
ಕೊಳ್ಳೇಗಾಲ ಸುದ್ದಿ
ಕರವೇ ತಾಲ್ಲೂಕು ಘಟಕ ಉದ್ಘಾಟನೆ ಹಾಗೂ ಸೇರ್ಪಡೆ ಕಾರ್ಯಕ್ರಮ
ಕರೆವೇ ಕೃಷ್ಣೆಗೌಡ ಬಣದ ಕರ್ನಾಟಕ ರಕ್ಷಣೆ ವೇದಿಕೆ ಸ್ವಾಭಿಮಾನ ಬಣ ಕಾರ್ಮಿಕ ರೈತ ಶೋಷಿತ ಹಾಗೂ ಕನ್ನಡಪರ ಸಂಘಟನೆ
ಕೊಳ್ಳೇಗಾಲ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಸೇರ್ಪಡೆ ಕಾರ್ಯಕ್ರಮವನ್ನು
ಪಟ್ಟಣದ ಗುರುಭವನದಲ್ಲಿ ಆಯೋಜಿಸಲಾಗಿತ್ತು,
ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಜನರು ಕರವೇ ಸ್ವಾಭಿಮಾನ ಬಣಕ್ಕೆ ಸೇರ್ಪಡೆಗೊಂಡರು
ಈ ಜಿಲ್ಲಾಧ್ಯಕ್ಷ ಶಬ್ಬೀರ್ ಫಾಷ ಮಾತನಾಡಿ ಕರ್ನಾಟಕ ರಕ್ಷಣೆ ವೇದಿಕ ಸ್ವಾಭಿಮಾನಿ ಬಣದ ಸಂಘಟನೆಯ ತಾಲ್ಲೂಕು ಘಟಕವನ್ನು ಉದ್ಘಾಟನೆ ಮಾಡಲಾಗಿದೆ, ನೆಲ ಜಲ, ನಾಡು ನುಡಿ ಭಾಷೆ ರಕ್ಷಣೆಯ ಉದ್ದೇಶವೇ ನಮ್ಮ ದ್ಯೇಯ ಕೊಳ್ಳೇಗಾಲ ಮತ್ತು ಚಾಮರಾಜನಗರ ಜಿಲ್ಲಾ ಘಟಕದಲ್ಲಿ ಕರವೇ ಸ್ವಾಭಿಮಾನಿ ಬಣವನ್ನು ಉತ್ತಮವಾಗಿ ಬೆಳೆಸುತ್ತೇವೆ,
ಹಾಗೂ ಸ್ವಾಭಿಮಾನಿ ಬಣಕ್ಕೆ ಉತ್ತಮ ಹೆಸರನ್ನು ತಂದು ಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ಕನ್ನಡಕ್ಕಾಗಿ ದುಡಿಯುತ್ತೇವೆ ಎಂದರು
ಜಿಲ್ಲಾ ಉಪಾಧ್ಯಕ್ಷ ಪ್ರದೀಪ್ (ಪಪ್ಪಿ) ಮಾತನಾಡಿ ನಾವು ಯಾವುದೇ ಸಂಘಟನೆಗಳನ್ನು ಮಾಡಿದರು ಅದು ಬಾಬಾ ಸಾಹೇಬ್ ಅಂಬೇಡ್ಕರ್ ರವರು ತೋರಿಸಿದ ಸಂಘಟನೆ ಮಾರ್ಗ ಮತ್ತು ಹಕ್ಕುಗಳಿಂದ ಮಾತ್ರ ನಾವೆಲ್ಲರು ಡಾ. ಬಿ ಆರ್. ಅಂಬೇಡ್ಕರ್ ರವರಿಗೆ ಅಭಾರಿಗಳಾಗಿರಬೇಕು ಅಂಬೇಡ್ಕರ್ ರವರು ಕೊಟ್ಟು ಸಂವಿಧಾನದ ಹಕ್ಕುಗಳಿಂದ ನಾವೆಲ್ಲರು ವಿದ್ಯಾವಂತರಾಗಿ ಸ್ವಾತಂತ್ರರಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದೇವೆ ನಾವೆಲ್ಲರೂ ಯಾವುದೇ ಸಮುದಾಯದವರಿರ ಬಹುದು ಎಲ್ಲರು ಕೂಡ ಸಮಾನ ಶೈಕ್ಷಣಿಕವಾಗಿ, ರಾಜಕೀಯವಾಗಿ, ಉದ್ಯೋಗದಲ್ಲಿ ಎಲ್ಲ ರಂಗದಲ್ಲಿಯೂ ಕೂಡ ಸಾಮಾಜಿಕ ಸಮಾನತೆಯನ್ನು ಪಡೆದುಕೊಂಡು ಸ್ವತಂತ್ರರಾಗಿ ಬದುಕುತ್ತಿದ್ದೇವೆ ಇದಕ್ಕೆಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ರವರೆ ಕಾರಣ ಅದಕ್ಕಾಗಿ ನಾವೆಲ್ಲರೂ ಡಾ ಬಿ. ಆರ್ ಅಂಬೇಡ್ಕರ್ ರವರಿಗೆ ಗೌರವ ವನ್ನು ಅರ್ಪಿಸಬೇಕು ಎಂದರು
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರು ಕರುನಾಡ ಶಬ್ಬೀರ್ ಪಾಷ, ಜಿಲ್ಲಾ ಉಪಾಧ್ಯಕ್ಷರು ಪ್ರದೀಪ್( ಪಪ್ಪಿ ). ಜಿಲ್ಲಾ ಗೌರವಾಧ್ಯಕ್ಷರು ನವೀನ್ ಕುಮಾರ್ ಸಿ. ಬಿ ಸೋಮಣ್ಣ ಸಿ. ಪ್ರಸಾದ್, ಮಹೇಶ್ ಎಸ್ ಮುಬಾರಕ್ ಅಹಮದ್, ಸಿದ್ಧಿಕ್ ಪಾಷಾ, ಕೊಳ್ಳೇಗಾಲ ತಾಲೂಕ ಅಧ್ಯಕ್ಷರು ಅಜ್ಗರ್ ಪಾಷ, ಉಪಾಧ್ಯಕ್ಷರು ತೌಸೀಫ್ ಬೇಗ್, ಉಪಾಧ್ಯಕ್ಷರು ಅಜ್ವತ್, ಕಾರ್ಯದರ್ಶಿ ನವೀನ್. ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷರು ಭಾಗ್ಯ. ಮಳವಳ್ಳಿ ತಾಲೂಕು ಅಧ್ಯಕ್ಷರು ಮೊಹಮ್ಮದ್ ಇರ್ಫಾನ್ ವಾಸಿ, ಟೌನ್ ಅಧ್ಯಕ್ಷರು ಫೈರೋಜ್ ಖಾನ್, ನವಾಜ್ ವಾರ್ಸಿ, ಹಾಗೂ ಇನ್ನಿತರರು ಇದ್ದರು,
ವರದಿ : ನಿಂಪು ರಾಜೇಶ್