
ಕೊಳ್ಳೇಗಾಲ : ಕೇಂದ್ರ ಸರ್ಕಾರ ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯನ್ನು ಕಾಮಗಾರಿ ನಡೆಸಿದ್ದು, ಈ ಹೆದ್ದಾರಿಯು ಕೊಳ್ಳೇಗಾಲ ಹೊರವಲಯದಲ್ಲಿ ಬೈಪಾಸ್ ಹೆದ್ದಾರಿ ಮೂಲಕ ಹಾದು ಹೋಗಿದೆ.
ಕಾಮಗಾರಿ ಮುಗಿದು ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು.
ಆದರೆ ಅನೇಕ ಮಾದ್ಯಮಗಳಲ್ಲಿ ಕಳಪೆ ರಸ್ತೆ ರಸ್ತೆಗಳು ಕುಳಿ ಬಿದ್ದಿವೆ ಎಂದು ವರದಿಗಳು ಬಂದಿದ್ದವು ಸೇತುವೆ ನಿರ್ಮಾಣ ಮಾಡುವಾಗ ಕೆರೆಗಳ ಮಣ್ಣು ಹಾಕುವಾಗ ಕೂಡ ಗ್ರಾವಲ್ ಮಣ್ಣು ಹಾಕಿ ಕೆರೆಯ ಮಣ್ಣು ಬೇಡ ಎಂಬ ಮಾತು ಕೇಳಿಬಂದಿತ್ತು ಆದರೂ ಕಾಮಗಾರಿ ಮಾಡಲಾಗಿತ್ತು.
ಆದರೆ ಕಳೆದ ಎರಡು ದಿನಗಳ ಹಿಂದೆ ಕೊಳ್ಳೇಗಾಲ ಹೊರವಲಯ ಉತ್ತಂಬಳ್ಳಿ ಮೇಲ್ಸೇತುವೆಯ ಸೈಡ್ ವಾಲ್ ಗೆ ಅಳವಡಿಸಲಾಗಿದ್ದ ಸಿಮೆಂಟ್ ಪರಿಕರಗಳು ಕುಸಿದಿದ್ದು ಇದರಿಂದ ನಾಗರೀಕರಲ್ಲಿ ಹಾಗೂ ವಾಹನ ಸವಾರರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಆದ್ದರಿಂದ ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಹಾಗೂ ಸೇತುವೆ ಪುನರ್ ನಿರ್ಮಾಣ ಆಗುವತನಕ ಸತ್ತೇಗಾಲ ಗ್ರಾಮದ ಮುಂದೆ ವಸೂಲಿ ಮಾಡುತ್ತಿರುವ ಟೋಲ್ ಸಂಗ್ರಹವನ್ನು ತಾತ್ಕಾಲಿಕವಾಗಿ ನಿಷೇಧ ಮಾಡಬೇಕೆಂದು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನ
ರೈತ ಸಂಘದ
ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಒತ್ತಾಯಿದ್ದಾರೆ.
ವರದಿ : ನಿಂಪು ರಾಜೇಶ್