ಕೊಳ್ಳೇಗಾಲ :
“ಯಶಸ್ವಿಯಾಗಿ ನಡೆದ 54ನೇ ತಿಂಗಳ ಕಣ್ಣಿನ ತಪಾಸಣಾ ಶಿಬಿರ ” ಹೆಚ್.ಕೃಷ್ಣಸ್ವಾಮಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಗಳು ಕೊಳ್ಳೇಗಾಲ , ರೋಟರಿ ಮಿಡ್- ಟೌನ್ ಹಾಗೂ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ರವರ ಸಹಯೋಗದೊಂದಿಗೆ ಸತತ 54 ನೇ ತಿಂಗಳಾ ಉಚಿತ "ನೇತ್ರ ನಿರಂತರ " ಹೆಸರಿನ ಕಣ್ಣಿನ ತಪಾಸಣಾ ಶಿಬಿರವು ದಿನಾಂಕ:-13-09- 2026ನೇ ಭಾನುವಾರದಂದು ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಆವರಣ ಕೊಳ್ಳೇಗಾಲದಲ್ಲಿ ಯಶಸ್ವಿಯಾಗಿ ನಡೆಯಿತು, ಕಾರ್ಯಕ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಸಿಸಿಬಿ ವಿಭಾಗದ ಎಸಿಪಿ ಹೆಚ್ ಕೆ. ಮಹಾನಂದರವರು ಈ ಕಾರ್ಯಕ್ರಮವನ್ನು ಸತತ 54 ತಿಂಗಳುಗಳಿಂದ ನಡೆಸುತ್ತಾ ಬಂದಿದ್ದು ಈಗಾಗಲೇ 5921 ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡು ಅದರಲ್ಲಿ 3513 ಜನರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಈ ಕಾರ್ಯಕ್ರಮವು ನಿಮ್ಮೆಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು ಹಾಗೆಯೇ ಪ್ರತಿ ತಿಂಗಳು ಎರಡನೇ ಭಾನುವಾರ ನಡೆಯುವ ಉಚಿತ ನೇತ್ರ ನಿರಂತರ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಇತರರಿಗೂ ಕಾರ್ಯಕ್ರಮದ ಅನುಕೂಲಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು ಕಾರ್ಯಕ್ರಮದಲ್ಲಿ. ಎಂ ಡಿ ಸಿ ಸಿ ಬ್ಯಾಂಕ್ ನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್, ನಗರಸಭಾ ಸದಸ್ಯರಾದ ಜಿ ಹರ್ಷ ರೋ,ಗಿರೀಶ್ ಜಡೆ, ರೋ, ಸತೀಶ್ ಬಾಬು, ಅರವಿಂದ ಕಣ್ಣಿನ ಆಸ್ಪತ್ರೆಯ ಡಾ. ಅಮೃತ , ಹಾಗೂ ಅರವಿಂದ ಕಣ್ಣಿನ ಆಸ್ಪತ್ರೆಯ ಸಂಯೋಜಕರಾದ ವಿಜಯ್ ಕುಮಾರ್ ರವರು ವಿಶ್ವಚೇತನ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕರಾದ ರವಿತೇಜ ರವರು ಆಸ್ಪತ್ರೆಯ ಸಿಬ್ಬಂದಿಗಳು, ಸಂಸ್ಥೆಯ ಸಿಬ್ಬಂದಿಗಳಾದ , ಶಾಂತರಾಜು, ಸಿದ್ದಾರ್ಥ್ , ಹಾಗೂ ಸಿಬ್ಬಂದಿ ವರ್ಗದವರು
ಹಾಜರಿದ್ದರು.
ಈ ದಿನದ ಶಿಬಿರದಲ್ಲಿ 169 ರೋಗಿಗಳನ್ನು ತಪಾಷಣೆಗೆ ಒಳಪಟ್ಟಿದ್ದು ಅದರಲ್ಲಿ 34 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಅರವಿಂದ ಕಣ್ಣಿನ ಆಸ್ಪತ್ರೆ ಕೊಯಮತೂರಿಗೆ ಕಳುಹಿಸಿಕೊಡಲಾಯಿತು.
ವರದಿ ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.