
ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೃದು ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ಕುರಿತ ಕಾರ್ಯಾಗಾರ
ಕೊಳ್ಳೇಗಾಲ: ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ನೇಮಕಾತಿ ಘಟಕದ ವತಿಯಿಂದ “ಮೃದು ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ” ಕುರಿತು ಒಂದು ದಿನದ ತರಬೇತಿ ಮತ್ತು ಕಾರ್ಯಾಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಪ್ರಾಂಶುಪಾಲರು ಹಾಗೂ ಅತಿಥಿಗಳು ಉದ್ಘಾಟಿಸಿದರು.
ಈ ಕಾರ್ಯಕ್ರಮಕ್ಕೆ ಡಾ. ನಿರಂಜನ್ ಬಾಬು ಎಚ್.ಎಸ್. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾರ್ಗದರ್ಶನ ನೀಡಿದರು. ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಷಯಜ್ಞಾನಕ್ಕಿಂತಲೂ ಹೆಚ್ಚು ಸಾಫ್ಟ್ ಸ್ಕಿಲ್ಸ್, ಸಂವಹನ ಕೌಶಲ್ಯ, ತಂಡ ಕಾರ್ಯ, ಆತ್ಮವಿಶ್ವಾಸ ಹಾಗೂ ಉತ್ತಮ ವ್ಯಕ್ತಿತ್ವಾಭಿವೃದ್ಧಿ ವೃತ್ತಿಜೀವನದಲ್ಲಿ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗಾಗಿ ನಿರಂತರ ಶ್ರಮದ ಜೊತೆಗೆ ಉತ್ತಮ ಮನುಷ್ಯ ಸಂಬಂಧ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲ ಡಿ. ಮಹದೇವಯ್ಯ, ಐಕ್ಯೂಎಸಿ ಸಂಚಾಲಕ ಡಾ. ಹೇಮಾ ಕುಮಾರ್ ಜಿ, ಪ್ರಾಧ್ಯಾಪಕರಾದ ಡಾ. ಪ್ರೇಮಕುಮಾರಿ ಎಲ್., ಡಾ. ಪ್ರೇಮಲತಾ ಎಚ್.ಎಸ್., ಡಾ. ವೇಣುಗೋಪಾಲ್, ಪ್ರೊ. ಸುಂದರಮಾರ್ತಿ, ಪ್ರೊ. ಶಪೀನಾ ಭಾನು, ಪ್ರೊ. ಪ್ರಕಾಶ್ ಕೆ., ಪ್ರೊ. ಮಹೇಶ್ ಕೆ. ಹಾಗೂ ಕಾರ್ಯಕ್ರಮ ಸಂಚಾಲಕ ಡಾ. ಆನಂದ ಡಿ.ಆರ್. ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ವರದಿ : ನಿಂಪು ರಾಜೇಶ್