


ಗೌರಿ ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪನೆ ಮಾಡಲಾಗಿರುವ ಗೌರಿ ಗಣೇಶ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಎಂಆರ್ ಮಂಜುನಾಥ್ ಬಾಗಿ.
ಹನೂರು ಪಟ್ಟಣದ ವಿನಾಯಕ ನಗರದ ಎರಡನೇ ಹಂತ ಲೇಟ್ ಗೋವಿಂದ ನಾಯ್ಡು ಬಡಾವಣೆಯಲ್ಲಿ ನೂತನವಾಗಿ ಮೊದಲನೇ ವರ್ಷದ ಗೌರಿ ಗಣೇಶ ಹಬ್ಬದ ಗಣಪತಿ ಪ್ರತಿಷ್ಠಾಪನೆ ಐದು ದಿನಗಳ ಪೂಜೆ ಕಾರ್ಯಕ್ರಮದಲ್ಲಿ ಶುಕ್ರವಾರ ರಾತ್ರಿ ಶಾಸಕ ಎಂ ಆರ್ ಮಂಜುನಾಥ್ ಬಡಾವಣೆಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರಿ ಗಣೇಶ ಹಬ್ಬದ ಶುಭ ಕೋರಿದರು.
ಗೌರಿ ಗಣೇಶ ಹಬ್ಬ ಜನತೆಗೆ ಶುಭವುಂಟುಮಾಡಲಿ ಜೊತೆಗೆ ಗಣಪತಿ ಪ್ರತಿಷ್ಠಾಪನೆ ಮಾಡುವ ಭಕ್ತಾದಿಗಳು ಗಣಪತಿಯನ್ನು ವಿಸರ್ಜನೆ ಮಾಡುವ ವೇಳೆಯಲ್ಲಿ ಸುರಕ್ಷತೆ ಬಗ್ಗೆ ಹೆಚ್ಚಿನ ನಿಗವಹಿಸಬೇಕು ಜೊತೆಗೆ ವಿಸರ್ಜನೆ ವೇಳೆಯಲ್ಲಿ ಮಕ್ಕಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಈ ಬಾರಿ ಗೌರಿ ಗಣೇಶ ಹಬ್ಬ ನಾಡಿನ ಜನತೆಗೆ ಕ್ಷೇತ್ರದ ಜನತೆಗೆ ಶುಭವುಂಟು ಮಾಡಲಿ ಎಂದು ಶುಭ ಹಾರೈಸಿದರು.
ಇನ್ಸ್ಪೆಕ್ಟರ್ ಬೇಟಿ : ಪಟ್ಟಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿ ಆನಂದ್ ಮೂರ್ತಿ ಸಿಬ್ಬಂದಿ ವರ್ಗದವರು ಭೇಟಿ ನೀಡಿ ವಿನಾಯಕ ನಗರದ ಎರಡನೇ ಹಂತದ ಗೋವಿಂದ ನಾಯ್ಡು ಲೇಔಟ್ ನಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಗಣಪತಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ನಿವಾಸಿಗಳಿಗೆ ಶುಭ ಹಾರೈಸಿದರು.
ವರದಿ: ನಿಂಪು ರಾಜೇಶ್