
ಕೊಳ್ಳೇಗಾಲ- ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ ಎಂದು ಕೊಳ್ಳೇಗಾಲ ಅಬ್ಕಾರಿ ವಲಯ ನಿರೀಕ್ಷಕರಾದ ಸಿ.ಎಂ.ದಯಾನಂದ ತಿಳಿಸಿದ್ದಾರೆ.
ಕಚೇರಿಯಲ್ಲಿ ತಾಲೂಕಿನ ಎಲ್ಲಾ ವೈನ್ ಸ್ಟೋರ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಭೆ ನಡೆಸಲಾಗಿದೆ. ಇಲಾಖೆಯ ನಿಯಮ ಮೀರಿ ಯಾವುದೇ ವ್ಯಕ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟ ಮಾಡಿರುವುದು ಕಂಡು ಬಂದಲ್ಲಿ ಎ1 ಅಥವಾ ಎ2 ಆರೋಪಿಗಳನ್ನಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟವಾದ ಬಗ್ಗೆ ಸೂಕ್ಷ್ಮ ನಿಗಾವಹಿಸಲಾಗುತ್ತಿದೆ. ಹಿಂದಿನ ಪ್ರಕರಣಗಳಲ್ಲಿ ಇರುವವರಿಗೂ ತಿಳುವಳಿಕೆ ನೀಡಲಾಗಿದೆ.
ಇವುಗಳನ್ನು ಮೀರಿ ಅಕ್ರಮ ಮಧ್ಯ ಮಾರಾಟದಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುದು ಎಂದು ಕೊಳ್ಳೇಗಾಲ ವಲಯ ಅಬ್ಕಾರಿ ನಿರೀಕ್ಷಕ ಸಿ.ಎಂ.ದಯಾನಂದ ಎಚ್ಚರಿಸಿದ್ದಾರೆ.