
ವರದಿ : ನಿಂಪು ಸಾಗರ್
ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದ ಎರಡು ಮುಖ್ಯ ರಸ್ತೆಗಳ ಅಗಲೀಕರಣಕ್ಕೆ ಅನುಮೋದನೆ ಕೊಡಿಸಲಾಗುವುದು, ಎ. ಆರ್ ಕೃಷ್ಣಮೂರ್ತಿ ಅವರು
ಕೊಳ್ಳೇಗಾಲ ನಗರಸಭೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದರು.
ನಗರಸಭೆಯಲ್ಲಿ ನಡೆದಿರುವ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು ನಂತರ ಪಟ್ಟಣದ ಡಾ ರಾಜ್ ಕುಮಾರ್ ರಸ್ತೆ, ಡಾ. ಬಿ. ಆರ್.ಅಂಬೇಡ್ಕರ್ ರಸ್ತೆ ಅಗಲೀಕರಣ ವಿಚಾರವಾಗಿ ಅಧಿಕಾರಿಗಳೊಡನೆ ದೀರ್ಘವಾಗಿ ಚರ್ಚಿಸಿದರು.
ನಂತರ ಮಾಧ್ಯಮದವರ ಜೊತೆ ಮಾತನಾಡಿ ಪಟ್ಟಣದಲ್ಲಿ ರಸ್ತೆ ಅಗಲೀಕರಣಕ್ಕೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ ನನಗಿಂತ ಮೊದಲು ಇದ್ದ ಶಾಸಕರು ಕೂಡ ಪಟ್ಟಣದಲ್ಲಿ ರಸ್ತೆ ಅಗಲೀಕರಣಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದಾರೆ ಪಟ್ಟಣದಲ್ಲಿ ರಸ್ತೆ ಅಗಲೀಕರಣಕ್ಕೆ ನಗರಸಭೆಯಿಂದ ಪ್ರಸ್ತಾವನೆಯನ್ನು ಸಿದ್ದಪಡಿಸಿ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಯವರ ಮುಖಾಂತರ ಮುಖ್ಯಮಂತ್ರಿಗಳು ಮತ್ತು ಸಚಿವರ ಸಮ್ಮುಖದಲ್ಲಿ ಮಂಡಿಸಿ ಅನುಮೋದನೆಯನ್ನ ದೊರಕಿಸಿ ಕೊಡಬಹುದು ಎಂಬ ಆಶಾ ಭಾವನೆಯಿತ್ತು.
ನಗರಸಭೆಯ ಕಳೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ವ್ಯಕ್ತ ಪಡಿಸಿದ್ದೆ. ರಸ್ತೆ ಅಗಲೀಕರಣ ಸಂಬಂಧಪಟ್ಟಂತೆ ಲೋಕೋಪಯೋಗಿ ಇಲಾಖೆಯವರು ಪ್ರಾಮಾಣಿಕವಾಗಿ ಪ್ರಯತ್ನಪಟ್ಟು ಒಂದು ನಕ್ಷೆ ಮಾಡಿ ಕೊಟ್ಟಿದ್ದರು ಆದರೆ ನಗರಸಭೆಯ ಅಧಿಕಾರಿಗಳು
ರಾಜ್ ಕುಮಾರ್ ರಸ್ತೆ ಹಾಗೂ ಅಂಬೇಡ್ಕರ್ ರಸ್ತೆ ಅಗಲೀಕರಣಕ್ಕೆ ಮಾಹಿತಿಯನ್ನು ಕೊಡಲು ಮುಂದಾಗಲಿಲ್ಲ.
ಕೆಷಿಪ್ ರಸ್ತೆ ಹಾಗೂ ಬೈಪಾಸ್ ರಸ್ತೆಯವರ ಮುಖಾಂತರವೇ ಒಪ್ಪಿಸಿ. ನಗರಸಭೆಯವರು
ರಾಜ್ ಕುಮಾರ್ ರಸ್ತೆ, ಅಂಬೇಡ್ಕರ್ ರಸ್ತೆಯಲ್ಲಿ ಖಾಸಗಿ ಜಾಗ ಮತ್ತು ಸರ್ಕಾರಿ ಜಾಗವನ್ನು ಗುರುತಿಸಿ ಪ್ರಸ್ತಾವನೆಯನ್ನು ಸಿದ್ದಪಡಿಸಿ ಕೊಟ್ಟರೆ ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ನಡೆಸಬಹುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ರೇಖಾ ರಮೇಶ್, ಉಪಾಧ್ಯಕ್ಷ ಎ. ಪಿ. ಶಂಕರ್, ಸದಸ್ಯರಾದ ಶಾಂತರಾಜು, ಮಂಜುನಾಥ್, ನಗರಸಭೆ ಆಯುಕ್ತ ರಮೇಶ್, ಇಂಜಿನಿಯರ್ ನಾಗೇಂದ್ರ,ಹಾಗೂ ಇನ್ನಿತರರು ಇದ್ದರು