/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಕೊಳ್ಳೇಗಾಲ ಕೆ.ಎಸ್.ಆರ್. ಟಿ.ಸಿ ಡಿಪೋನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ
Image

ಕೊಳ್ಳೇಗಾಲ ಕೆ.ಎಸ್.ಆರ್. ಟಿ.ಸಿ ಡಿಪೋನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

ಕೊಳ್ಳೇಗಾಲ:ನಮ್ಮ ದೇಶಕ್ಕೆ ವಿಶ್ವವೇ ಮೆಚ್ಚುವಂತಹ ಸಂವಿಧಾನದನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಆಧುನಿಕ ಯುಗದ ಮಹಾಚೇತನ ವಿಶ್ವ ಕಂಡಂತಹ ಮಹಾ ಮಾನವತವಾದಿ ಎಂದು ಕೆಎಸ್ಆರ್ಟಿಸಿ ಕೊಳ್ಳೇಗಾಲ ಘಟಕ ವ್ಯವಸ್ಥಾಪಕರಾದ ಭೋಗಾನಾಯಕ್ ಹೇಳಿದರು.

ಪಟ್ಟಣದಲ್ಲಿರುವ ಕೆ ಎಸ್ ಆರ್ ಟಿ ಸಿ ಡಿಪೋ ಕಚೇರಿ ಆವರಣದಲ್ಲಿ ಇಂದು ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆಯ ಅಂಗವಾಗಿ, ಅಂಬೇಡ್ಕರ್ ಅವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿದರು.
ಬಳಿಕ ಡಿಪೋ ವ್ಯವಸ್ಥಾಪಕ ಮತ್ತು ಸಿಬ್ಬಂದಿಗಳು ಪುಷ್ಪಾರ್ಚನೆ ಮಾಡಿ, ಮೊಂಬತ್ತಿ ಹಚ್ಚಿ ಮೌನಾಚಾರಣೆ ಮಾಡಿದರು.

ಬಳಿಕ ಡಿಪೋ ವ್ಯವಸ್ಥಾಪಕ ಭೋಗಾನಾಯಕ್ ಮಾತನಾಡಿ,ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಡು ಬಡತನದ ಕುಟುಂಬದಲ್ಲಿ ಹುಟ್ಟಿ, ಬಾಲ್ಯದಿಂದ ಸಾಕಷ್ಟು ನೋವು ಅವಮಾನಗಳನ್ನು ಅನುಭವಿಸಿ, ಸಾಕಷ್ಟು ಕಷ್ಟಗಳನ್ನು ಎದುರಿಸಿ, ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಪದವಿಗಳನ್ನು ಪಡೆದು ಶೈಕ್ಷಣಿಕ ವಲಯದಲ್ಲಿ ಸಾಧನೆ ಮಾಡಿ ‘ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು” ಎಂಬ ಸಂದೇಶದಂತೆ ದೇಶಕ್ಕೆ ಪವಿತ್ರ ಗ್ರಂಥವಾದ ಸಂವಿಧಾನವನ್ನು ರಚಿಸಿದರು.

ಸಂವಿಧಾನದಲ್ಲಿ ಎಲ್ಲಾ ವರ್ಗದ ಎಲ್ಲಾ ಧರ್ಮದ ಜನರಿಗೆ ಸಮಾನ ಹಕ್ಕುಗಳನ್ನು ನೀಡಿ ವಿಶ್ವ ಸಂದೇಶ ಸಾರಿದವರು. ಬೇರೆ ದೇಶದವರೆಲ್ಲ ಅಂಬೇಡ್ಕರ್ ಅವರನ್ನು ವಿಶ್ವಕಂಡಂತಹ ಬಹುದೊಡ್ಡ ಆರ್ಥಿಕ ತಜ್ಞ ಎಂದು ಬಣ್ಣಿಸುತ್ತಾರೆ. ಮಹಾನ್ ವ್ಯಕ್ತಿ ಭೌತಿಕವಾಗಿ ನಮ್ಮ ಜೊತೆ ಇಲ್ಲದಿರಬಹುದು. ಸೂರ್ಯ ಚಂದ್ರ ಇರುವವರೆಗೂ ಅಂಬೇಡ್ಕರ್ ರವರು ದೇಶದ ಪ್ರತಿಯೊಬ್ಬ ರಜೆಯ ಮನಸ್ಸಿನಲ್ಲಿ ನೆಲೆಯಾಗಿರುತ್ತಾರೆ. ಅಂಬೇಡ್ಕರ್ ರವರು ಅಗಲಿ 69 ವರ್ಷಗಳಾಗಿದ್ದು, ಅವರ 69ನೇ ಪರಿನಿರ್ವಾಣ ದಿನಾಚರಣೆಯನ್ನು ನಮ್ಮ ಕೆಎಸ್ಆರ್ಟಿಸಿ ಡಿಪೋದಲ್ಲಿನ ಯಾರಿಗಳು ಕಾರ್ಮಿಕ ವರ್ಗದವರು, ಮತ್ತು ಇಲಾಖೆಯ ಸಿಬ್ಬಂದಿವರ್ಗುದವರು ಜೊತೆಗೂಡಿ ಆಚರಿಸುತ್ತಿರುವುದು ಬಹಳ ಸಂತಸ ತಂದಿದೆ ಎಂದರು.

