

ಕೊಳ್ಳೇಗಾಲ. ಪಟ್ಟಣದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ 5 ನೇ ಕ್ರಾಸ್ ರಸ್ತೆಯ ಅತಿಕ್ರಮವನ್ನು ಒತ್ತುವರಿಯನ್ನು ಇಂದು ನಗರಸಭೆ ವತಿಯಿಂದ ತೆರವು ಮಾಡಿದರು.
ಜಿಲ್ಲಾಧಿಕಾರಿ ಹಾಗೂ ಲೋಕಯುಕ್ತರ ಆದೇಶದ ಮೇರೆಗೆ ಇಂದು ಮುಂಜಾನೆಯಿಂದ ನಗರಸಭೆ ಪೌರಯುಕ್ತರು ರಮೇಶ್ ರವರ ನೇತೃತ್ವದಲ್ಲಿ ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಚರಣೆ ನಡೆಸಿದರು.
ಈ ವೇಳೆ ಪೌರಯುಕ್ತ ರಮೇಶ್ ಅವರು ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಗಳನ್ನು ತೆರಳಿಸುವುದು ಹಾಗೂ ನಗರ ಸ್ವಚ್ಛತೆಗೆ ಇದು ಅವಶ್ಯಕ. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ನಿರ್ಮಾಣಗಳು ನಗರ ದಾರಿಗಳ ಸರಿಯಾದ ಬಳಕೆಗಾಗಿ ತೊಂದರೆ ಉಂಟುಮಾಡುತ್ತಿವೆ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮದ ವಿರುದ್ಧ ಕ್ರಮ ನಿರಂತರವಾಗಿರಲಿದೆ, ಎಂದು ಹೇಳಿದರು.
ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಯಾವುದೇ ಅಕ್ರಮವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನಗರಸಭೆ ಈ ಮೂಲಕ ನೀಡಿದೆ.
ಕಾರ್ಯಾಚರಣೆಯಲ್ಲಿ ನಗರಸಭೆ ಎಇಇ ನಟರಾಜು, ಪ್ರಸನ್ನ, ಅರೋಗ್ಯ ಅಧಿಕಾರಿ ಚೇತನ್ ಕುಮಾರ್, ಕಂದಾಯ ನಿರೀಕ್ಷಕ ರವಿಶಂಕರ್, ನಂಜುಂಡಶೆಟ್ಟಿ ಹಾಗೂ ಸಿಬ್ಬಂದಿಗಳು ಇದ್ಧರು. ಪಟ್ಟಣ ಪೊಲೀಸರು ಯಾವುದೇ ಅಹಿತಕರ ಘಟನೆಗಳು ಉಂಟಾಗದಂತೆ ಬಿಗಿಭದ್ರತೆ ವಹಿಸಿದ್ದರು.
ವರದಿ ; ನಿಂಪು ರಾಜೇಶ್