ಕೊಳ್ಳೇಗಾಲ: ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಅಕ್ಟೋಬರ್ ತಿಂಗಳಲ್ಲಿ 24 25 ರಂದು ನಡೆಯಲಿರುವ ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನದ ಅಂಗವಾಗಿ ಕೊಳ್ಳೇಗಾಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಧಮ್ಮ ಪಯಣ ಜಾಗೃತಿ ಜಾಥ ಆಯೋಜಿಸಲಾಗಿದೆ ಗುರುವಾರ ಕೊಳ್ಳೆಗಾಲ ಪಟ್ಟಣದ ಡಾ. ಬಿಆರ್ ಅಂಬೇಡ್ಕರ್ ಪುತ್ತಳಿ ಮುಂದೆ ಬಾಬಾ ಸಾಹೇಬರಿಗೆ ಮಾಲಾರ್ಪಣೆ ಮಾಡುವ ಮೂಲಕ ಈ ಒಂದು ಜಾಥ ಕೊಳ್ಳೇಗಾಲ ತಾಲೂಕಿನ ಎಲ್ಲಾ ಗ್ರಾಮಗಳಿಗೂ ತೆರಳಲಿದೆ ಎಂದು ಬೌದ್ಧ ಸಮ್ಮೇಳನ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಮುಳ್ಳೂರು ಶಿವಮಲ್ಲು ತಿಳಿಸಿದರು
ಗುರುವಾರ ಆರಂಭವಾಗಲಿರುವ ಧಮ್ಮ ಪಯಣ ಮತ್ತು ಜಾಗೃತಿ ಜಾಥ ಕೊಳ್ಳೇಗಾಲ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ 14 ದಿನಗಳ ಕಾಲ ಸಂಚರಿಸಲಿದೆ ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ಆರಂಭವಾಗಲಿರುವ ಜಾಥ ಜಕ್ಕಳ್ಳಿ ತಿಮ್ಮರಾಜಿಪುರ ಲಕ್ಕರಸನಪಾಳ್ಯ ಕೆಂಪನಪಾಳ್ಯ ಗ್ರಾಮಗಳಿಗೆ ತೆರಳಲಿದೆ ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಒಂದು ಜಾಥವನ್ನು ಯಶಸ್ವಿಗೊಳಿಸಬೇಕೆಂದು ಸಮಿತಿಯ ಉಪಾಧ್ಯಕ್ಷರಾದ ಮುಳ್ಳೂರು ಶಿವಮಲ್ಲು ತಿಳಿಸಿದ್ದಾರೆ
ಜಾಥ ಬಂದಂತ ಸಂದರ್ಭದಲ್ಲಿ ಪ್ರತಿಯೊಬ್ಬರು ಬಿಳಿ ವಸ್ತ್ರ ಧರಿಸಿ ಬರಮಾಡಿಕೊಳ್ಳಬೇಕು ಹಾಗೂ ಈ ಒಂದು ಸಮ್ಮೇಳನಕ್ಕೆ ಪ್ರತಿ ಗ್ರಾಮದ ಜನರು ತಮ್ಮ ಕೈಲಾದ ಆರ್ಥಿಕ ನೆರವನ್ನು ನೀಡಿ ರಸೀದಿ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ
ವರದಿ ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.