ಈ ವೇಳೆ ಕಾರ್ಯ ಅಧಿಕ್ಷಕ ಉಮೇಶ್, ಪಾರು ಪತ್ತೆದಾರ ಪರಮೇಶ್,ಸಂಚಾರಿ ನಿರೀಕ್ಷಕ ಹಿತೇಶ್, ರಂಗಸ್ವಾಮಿ, ಚಂದ್ರಶೇಖರ್, ಗಂಗರಾಜು ಮೂರ್ತಿ, ಪರಮೇಶ್ವರ್, ನಿರಂಜನ್, ಸೋಮ, ಸಂಪತ್, ಸೌಮ್ಯ, ವಾಣಿಶ್ರೀ ಮತ್ತು ಆಡಳಿತ, ಚಾಲಕ, ನಿರ್ವಾಹಕ, ಭದ್ರತಾ ಸಿಬ್ಬಂದಿ, ತ್ರಿಕ ಸಿಬ್ಬಂದಿ ವರ್ಗದವರು ಹಾಜರಿದ್ದರು.

  • ನಿಂಪುವಾರ್ತೆ

Releated Posts

ಕೊಳ್ಳೇಗಾಲ: ಪೌರಕಾರ್ಮಿಕರಿಗೆ ಊಟ ಬಡಿಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ಸಮಾಜದಲ್ಲಿ ಕೊಳಕು ಮುಕ್ತ ಪ್ರದೇಶವಾಗಲು ಪೌರಕಾರ್ಮಿಕರು ಮುಖ್ಯ ಕಾರಣವಾಗಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹೇಳಿದರು. ಪಟ್ಟಣದ ಸಿಡಿಎಸ್ ಭವನದಲ್ಲಿ ಬುಧವಾರ ಪೌರ…

ByByN Rajesh Feb 11, 2026

ಕೊಳ್ಳೇಗಾಲ ನಗರಸಭೆ – ಜಿಲ್ಲಾಧಿಕಾರಿ ಶ್ರೀ ರೂಪ ಅವರಿಂದ ಉಳಿತಾಯ ಬಜೆಟ್ ಮಂಡನೆ

ಕೊಳ್ಳೇಗಾಲ ನಗರಸಭೆಯ ೨೦೨೬-೨೭ನೇ ಸಾಲಿನ ಬಜೆಟ್‌ನ ಪಕ್ಷಿ ನೋಟ ಕೊಳ್ಳೇಗಾಲ, ಫೆ, ೧೦- ಕೊಳ್ಳೇಗಾಲ ನಗರಸಭೆಯ ಸಭಾಂಗಣದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಫೆ.೧೦…

ByByN Rajesh Feb 10, 2026

ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಅಯ್ಕೆ

ಕೊಳ್ಳೇಗಾಲ. ಸತ್ತೇಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ 8…

ByByN Rajesh Feb 9, 2026

ಕೊಳ್ಳೇಗಾಲ : ಗ್ಯಾರೆಂಟಿ ಯೋಜನೆಗಳಿಂದ ನವ ಕರ್ನಾಟಕ ನಿರ್ಮಾಣ – ಶಾಸಕ ಎ.ಆರ್.ಕೃಷ್ಣಮೂರ್ತಿ

ಸರ್ಕಾರದ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳು ನವಕರ್ನಾಟಕ ನಿರ್ಮಾಣಕ್ಕೆ ಸಹಕಾರಿ: ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಕೊಳ್ಳೇಗಾಲ. ರಾಜ್ಯಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗಾಗಿ…

ByByN Rajesh Jan 17, 2026
1 Comments Text
  • CBD mystery box says:
    Your comment is awaiting moderation. This is a preview; your comment will be visible after it has been approved.
    indica gummies for sleep help you relax and rest naturally
  • Leave a Reply

    Your email address will not be published. Required fields are marked *

    Scroll to Top