ಕೊಳ್ಳೇಗಾಲ : ನನಗೆ ಸಮುದಾಯದ ಪರ ಹೆಚ್ಚು ಕಾಳಜಿ ಇದೆ ಸದಾ ನಾನು ಸಮುದಾಯದ ಪರವಾಗಿ ದ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಆರ್ ಕೃಷ್ಣಮೂರ್ತಿ ಅವರು ತಿಳಿಸಿದರು
ಬುಧವಾರ ಕೊಳ್ಳೇಗಾಲ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಹಿತ ರಕ್ಷಣಾ ಸಮಿತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಪರಿಶಿಷ್ಟ ಜಾತಿ ವರ್ಗದ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ಕೆಲವೇಡೆಗಳಲ್ಲಿ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಪಾಲ್ಗೊಳ್ಳುವುದೇ ಇಲ್ಲ
ಆದರೆ ನಾನು ಹೆಚ್ಚು ಕಾಳಜಿ ವಹಿಸಿ ಇಂದಿನ ಸಭೆಗೆ ಭಾಗವಹಿಸಿದ್ದೇನೆ ನನಗೆ ಸಮುದಾಯದ ಪರ ಕಾಳಜಿ ಇದೆ ಹಾಗೂ ಸದಾ ಸಮುದಾಯದ ಅಭಿವೃದ್ಧಿಗಾಗಿ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದರು ಸಭೆಯಲ್ಲಿ ಪರಿಶಿಷ್ಟ ಜಾತಿ ವರ್ಗದ ಹಲವಾರು ಸಮಸ್ಯೆಗಳು ಪ್ರಸ್ತಾಪವಾಯಿತು ಕೊಳ್ಳೇಗಾಲ ನಗರ ಸಭೆ ಮುಂಬಾಗ ಇರುವ ವೈನ್ ಸ್ಟೋರನ್ನು ಸ್ಥಳಾಂತರಿಸಬೇಕು ಕಾರಣ ಸಮೀಪದಲ್ಲಿ ಪರಿಶಿಷ್ಟ ಜಾತಿಯ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯ ಇದೆ ಎಂದು ಜಿಲ್ಲಾ ಸಮಿತಿ ಸದಸ್ಯರಾದ ನಟರಾಜ ಮಾಳಿಗೆ ಅವರು ಸಭೆಯಲ್ಲಿ ಒತ್ತಾಯಿಸಿದರು ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಆನಂದ ಮೂರ್ತಿಯವರು ಮಾತನಾಡಿ ಭೀಮ ನಗರದ ಮೂರು ಮತ್ತು ನಾಲ್ಕನೇ ವಾರ್ಡಿಗೆ ಇದುವರೆಗೂ ನಿವಾಸಿಗಳಿಗೆ ಯಾವುದೇ ದಾಖಲೆಗಳು ಇಲ್ಲ ಆದ್ದರಿಂದ ನಗರಸಭೆ ವತಿಯಿಂದ ಖಾಥ ಆಂದೋಲನವನ್ನು ನಡೆಸಿ ಎಲ್ಲರಿಗೂ ನಿವೇಶನದ ಹಕ್ಕುಪತ್ರ ನೀಡಬೇಕೆಂದು ಪ್ರಸ್ತಾಪಿಸಿದರು ಹಾಗೂ ಕೊಳ್ಳೇಗಾಲ ಪಟ್ಟಣದ ನಿರ್ಮಾಣವಾಗಿರುವ ಅಂಬೇಡ್ಕರ್ ಭವನವನ್ನು ಆದಷ್ಟು ಬೇಗನೆ ಉದ್ಘಾಟನೆ ಮಾಡಲು ಕ್ರಮ ಜರುಗಿಸಬೇಕೆಂದು ಸಭೆಯಲ್ಲಿ ತಿಳಿಸಿದರು ಸಭೆಯಲ್ಲಿ ಪಾಲ್ಗೊಂಡಿದ್ದ ಇನ್ನೂ ಹಲವು ದಲಿತ ಮುಖಂಡರುಗಳು ಮಾತನಾಡಿ ಕೆಲವೆಡೆ ಅದರಲ್ಲೂ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಅಕ್ರಮ ಮಧ್ಯೆ ಮಾರಾಟ ನಡೆಯುತ್ತಿದೆ ಹಾಗೂ ಗಾಂಜಾ ಸೇವನೆ ಪ್ರಕರಣಗಳು ನಡೆಯುತ್ತಿದೆ ಇವುಗಳಿಗೆ ಕಡಿವಾಣ ಹಾಕಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು ಇಂದು ನಡೆದ ಸಭೆಯಲ್ಲಿ ಕೊಳ್ಳೇಗಾಲ ಡಿ ವೈ ಎಸ್ ಪಿ ಮೋಹನ್ ತಹಸಿಲ್ದಾರ್ ಬಸವರಾಜ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ಮತ್ತು ಪರಿಶಿಷ್ಟ ಜಾತಿ ವರ್ಗದ ಹಿತ ರಕ್ಷಣಾ ಸಮಿತಿ ಸದಸ್ಯರಾದ ಸಿದ್ದಾರ್ಥ ಹೇಮಂತ್ ನಾಯ್ಕ ಹಾಗೂ ನಗರಸಭೆ ಆಯುಕ್ತಾರಾದ ನಟರಾಜ್ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು
ವರದಿ ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.