/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಸಾಹಿತ್ಯ
  • ಬಂಧು – ಖ್ಯಾತ ಕವಿಯಿತ್ರಿ ರಶ್ಮಿ ಕೆ ವಿಶ್ವನಾಥ್ ಅವರ ಅರ್ಥಪೂರ್ಣ ಲೇಖನ
Image

ಬಂಧು – ಖ್ಯಾತ ಕವಿಯಿತ್ರಿ ರಶ್ಮಿ ಕೆ ವಿಶ್ವನಾಥ್ ಅವರ ಅರ್ಥಪೂರ್ಣ ಲೇಖನ

ಬಂಧು
ಭಾಸ್ಕರನಿಗೂ ಮುಂಚೆ ತಾನೇ ಎದ್ದುಬಿಡುವ
ಎತ್ತುಗಳನ್ನೂ ಎಬ್ಬಿಸಿ ಉಳಲಿಕ್ಕೋಗುವ
ಬಿತ್ತು ಬೆಳೆದು ಹೊಟ್ಟೆಗಿಷ್ಟು ಕೂಳು ನೀಡುವ
ಹಾಲು ಮೊಸರು ತುಪ್ಪಗಳನ್ನೂ ಕೊಡುವ
ಈ ಹೆಮ್ಮೆಯ ರೈತನಿಗೊಮ್ಮೆ ನಮಿಸಿಬಿಡುವ

ಹೊತ್ತು ಗೊತ್ತು ಯಾವದೂ ಲೆಕ್ಕಕ್ಕಿಲ್ಲ
ಕರೆದಾಗೆಲ್ಲ ಬರದೆ ಇರುವುದೇ ಇಲ್ಲಾ
ಭಯದ ನೆರಳ ದೂರ ಸರಿಸಿ
ತಾನಿರುವೆನೆಂಬ ನಂಬಿಗೆಯಿರಿಸಿ
ಕಾಯುತ್ತಲೇ ಇರುವ ಪೊಲೀಸ್ ಸಾಹೇಬ

ಇಲ್ಲಿ ಇಷ್ಟು ಚಳಿಯನ್ನೇ ಸಹಿಸಲಾಗುತ್ತಿಲ್ಲ
ಗಡಿಯಲ್ಲಿ ಹೇಗಿರುವರೊ ದೇವರೇ ಬಲ್ಲ
ನಾಡಿನ ಜನರ ಕ್ಷೇಮ ಸೌಖ್ಯವ ನೆನೆದು
ಹೊರಗಿನ ಶತ್ರುಗಳು ಬರದಂತೆ ತಡೆದು
ನಾಡನ್ನು ರಕ್ಷಿಸುತ್ತಿರುವ ರಕ್ಷಕ ನಮ್ಮ ಸೈನಿಕ

ತನ್ನವರಲ್ಲದವರ ಜೊತೆಯೇ ಇದ್ದುಕೊಂಡು
ತನ್ನದಲ್ಲದ ಹಣವನ್ನು ಕಾದಿಟ್ಟುಕೊಂಡು
ಎತ್ತಲಿಂದೆತ್ತಲೊ ಮತ್ತೆತ್ತಲೋ ಕರೆದೊಯ್ಯುವ
ಇಳಿಸಿ ಹತ್ತಿಸಿ ದಬ್ಬುತ್ತಲೇ ಸಾಗಿಸಿಬಿಡುವ
ಸಂಚಾರ ಸಾರಥಿಯೊಡನಿರುವ ನಿರ್ವಾಹಕ

ಬೆಳಗಿನ ಜಾವವೇ ನಗುತ್ತಲೇ ಬರುವ
ಚೆಂದದೊಂದು ಹಾಡು ಹಾಕಿ ಎಬ್ಬಿಸಿಬಿಡುವ
ನಾವೇ ನೋಡಲಾಗದೆ ಆಚೆಗಿಟ್ಟ ಕಸವನು
ಕೂಗಿಕರೆದು ಪಡೆದು ಹಿಡಿದು ನಡೆದುಬಿಡುವ
ಸ್ವಚ್ಛತೆಯ ರೂವಾರಿ ತಾನೆಂದು ಸಾರಿದ ಕಸದವ

