

ಕೊಳ್ಳೇಗಾಲ:
ಡಿ. ದೇವರಾಜು ಅರಸುರವರ 110 ನೇ ಜನ್ನ ದಿನಾಚರಣೆ
ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ಕಾರ್ಯಾಲಯ, ಕೊಳ್ಳೇಗಾಲ ಇವರ ವತಿಯಿಂದ ಸಾಮಾಜಿಕ ಕ್ರಾಂತಿಯ ಹರಿಕಾರ, ಹಿಂದುಳಿದ ವರ್ಗಗಳ ನೇತಾರ, ದೀನದಲಿತರ ಧೀಮಂತ ನಾಯಕ, ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ದಿ. ಡಿ. ದೇವರಾಜು ಅರಸುರವರ 110 ನೇ ಜನ್ಮ ದಿನಾಚರಣೆಯ ಸಮಾರಂಭವನ್ನು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು,
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕರ ಎ, ಆರ್. ಕೃಷ್ಣಮೂರ್ತಿಯವರು ದೇವರಾಜು ಅರಸುರವರ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಸಿದರು
ಕಾರ್ಯಕ್ರಮವನ್ನು ಉದ್ಘಾಟಸಿ ಶಾಸಕರು ಮಾತನಾಡಿ ದಿ. ಡಿ ದೇವರಾಜು ಅರಸು ರವರು ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆ ಯಾಗಿದ್ದು ನಮ್ಮ ರಾಜಕೀಯ ಕ್ಷೇತ್ರದಲ್ಲಿ ದಕ್ಷತೆ, ಪ್ರಾಮಾಣಿಕ ನಿಷ್ಠೆಯಿಂದ ಉತ್ತಮ ರಾಜಕೀಯವನ್ನು ಮಾಡಿದರು,
ಅವರ ಕಾಲದಲ್ಲಿ ಅನೇಕ ಸುಧಾರಣೇಯನ್ನು ತಂದರು
ಮೈಸೂರು ಕರ್ನಾಟಕ ರಾಜ್ಯ ಏಕೀಕರಣಕ್ಕೆ ಇವರ ಕೊಡುಗೆ ಅಪಾರವಾಗಿತ್ತು ಕರ್ನಾಟಕ ಏಕೀಕರಣದಲ್ಲಿ ಗಡಿ ವಿಸ್ತೀರ್ಣ ಮತ್ತು ನೀರಿನ ವಿಚಾರದಲ್ಲಿ ಅನೇಕ ವ್ಯಾಜ್ಯಗಳು ನಡೆದವು ವಿಪಿ ಸಿಂಗ್ ರವರಾ ಮಂಡಲ್ ಆಯೋಗಾ ಜಾರಿಯಾದಗ ರಾಜ್ಯದಲ್ಲಿ ಅನೇಕರು ವಿರೋಧಿಸಿದರು ಆದರೆ ಮಂಡಲ್ ಅಯೋಗದ ಜಾರಿಯಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನ ಕೊಡಿಸುವ ಸಲುವಾಗಿ ಎಂಬುದು ತಿಳಿಯ ಪಡಿಸಿದಾಗ ಅದು ಜನರಿಗೆ ಅರಿವಾಗಿದೆ,
ಬಾಬಾ ಸಾಹೇಬ್ ಅಂಬೇಡ್ಕರ್ ಆಶಯದಂತೆ ದೇವರಾಜು ಆರಸುರವರು ವಿಪಿ ಸಿಂಗ್ ರವರು ಇರಬಹುದು ಇವರೆಲ್ಲರ ಚಿಂತನೆಯಿಂದ ಅಯೋಗ ರಚನೇಯಾಗಿ ಎಲ್ಲಾ ವರ್ಗದ ಎಲ್ಲಾ ಸಮುದಾಯದ ಎಲ್ಲ ಜನಾಂಗದವರಿಗೂ ಕೂಡ ಮೀಸಲಾತಿ ದೊರೆತು ಉತ್ತಮ ಜೀವನವನ್ನು ನಡೆಸುವಂತಾಗಿದೆ,
ದೇವರಾಜು ಅರಸುರವರ ಅಧಿಕಾರಾವಧಿಯಲ್ಲಿ ಬಡವರಿಗೆ ಹಿಂದುಳಿದವರಿ ಅಭಿವೃದ್ಧಿಯ ಪರವಾದ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದರು ಸಂವಿಧಾನ ಬದ್ದವಾದ ಅಧಿಕಾರವನ್ನು ನಡೆಸಿದ ಅವರ ಮಾತೆ ಶಾಸನವಾಗಿತ್ತು ಅಧಿಕಾರಿಗಳ ವಿಶ್ವಾಸಕ್ಕೆ ತಗೆದುಕೊಂಡು ಉತ್ತಮವಾದ ಕೆಲಸವನ್ನು ಮಾಡಿಸುತ್ತಿದ್ದರು ಎಂದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇ ಒ ಗುರುಶಾಂತಪ್ಪ ಬೆಳ್ಳುಂಡಗಿ , ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ಡಿವೈ ಎಸ್ ಪಿ ಧರ್ಮೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಶಿವರಾಜು, ಹಾಗೂ ಇನ್ನಿತರರು ಇದ್ದರೂ