ೆÆಳ್ಳೇಗಾಲ: ಹಲವು ವರ್ಷಗಳಿಂದ ಉದ್ಘಾಟನೆ ಭಾಗ್ಯ ಕಾಣದೆ ನೆನಗುದಿಗೆ ಬಿದ್ದಿದ್ದ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ  ಡಾ.ಬಿ.ಆರ್.ಅಂಬೇಡ್ಕರ್ ಭವನ ಲೋಕಾರ್ಪಣೆ ದಿನಗಳು ಸನ್ನಿಹಿತವಾಗುತ್ತಿದ್ದು, ಭವನದ ಉದ್ಘಾಟನೆ ಸಂಬ್ಬAದ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅದ್ಯಕ್ಷ ಅನಂದಮೂರ್ತಿ ಮತ್ತು ಭೀಮನಗರದ ಮುಖಂಡರುಗಳು ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಶನಿವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಅಂಬೇಡ್ಕರ್ ಸ್ಮಾರಕ ಸಂಘದ ಅದ್ಯಕ್ಷರು ಮತ್ತು ಪಧಾದಿಕಾರಿಗಳು ಹಾಗೂ ಭೀಮನಗರದ ಮುಖಂಡರ ಜೊತೆಗೆ ಭವನ ಉದ್ಘಾಟನೆ ಸಂಭAದ ಮಾತುಕತೆ ನಡೆಸಲಿದ್ದು, ಇದೇ ಸಭೆಯಲ್ಲಿ ದಿನಾಂಕ ನಿಗದಿ ಮಾಡುವ ಸಾದ್ಯತೆ ಇದೆ.
ಕೊಳ್ಳೇಗಾಲ ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಬಹುಕೋಟಿ ವೆಚ್ಚದಲ್ಲಿ ಸುಸ್ಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಿದೆ. ಕಾಮಗಾರಿ ಮುಗಿದು ಕೆಲವು ತಿಂಗಳುಗಳು ಕಳೆದಿದ್ದರೂ ಸಹ ಉದ್ಘಾಟನೆ ಭಾಗ್ಯ ಕಂಡಿರಲಿಲ್ಲ. ಏನಾದರೊಂದು ಕಾರಣ ಮುಂದಿಟ್ಟು ಕೊಂಡು ಭವನ ಉದ್ಘಾಟನೆ ಮುಂದೂಡಲಾಗುತ್ತಿತ್ತು.
ಅAಬೇಡ್ಕರ್ ಸಂಘದ ಹಾಲಿ ಅದ್ಯಕ್ಷರಾಗಿರುವ ಆನಂದಮೂರ್ತಿ ಅವರು ತಮ್ಮ ಅವದಿಯಲ್ಲಿ ಭವನದ ಕಾಮಗಾರಿ ಪೂರ್ಣವಾಗುವ ರೀತಿ ನೋಡಿ ಕೊಂಡಿದ್ದು ಮತ್ತು ಸಂಘದ ರಿನೀವಲ್ ಮಾಡಿಸುವಲ್ಲಿ ಮುಖ್ಯಪಾತ್ರ ವಹಿಸಿರುವುದರಿಂದ ಇವರ ಅವದಿಯಲ್ಲಿ ಭವನ ಉದ್ಘಾಟನೆ ಆಗಬೇಕು ಎಂಬುದು ಭೀಮನಗರದ ಬಹುತೇಕ ಮುಖಂಡರ ಒತ್ತಾಯವಾಗಿದೆ.
ನಾಳೆ ನಡೆಯುವ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ಅಂಬೇಡ್ಕರ್ ಸ್ಮಾರಕ ಸಂಘದ ಪದಾಧಿಕಾರಿಗಳು ಮತ್ತು ಭೀಮನಗರದ ಮುಖಂಡರ ನಡುವಿನ ಮಹತ್ವದ ಮಾತುಕತೆಯಲ್ಲಿ ಅಂಭೇಡ್ಕರ್ ಭವನ ಉದ್ಘಾಟನೆಗೆ ದಿನಾಂಕ ನಿಗದಿಯಾಗುವ ಸಾದ್ಯತೆ ಇದೆ.
ವರದಿ- ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.