ನಮಗಾಗಿ ಅವರಿಗಾಗಿ ನಿಯಮಗಳ ಪಾಲಿಸುವ
ಜೀವಬಂಧುಗಳಿಗೆ ಭಾವತುಂಬಿ ನಮಿಸಿಬಿಡುವ

✍🏻ರಶ್ಮಿ ಕೆ. ವಿಶ್ವನಾಥ್

Releated Posts

ಬಾಲ್ಯದ ಆಟ…ಆ ಹುಡುಗಾಟ..ಲೇಖಕಿ ರಶ್ಮಿ ಕೆ. ವಿಶ್ವನಾಥ್ ಅವರ ಲೇಖನ

ಬಾಲ್ಯದ ಆಟ…… ಆ ಹುಡುಗಾಟ ನನ್ನ ಬಾಲ್ಯದ ನೆನಪುಗಳು ಲೆಕ್ಕವಿಲ್ಲದಷ್ಟು. ಆದರೆ ಈಗಿನ ಮಕ್ಕಳಿಗೆ ಆ ಪುಣ್ಯವಿಲ್ಲ ಎನ್ನಬಹುದು. ಅದಕ್ಕೆ ಕಾರಣ ಪೋಷಕರೂ ಸಹ…

ByByN Rajesh Sep 15, 2025

ಲೆಕ್ಕಾಚಾರವೇ ಇಲ್ಲಿ….ಯುವ ಸಾಹಿತಿ ಕೆ.ಅನುರಾಧ ಸಿಂಗನಲ್ಲೂರು ಅವರ ಲೇಖನ

ಲೆಕ್ಕಾಚಾರವೇ ಇಲ್ಲಿ ನಮ್ಮದು ವೈವಿಧ್ಯಮಯ ದೇಶಹೇಳಲು ಎಷ್ಟೊಂದು ಸೊಗಸುಹೇಳಿದವರೆಷ್ಟೊ ಕೇಳಿದವರೆಷ್ಟೋ…ಆದ್ರೆನೂ ಬಂತು ಪ್ರಯೋಜನಉಳ್ಳವರು ಮನಬಂದಂತೆ ಕುಣಿಯುವಾಗಇಲ್ಲದವರು ಕೈ ಕಟ್ಟಿ ಕಣ್ಣು ಮುಚ್ಚಿಕುಳಿತುಕೊಳ್ಳುವರಾ….?ಧರ್ಮ-ಧರ್ಮದೊಳಗೆ ನೊಕಿಧರ್ಮವನ್ನು ಜಾತಿ…

ByByN Rajesh Sep 7, 2025

ಓವರ್ ಟೂರಿಸಂ….ಖ್ಯಾತ ಬರಹಗಾರ್ತಿ ರಶ್ಮಿ ಕೆ ವಿಶ್ವನಾಥ್ ಅವರ ಕಿರುಲೇಖನ

ಪ್ರವಾಸಾತಿರೇಕ (ಓವರ್ ಟೂರಿಸಂ) ಪ್ರವಾಸ ಬೇಕಾ? ಹೌದು ಬೇಕೇ ಬೇಕು. ‘ಕೋಶ ಓದಿ ನೋಡು, ದೇಶ ಸುತ್ತಿ ನೋಡು’ ಅಂತ ಅಷ್ಟಿಲ್ಲದೇ ಹೇಳ್ತಾರಾ? ನಮ್ಮ…

ByByN Rajesh Sep 7, 2025

ನಾವು ಮತ್ತು ನಮ್ಮ ಟೀಚರ್ – ಯುವ ಸಾಹಿತಿ ರಶ್ಮಿ ಕೆ. ವಿಶ್ವನಾಥ್ ಅವರ ಅರ್ಥಪೂರ್ಣ ಲೇಖನ

ನಾವು ಮತ್ತು ನಮ್ಮ ಟೀಚರು 🤓ನಾ 7th ಓದುವಾಗ ಮೊದಲ ಗಣಿತ ಟೆಸ್ಟ್. ಏನಿಲ್ಲ 25 ಅಂಕಗಳ ಟೆಸ್ಟಿಗೆ ಪೂರಾ 25 ಸೊನ್ನೆ ತಗೊಂಡಿದ್ದೆ.…

ByByN Rajesh Sep 6, 2025

Leave a Reply

Your email address will not be published. Required fields are marked *

Scroll to Top