

ಕೊಳ್ಳೇಗಾಲ. ತಾಲ್ಲೂಕು ಕ್ರೈಸ್ತ ಒಕ್ಕೂಟದ ಅಧ್ಯಕ್ಷರಾಗಿ ಅಂತೋಣಿ ದಿನೇಶ್ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಪಟ್ಟಣದ ಸಂತ ಫ್ರಾನ್ಸಿಸ್ ಅಸಿಸ್ಸಿ ಸಭಾಂಗಣ ದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಿರಣ್ ಕುಮಾರ್(34) ವಿರುದ್ಧ ಅಂತೋಣಿ ದಿನೇಶ್(56) ಮತ ಪಡೆದು ಜಯಗಳಿಸಿದರು.
ಒಕ್ಕೂಟದ ಕಾರ್ಯದರ್ಶಿ ಸಿ.ನಾಗರಾಜು, ಹಾಗೂ ಖಜಾಂಜಿ ಅಮರೇಶ್ ಕುಮಾರ್ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಜೆ.ಉದಯಕುಮಾರ್ ಅವರು ಘೋಷಣೆ ಮಾಡಿದರು.
ಒಕ್ಕೂಟದ ಅಧ್ಯಕ್ಷರು ಅಂತೋಣಿ ದಿನೇಶ್ ಮಾತನಾಡಿ, ತಾಲ್ಲೂಕು ಕ್ರೈಸ್ತ ಒಕ್ಕೂಟ ಅಧ್ಯಕ್ಷರ ನ್ನಾಗಿ ನನ್ನನ್ನು ಮತ್ತೆ ಆಯ್ಕೆ ಮಾಡಿದ್ದ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಒಕ್ಕೂಟದ ಅಭಿವೃದ್ಧಿಗೆ ಎಲ್ಲರಾ ಸಹಕಾರದೊಂದಿಗೆ ಶ್ರಮಿಸುವ ಭರವಸೆ ನೀಡಿದರು.
ಇದಕ್ಕೂ ಮುನ್ನ ನಡೆದ 2024-25 ನೇ ಸಾಲಿನ ಸಭೆಯಲ್ಲಿ 1.55 ಲಕ್ಷ ಆದಾಯವನ್ನು ಮಂಡಿಸಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ 12 ಮಕ್ಕಳಿಗೆ ಪುರಸ್ಕರಿಸಿದರು.
ಈ ಸಂಧರ್ಭದಲ್ಲಿ ಮಿಲ್ಟನ್ ಕ್ರಿಸ್ಟಪರ್, ಜೆಎಂ ಕಿರಣ್ ಕುಮಾರ್, ಹೆಚ್ ನಾಗರಾಜು, ಡೇವಿಡ್, ರಾಯಪ್ಪ, ಉದಯನಂದ ಪ್ರಸಾದ್, ವಿನೋದ್ ಕುಮಾರ್, ಸತ್ಯಪಾಲ್ ಹಾಗೂ ಸದಸ್ಯರು ಹಾಜರಿದ್ದರು.
ವರದಿ : ನಿಂಪು ರಾಜೇಶ್