ಕೊಳ್ಳೇಗಾಲ. ಇಲ್ಲಿನ ಅಂಜುಮನ್-ಎ-ಇಸ್ಲಾಮಿಯ ಸಮಿತಿಯ ನೂತನ ಪದಾಧಿಕಾರಿಗಳನ್ನು ಜೆಡಿಎಸ್ ಕ್ಷೇತ್ರಾಧ್ಯಕ್ಷ ಬಿ.ಪುಟ್ಟಸ್ವಾಮಿ ಅವರು ಸನ್ಮಾನಿಸಿ ಗೌರವಿಸಿದರು.
ಪಟ್ಟಣದ ಅಂಜುಮನ್-ಎ-ಇಸ್ಲಾಮಿಯ ಕಚೇರಿಯಲ್ಲಿ ನೂತನ ಪದಾಧಿಕಾರಿಗಳಿಗೆ ಶಾಲು ಹೊದಿಸಿ, ಹಾರ ಹಾಕಿ, ಫಲಫುಷ್ಪ ನೀಡುವ ಮೂಲಕ ಅಭಿನಂದಿಸಿದರು.
ನಂತರ ಬಿ.ಪುಟ್ಟಸ್ವಾಮಿ ಮಾತನಾಡಿ, ಅಂಜುಮನ್ ಇಸ್ಲಾಮಿಯ ಕಮಿಟಿಗೆ ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಿಗೆ ಸನ್ಮಾನಿಸಲಾಗಿದೆ. ಈ ಹಿಂದೆ ಕರೋನಾ ಸಂಧರ್ಭದಲ್ಲಿ ಕೈಗೊಂಡ ಕ್ರಮಗಳು ಹಾಗೂ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ರೀತಿಯಲ್ಲಿ ಅಂಜುಮನ್ ಸಮಿತಿಯಿಂದ ಮುಂದೇನೂ ಸಹಾ ಅದೇ ರೀತಿಯಲ್ಲಿ ಕಷ್ದಲ್ಲಿರುವ ಜನರಿಗೆ ಸಹಾಯ ಮಾಡುವ, ಸಮುದಾಯದ ಮಕ್ಕಳ ಏಳಿಗೆಗೆ ಶ್ರಮಿಸುವಂತೆ ತಿಳಿಸಿ ಎಂದು ಇಂದು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಗಿದೆ ಎಂದು ತಿಳಿಸಿದರು.
ಸಮಿತಿಯ ಅಧ್ಯಕ್ಷರು ಹಬೀಬ್ ಪಾಷ ಮಾತನಾಡಿ, ಅಂಜುಮನ್ ಇಸ್ಲಾಮಿಯ ಸಮಿತಿಯ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನಿಸಿದ್ದ ಜೆಡಿಎಸ್ ಅಧ್ಯಕ್ಷ ಪುಟ್ಟಸ್ವಾಮಿ ರವರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಅಂಜುಮನ್ ಇಸ್ಲಾಮಿಯ ಸಮಿತಿಯ ಅಧ್ಯಕ್ಷರು ಹಬೀಬ್ ಪಾಷ, ಕಾರ್ಯದರ್ಶಿ ಅಬ್ದುಲ್ ಖಾದರ್, ಉಪಾಧ್ಯಕ್ಷರು ಅಯೂಬ್ ಖಾನ್, ಖಜಾಂಚಿ ಜಬೀವುಲ್ಲಾ, ನಿರ್ದೇಶಕರಾದ ವಾಸೀಂ ಅಹಮ್ಮದ್, ಆಲ್ತಾಫ್, ಅತೀಕ್ ಅಹಮ್ಮದ್, ಜೆಡಿಎಸ್ ಟೌನ್ ಘಟಕ ಅಧ್ಯಕ್ಷ ಸುರೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಮಲ್ಲೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾಯಿಕ್ ಅಹಮದ್, ಜೆಡಿಎಸ್ ಮುಖಂಡರುಗಳಾದ ನಿವೃತ್ತ ಪ್ರಾಂಶುಪಾಲರು ರಾಜಪ್ಪ.ಜೆ , ಭೀಮನಗರ ಪ್ರಭಾಕರ್, ಮಹೇಶ್,ಮಂಜುನಾಥನಗರ ಪಾಂಡುರಂಗ ಬೆಂಡ್ರಳ್ಳಿ ಉಮೇಶ್, ಬಸ್ತೀಪುರ ಸೋಮಣ್ಣ, ಮನು, ಮುಡಿಗುಂಡ ನಾಗು ಹಾಗೂ ಇತರರು ಇದ್ದರು,
ವರದಿ ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.