ಕೊಳ್ಳೇಗಾಲ. ದೊಡ್ಡಿಂದುವಾಡಿ ಗ್ರಾಮದ ಕನಕಗಿರಿ ರಸ್ತೆ ಅಭಿವೃದ್ಧಿ ಪಡಿಸದೇ ನಿರ್ಲಕ್ಷ್ಯ ವಹಿಸಿರುವ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಶುಕ್ರವಾರ ಇಲ್ಲಿನ ರೈತ ಸಂಘದವರು ಪ್ರತಿಭಟನೆ ನಡೆಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಮುಂಭಾಗದಲ್ಲಿ ಜಮಾಯಿಸಿದ್ದ ರೈತರು ಧಿಕ್ಕಾರ ಕೂಗುವ ಮೂಲಕ ಪ್ರತಿಭಟಿಸಿದರು.
ಕನಕಗಿರಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಕಳೆದ ನವೆಂಬರ್ ನಲ್ಲಿ ಪ್ರತಿಭಟನೆ ನಡೆಸಿದ್ದಾಗ ಒಂದು ತಿಂಗಳೊಳಗೆ ಅಭಿವೃದ್ಧಿ ಪಡಿಸುವುದಾಗಿ ಹೇಳಿ ಹೋದ ಅಧಿಕಾರಿಗಳು ಇದುವರೆಗೂ ಕಾಮಗಾರಿ ನಡೆಸದೇ ಇರುವುದ್ದರಿಂದ ಆ ರಸ್ತೆಯಲ್ಲಿ ಇಂದು ಬೆಳಿಗ್ಗೆ ಬೈಕ್ ನಲ್ಲಿ ತೆರಳುತ್ತಿದ್ದ ರೈತ ರಾಜಣ್ಣರವರಿಗೆ ಎದುರಗಡೆ ಹೋಗುತ್ತಿದ್ದ ವಾಹನದ ಟೈರ್ ಸಿಕ್ಕ ಕಲ್ಲು ಹಾರಿ ತೀವ್ರವಾಗಿ ಗಾಯಗೊಂಡಿದ್ದ ಹಿನ್ನೆಲೆ ರಸ್ತೆಯನ್ನು ಅಭಿವೃದ್ಧಿ ಪಡಿಸುವಲ್ಲಿ ವಿಫಲವಾಗಿರುವ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಅಮಾನತ್ತು ಪಡಿಸಬೇಕು. ಜೊತೆಗೆ ಸಂಬಂಧಪಟ್ಟ ಗುತ್ತಿಗೆದಾರರನ್ನು ಬ್ಲಾಕ್ ಪಟ್ಟಿಯಲ್ಲಿಡಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿ, ಅಧೀಕ್ಷಕ ಅಭಿಯಂತರರು ರವರ ವಿಳಾಸದ ಮನವಿಪತ್ರವನ್ನು ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್ ರವರ ಮೂಲಕ ಮನವಿ ಸಲ್ಲಿಸಿದರು.
ಬಳಿಕ ಪುರುಷೋತ್ತಮ್ ಮಾತನಾಡಿ, ಕನಕಗಿರಿ ರಸ್ತೆಯ ಕಾಮಗಾರಿಯನ್ನು ಸೋಮವಾರದಿಂದ ನಡೆಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿರುವುದಾಗಿ ಹೇಳಿದ್ದರಿಂದ ಪ್ರತಿಭಟನೆಯನ್ಮು ಕೈಬಿಡುವಂತೆ ಕೇಳಿದಾಗ ಪ್ರತಿಭಟನೆ ಕೈಬಿಟ್ಟು ವಾಪಸ್ಸು ತೆರಳಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪೆರಿಯಾನಾಯಗಂ, ದೊಡ್ಡಿಂದುವಾಡಿ ಗ್ರಾಮ ಘಟಕ ಅಧ್ಯಕ್ಷ ವಸಂತಕುಮಾರ್, ಸಿಂಗನಲ್ಲೂರು ಗ್ರಾಮ ಘಟಕ ಬೆಟ್ಟೇಗೌಡ, ಬಸವಲಿಂಗಶೆಟ್ಟಿ, ರಂಗಸ್ವಾಮಿ, ಮೋಳೆ ರಾಜು, ಗೋವಿಂದರಾಜು, ನಾಗೇಂದ್ರ, ವೆಂಕಟೇಶ್, ಕೃಷ್ಣಶೆಟ್ಟಿ, ರವಿ, ಕೀರ್ತಿ, ನಾಗೇಂದ್ರ, ಕೀರ್ತಿರಾಜ್ ಹಾಗೂ ಇತರರು ಇದ್ದರು.
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.