ಕೊಳ್ಳೇಗಾಲ:
 ಕಚೇರಿಯಲ್ಲಿ ಸುರಕ್ಷಿತವಾಗಿ ಇರಬೇಕಾದ ಕಡತಗಳ ಹಲವು ಅಧಿಕೃತ
ಬಿಲ್ ಗಳ ದಾಖಲೆಗಳನ್ನು ವ್ಯಕ್ತಿಯೊಬ್ಬ ವಾಟ್ಸಾಪ್ ಗ್ರೂಪ್ ಗಳಲ್ಲಿ
ಬಹಿರಂಗಗೊಳಿಸಿದ್ದು, ಈ ಬೆಳವಣಿಗೆಯಿಂದ ಚಾಮರಾಜನಗರ ಜಿಲ್ಲಾ ಕೃಷಿ
ಇಲಾಖೆ ತಬ್ಬಿಬ್ಬುಗೊಂಡಿದೆ.
ಚೇತನ್ ಎಂಬಾತ ಚಾಮರಾಜನಗರ ಕೃಷಿ ಇಲಾಖೆಗೆ ಸಂಬಂದಿಸಿದ ಕೆಲವು
ಬಿಲ್ ಗಳ ಅಧಿಕೃತ ರಸೀದಿಯನ್ನು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಾಕಿದ್ದಾನೆ.
ವಿಶೇಷ ಎಂದರೆ ಇದು ಮಾಹಿತಿ ಹಕ್ಕು ನಿಯಮದಡಿ ಪಡೆದ ದಾಖಲೆಗಳಲ್ಲ.
ಬದಲಾಗಿ ಕಚೇರಿಯ ಕಡತದಲ್ಲಿ ಇರುವ ಹಿರಿಯ ಅಧಿಕಾರಿಗಳ ಮೊಹರು ಮತ್ತುಸಹಿಯುಳ್ಳ ರಸೀದಿಗಳನ್ನು ಬಹಿರಂಗಗೊಳಿಸಿದ್ದು, ಇದು ಕೃಷಿ ಇಲಾಖೆಯ
ಅಧಿಕಾರಿಗಳು ಮತ್ತು ನೌಕರರ ಕರ್ತವ್ಯ ನಿಷ್ಟೆಯನ್ನು ಅನುಮಾನಿಸುವಂತಾಗಿದೆ.
ಚೇತನ್ ಎಂಬಾತ ಹಲವು ಬಿಲ್ ಗಳ ರಸೀದಿಗಳನ್ನು ವಾಟ್ಸಾಪ್ ಗ್ರೂಪ್ ಗಳಿಗೆ
ಹರಿಬಿಟ್ಟು,ರೈತರ ಯಾವುದೇ ಕಾರ್ಯಾಗಾರಗಳನ್ನು ನಡೆಸದೇ ಬಿಲ್
ಮಾಡಿಕೊಂಡು ಅವ್ಯವಹಾರ ಮಾಡಲಾಗಿದೆ ಎಂದು ಸಹ ತಿಳಸಿದ್ದಾನೆ.
ಕಚೇರಿ ಕಡತದಲ್ಲಿ ಗೌಪ್ಯವಾಗಿ ಇರಬೇಕಾದ ಈ ದಾಖಲೆಗಳ ಬಿಲ್ ಗಳು ಚೇತನ್‌ಎಂಬಾತನಿಗೆ ಹೇಗೆ ಲಭಿಸಿದೆ. ಮಾಹಿತ ಹೇಗೆ ಸೋರಿಕೆಯಗಿದೆ. ಈತನಿಗೆ
ಇಲಾಖೆಯ ಯಾವ ಸಿಬ್ಬಂಧಿ ಪೋಟೋ ತೆಗೆದು ವಾಟ್ಸಾಪ್ ಮಾಡಿದ್ದಾನೆ ಎಂಬಹಲವು ಪ್ರಶ್ನೆಗಳು ಕೇಳಿಬರುತ್ತಿದೆ.
ಈ ಬಗ್ಗೆ ಕೊಳ್ಳೇಗಾಲ ಕೃಷಿ ಸಹಾಯಕ ಅಧಿಕಾರಿಯನ್ನು ಸಂಪರ್ಕಿಸಿ ಕೇಳಿದಾಗ,ಚೇತನ್ ಎಂಬಾತ ಕೆಲವು ವರ್ಷಗಳ ಹಿಂದೆ ಕೊಳ್ಳೇಗಾಲ ತಾಲೂಕಿನ
ಲೊಕ್ಕನಹಳ್ಳಿ ರೈತಸಂಪರ್ಕ ಕೇಂದ್ರದಲ್ಲಿ ಹೊರಗುತ್ತಿಗೆ ಆದಾರದಲ್ಲಿ ಕರ್ತವ್ಯ
£ರ್ವಹಿಸುತ್ತಿದ್ದ, ಈತನ ವಿರುದ್ದ ಹಲವು ಅವ್ಯವಹಾರ ಆರೋಪಗಳು ಕೇಳಿ
ಬಂದ ಹಿನ್ನಲೆಯಲ್ಲಿ ಈ ಹಿಂದೆಯೇ ಅತನನ್ನು ಕರ್ತವ್ಯದಿಂದ ವಜಾ
ಮಾಡಲಾಗಿತ್ತು ಎಂದರು.
ಆದರೆ ಕಚೇರಿ ಕಡತದಲ್ಲಿ ಇದ್ದ ಅಧಿಕೃತ ರಸೀದಿಗಳ ಪೋಟೋ ತೆಗೆದು
ಈತನಿಗೆ ಯಾರು ಕಳುಯಿಸಿದರು ಎಂಬ ಬಗ್ಗೆ ಜಿಲ್ಲೆಯ ಹಿರಿಯ ಅಧಿಕಾರಿಗಳು
ಕ್ರಮ ಜರುಗಿಸುತ್ತಾರೆ ಎಂದಷ್ಟೆ ಹೇಳಿದರು. ಈ ಪ್ರಕರಣ ಮುಂದಿನ ದಿನಗಲಲ್ಲಿ
ಯಾವ ಬೆಳವಣಿಗೆ ತೆಗೆದು ಕೊಳ್ಳುವುದೋ ಕಾದು ನೋಡಬೇಕಾಗಿದೆ.

ವರದಿ- ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.