
ಕೊಳ್ಳೇಗಾಲ: ಯುವ ಪೀಳಿಗೆಗೆ ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರದ ಮಹತ್ವವನ್ನು ತಿಳಿಸಲು ಸಿಐಡಿ ಅರಣ್ಯ ಸಂಚಾರಿ ದಳದಿಂದ ವನ್ಯಜೀವಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕೊಳ್ಳೇಗಾಲ ಪಟ್ಟಣದ ಎಸ್.ವಿ.ಕೆ ಬಾಲಕಿಯರ ಕಾಲೇಜಿನಲ್ಲಿ ಗುರುವಾರ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಿಐಡಿ ಅರಣ್ಯ ಸಂಚಾರಿ ದಳದ ಎಸ್‌ಐ ವಿಜಯರಾಜ್ ಅವರು ಭಾಗವಹಿಸಿ, ಬಳಿಕ ಮಾತನಾಡಿ
ವನ್ಯಜೀವಿಗಳು ಪರಿಸರ ಸಮತೋಲನದ ಪ್ರಮುಖ ಅಂಶಗಳು. ಅವುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಮಾಡುವುದು ಮತ್ತು ವ್ಯಾಪಾರ ಮಾಡುವುದನ್ನು ತಡೆಯುವುದು ಮಾತ್ರವಲ್ಲ, ಅವುಗಳ ತಾಣವನ್ನು ಸಂರಕ್ಷಿಸುವುದೂ ಅತಿ ಅವಶ್ಯಕ, ಎಂದರು.
ಈ ಕಾರ್ಯಕ್ರಮದಲ್ಲಿ ಎಸ್‌ವಿ.ಕೆ. ಕಾಲೇಜಿನ ಉಪಪ್ರಾಂಶುಪಾಲರಾದ ವಿಶ್ವನಾಥ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್ ,ಶಿಕ್ಷಕ ಮದ್ದೂರು ದೊರೆಸ್ವಾಮಿಸಿಐಡಿ ಅರಣ್ಯ ಸಂಚಾರಿ ದಳದ ಹೆಡ್ ಕಾನ್ಸ್ಟೆಬಲ್‌ಗಳು ಬಸವರಾಜು, ಜಮೀಲ್, ಲತಾ, ರಾಮಚಂದ್ರ, ಸ್ವಾಮಿ, ಕಾನ್ಸಟೇಬಲ್ ಬಸವರಾಜು ಇದ್ದರು.
ವರದಿ : ನಿಂಪು ರಾಜೇಶ್