
ಹನೂರು: ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದ ಪಿ ಹೆಚ್ ಸಿ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ಡಾ. ಶುಭಾಷ್. ಎನ್. ಸೋಮವಾರ ಕರ್ತವ್ಯಕ್ಕೆ ಹಾಜರಾದರು.
ಜಿಲ್ಲಾ ವೈದ್ಯಾಧಿಕಾರಿ ಆದೇಶ ಹಾಗೂ ತಾಲೂಕು ವೈದ್ಯಾಧಿಕಾರಿಯವರ ಮಾರ್ಗದರ್ಶನದಂತೆ ಸೇವೆಗೆ ನಿಯೋಜನೆಗೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಯಲ್ಲಿ ವೈದ್ಯಕೀಯ ವೃತ್ತಿ ತರಬೇತಿ ಪಡೆದು ಒಂದು ವರ್ಷ ಸಹಾಯಕ ವೈದ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಮೂಲತಃ ತಾಲೂಕಿನ ಮಂಗಲ ಗ್ರಾಮದವರಾದ ಇವರು ಹನೂರು ಪಟ್ಟಣದಲ್ಲಿ ವಾಸವಾಗಿದ್ದಾರೆ.
ಪಟ್ಟಣದ ಕ್ರಿಸ್ತರಾಜ ಶಾಲೆಯಲ್ಲಿ ಬಾಲ್ಯದ ಶಿಕ್ಷಣ ಮುಗಿಸಿದ ಡಾ.ಶುಭಾಷ್ ಎನ್. ತಮ್ಮ ತಾಯಿಯ ತವರೂರು ಪಿ.ಜಿ. ಪಾಳ್ಯ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ವೈದ್ಯರಾಗುವ ಮೂಲಕ ಕುಟುಂಬ ವರ್ಗದವರು ಹಾಗೂ ಗ್ರಾಮಕ್ಕೆ ಸಂತಸ ತಂದಿದ್ದಾರೆ.
ಸುಶಿಕ್ಷಿತ ಕುಟುಂಬದ ಕುವರ:
ಡಾ. ಶುಭಾಷ್ ಎನ್. ಹುತ್ತೂರು ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ದಿ.ನಂಜುಂಡ ಸ್ವಾಮಿ ಹಾಗೂ ಪ್ರಸ್ತುತ ಕೋಣನ ಕೆರೆ ಆಶ್ರಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಮ್ಮ ಅವರ ಸುಪುತ್ರ.
ಗ್ರಾಮೀಣ ಭಾಗದ ಶಾಲೆ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಯುವಕ ಅದೇ ಗ್ರಾಮೀಣ ಭಾಗದಲ್ಲಿ ವೈದ್ಯರಾಗಿ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಮೂಲಕ ತಂದೆ ತಾಯಿ ಗುರು ಹಿರಿಯರಿಗೆ ಹೆಮ್ಮೆ ತರುವ ಸಾಧನೆ ತೋರಿದ್ದಾರೆ. ತಾಯಿಯ ತವರೂರಿನಲ್ಲಿ ತಮ್ಮ ವೈದ್ಯ ವೃತ್ತಿಯನ್ನು ಪ್ರಾರಂಭಿಸಿರುವುದು ತಾಯಿ, ಅಜ್ಜಿ, ತಾತ, ಮಾವ ಒಟ್ಟಾರೆ ಇಡಿ ಕುಟುಂಬ ವರ್ಗಕ್ಕೆ ಸಂತಸ ತಂದಿದೆ.
ಸ್ವಲ್ಪ ಬಿಡುವು ಸಿಕ್ಕರೆ ಸಾಕು ಕೈಯಲ್ಲಿ ಮೊಬೈಲ್ ಹಿಡಿದು ಕೂರುವ ಯುವ ಪೀಳಿಗೆಯ ಮದ್ಯೆ ತನ್ನ ಎಲ್ಲಾ ಸಮಯಯವನ್ನು ಓದಿಗಾಗಿ ಮುಡಿಪಿಟ್ಟು ಕೊನೆಗೂ ವೈದ್ಯನಾಗುವ ತನ್ನ ಗುರಿಯನ್ನು ಮುಟ್ಟಿ ತನ್ನ ತಾಯಿಯ ಹುಟ್ಟೂರಿನಲ್ಲೆ ವೈದ್ಯರಾಗಿ ನಿಯೋಜನೆಗೊಂಡು ವೈದ್ಯಕೀಯ ವೃತ್ತಿ ಜೀವನವನ್ನು ಆರಂಭಿಸಿರುವ ಡಾ.ಶುಭಾಷ್ ಎನ್.ಅವರಿಗೆ ಅಭಿನಂದನೆಗಳು.