ಕೊಳ್ಳೇಗಾಲ ಇದೇ ತಿಂಗಳು ಅಕ್ಟೋಬರ್ 18ರಂದು ಆಯೋಜಿಸಲಾಗಿರುವ ಲಯನ್ ಸಂಸ್ಥೆ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಜೆಎಸ್ಎಸ್ ಜಗದ್ಗುರುಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳವರು ಪಾಲ್ಗೊಳ್ಳಲಿದ್ದಾರೆ ಎಂದು ಕೊಳ್ಳೇಗಾಲ ಸಂಸ್ಥೆಯ ಅಧ್ಯಕ್ಷ ಬಿಎಂ ಪುಟ್ಟ ಮಾದಪ್ಪ ತಿಳಿಸಿದರು.
ಕೊಳ್ಳೇಗಾಲ ಪಟ್ಟಣದ ಲಯನ್ಸ್ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೊಳ್ಳೇಗಾಲ ಲಯನ್ ಸಂಸ್ಥೆ ಆರಂಭವಾಗಿ 50 ವರ್ಷಗಳು ಕಳೆದಿದೆ 19 76 ರಲ್ಲಿ ಆರಂಭಗೊಂಡ ಲಯನ್ಸ್ ಸಂಸ್ಥೆ ಸಾವಿರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೊಳ್ಳೇಗಾಲದ ಪಟ್ಟಣ ಹಾಗೂ ಗ್ರಾಮಾಂತರ ಜನತೆಗಳ ಪ್ರೀತಿಗೆ ಪಾತ್ರವಾಗಿದೆ
ಈ ಹಿನ್ನಲೆಯಲ್ಲಿ 50 ವರ್ಷ ತುಂಬಿರುವ ಲಯನ್ಸ್ ಸಂಸ್ಥೆ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದೆಂದು ಅವರು ತಿಳಿಸಿದರು. ಲಯನ್ಸ್
ಶಿಕ್ಷಣ ಸಂಸ್ಥೆಯಲ್ಲಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಈ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ ಶಿವರಾತ್ರಿ ಕೇಂದ್ರ ಸ್ವಾಮಿಗಳು ಆಗಮಿಸಲಿದ್ದಾರೆ ಹಾಗೂ ಲಯನ್ ಸಂಸ್ಥೆಯ ಹಿರಿಯರು ಸಹ ಪಾಲ್ಗೊಳ್ಳಲಿದ್ದಾರೆ
ಸುವರ್ಣ ಮಹೋತ್ಸವದ ಅಂಗವಾಗಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಹಿಂದಿನಿಂದಲೂ ಲಯನ್ ಸಂಸ್ಥೆಯು ಅಂಧತ್ವ ನಿವಾರಣೆಗೆ ಹೆಚ್ಚಿನ ಒತ್ತು ಕೊಟ್ಟು ಬಂದಿದೆ ಹಾಗೆ ಪರಿಸರ ಆರೋಗ್ಯ ಶಿಕ್ಷಣ ಕ್ಷೇತ್ರಗಳಲ್ಲಿಯೂ ಸಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಮುಂದಿನ ದಿನಗಳಲ್ಲಿಯೂ ಸಹ ಸಂಸ್ಥೆ ವತಿಯಿಂದ ಇನ್ನೂ ಅನೇಕ ವಿವಿಧ ರೀತಿಯ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲಾಗುವುದೆಂದು ತಿಳಿಸಿದರು.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಲಯನ್ ಸಂಸ್ಥೆಯ ಪದಾಧಿಕಾರಿಗಳಾದ ನಾಗರಾಜು ಚೆನ್ನಮ್ಮದೇಗೌಡ ಮಾದೇಶ್ ಜೆ ಹರ್ಷ ಜಿಎಂ ಪ್ರಸಾದ್ ಸೇರಿದಂತೆ ಇನ್ನು ಹಲವರು ಪಾಲ್ಗೊಂಡಿದ್ದರು
ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.