡುಕಾಡಿ ಎಲ್ಲೂ ಸೀಗದ ಕಾರಣ ಇಂದು ತಡವಾಗಿ ಬಂದು ದೂರು ಸಲ್ಲಿಸಲಾಗಿದೆ.ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ನಾಪತ್ತೆಯಾಗಿರುವ ಗೃಹಿಣಿ ಪತ್ತೆಗೆ ಕ್ರಮ ಜರುಗಿಸಲಾಗಿದೆ.