

ಕೊಳ್ಳೇಗಾಲ. ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ವತಿಯಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿ ದುಂಡಾವರ್ತನೆಯನ್ನು ಖಂಡಿಸಿ ಭಾನುವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಸತ್ತೇಗಾಲ ಹೆದ್ದಾರಿ ಸರ್ಕಲ್ ನಲ್ಲಿ ಜಮಾಯಿಸಿದ್ದ ರೈತ ಮುಖಂಡರುಗಳು ಡಿ.ಕೆ.ಶಿವಕುಮಾರ್ ವಿರುದ್ಧ ದಿಕ್ಕಾರ ಕೂಗಿ ಕೆಲಕಾಲ ರಸ್ತೆ ತಡೆದು ಪ್ರತಿಭಟಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಜಿಲ್ಲಾ ಖಾಯಂ ಸದಸ್ಯರು ರವಿನಾಯ್ಡು, ಜಿಲ್ಲಾ ಮಹಿಳಾ ಅಧ್ಯಕ್ಷರು ಮಾದಮ್ಮ, ತಾಲ್ಲೂಕು ಉಪಾಧ್ಯಕ್ಷರು ಚಾರ್ಲಿ, ಸತ್ತೇಗಾಲ ಗ್ರಾಮ ಘಟಕ ಅಧ್ಯಕ್ಷರು ಮಹದೇವ, ಚಿಕ್ಕಲ್ಲೂರು ಗ್ರಾಮಘಟಕ ಕಾರ್ಯದರ್ಶಿ ಕುಮಾರ್, ಇಕಡಹಳ್ೞಿ ಮಹದೇವಪ್ಪ, ಶಿವಕುಮಾರ್, ದಿವ್ಯ ಕುಮಾರ್, ರುಕ್ಕಿಬಾಯಿ, ಯುವ ಘಟಕ ಸಂಚಾಲಕ ಗುಣ, ಜೋಸೆಫ್, ಸೇಸುರಾಜ್, ಶಿವಲಿಂಗ, ಕೃಷ್ಣಪ್ಪ, ನಾಗಣ್ಣ, ನಂಜನಾಯಕ, ರಾಮೇಗೌಡ, ಪುಟ್ಟೇಗೌಡ ಹಾಗೂ ಇತರರು ಇದ್ದರು.
ವರದಿ : ನಿಂಪು ರಾಜೇಶ್