*ಕಾರ್ನರ್‌ಸ್ಟೋನ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ*
ಕೊಳ್ಳೇಗಾಲ ಸುದ್ದಿ:
ದಿನಾಂಕ *24-09-2026* ರಂದು ಕೊಳ್ಳೇಗಾಲದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ನಡೆದ 'ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ'ದಲ್ಲಿ ಸ್ಥಳೀಯ ಕಾರ್ನರ್‌ಸ್ಟೋನ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

*.* *ಬ್ಯಾಸ್ಕೆಟ್ ಬಾಲ್:*  ಬಾಲಕಿಯರ ವಿಭಾಗದಿಂದ ಹಂಸ ಮತ್ತು ತಂಡ ಹಾಗೂ ಬಾಲಕರ ವಿಭಾಗದಿಂದ ಅಭಯ್ ಮತ್ತು ತಂಡ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿವೆ.
. *ಷಟಲ್ ಬ್ಯಾಡ್ಮಿಂಟನ್:* ಜಿಲ್ಲೆಯ ಐದು ತಾಲೂಕುಗಳ ತಂಡಗಳು ಸ್ಪರ್ಧಿಸಿದ್ದ ಪಂದ್ಯಾವಳಿಯಲ್ಲಿ, ಕಾಲೇಜಿನ ವಿನುತಾ ಮತ್ತು ತಂಡವು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
. *ಟೆನ್ನಿಕ್ವಾಯಿಟ್:*  ಬಾಲಕಿಯರ ವಿಭಾಗದಿಂದ ಪಲ್ಲವಿ ಮತ್ತು ತಂಡ ಹಾಗೂ ಬಾಲಕರ ವಿಭಾಗದಿಂದ ಆಯುಷ್ ಮತ್ತು ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಅರ್ಹತೆ ಗಳಿಸಿವೆ.
. *ಹ್ಯಾಂಡ್ಬಾಲ್*: ಬಾಲಕರ ವಿಭಾಗದಿಂದ ಕಿಶನ್ ಮತ್ತು ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಕಾಲೇಜಿಗೆ ಹಾಗೂ ತಾಲೂಕಿಗೆ ಕೀರ್ತಿ ತಂದ ಸಕಲ ವಿಜೇತ ವಿದ್ಯಾರ್ಥಿಗಳಿಗೆ
ಸಂಸ್ಥೆಯ ಚೇರ್ಮನ್ ಹಾಗೂ ಮಾಜಿ ಸಚಿವರಾದ N ಮಹೇಶ್, ಅಧ್ಯಕ್ಷರಾದ ರುಬೆನ್ M ಮೋಸೆಸ್, ಪ್ರಾಂಶುಪಾಲರಾದ ಡಾ. ರೋಷನ್ ಪ್ರಿನ್ಸ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರುಗಳಾದ ಪವನ್ , ಅರುಣ್ ಮತ್ತು ಸಿಬ್ಬಂದಿ ವರ್ಗದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ವರದಿ ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.