ಕೊಳ್ಳೇಗಾಲ: ಭೀಮೈಕ್ಯರಾದ  ಹೆಚ್. ಕೃಷ್ಣಸ್ವಾಮಿ ರವರ 22 ನೇ ಪುಣ್ಯಸ್ಮರಣೆ ಅಂಗವಾಗಿ ವಿಶ್ವಚೇತನ ವಿದ್ಯಾಸಂಸ್ಥೆ ಆವರಣದಲ್ಲಿ  ಸ್ವಯಂಪೇರಿತ ಬೃಹತ್ ರಕ್ತದಾನ ಶಿಬಿರ ಹಾಗೂ ಕಣ್ಣಿನ ತಪಾಸಣಾ ಶಿಬಿರವು ಯಶಸ್ವಿಯಾಗಿ ನಡೆಯಿತು.
 ಕಾರ್ಯಕ್ರಮವನ್ನು  ಬೆಂಗಳೂರು ಸಿಸಿಬಿ ವಿಭಾಗದ ಪೊಲೀಸ್ ಅಧಿಕಾರಿಗಳಾದ ದೇವೇಂದ್ರಪ್ಪ ರವರು  ಉದ್ಘಾಟಿಸಿದರು.
ಎಚ್ ಕೃಷ್ಣಸ್ವಾಮಿ ರವರು ಹಲವಾರು ಹೋರಾಟಗಳು ಹಾಗೂ ಸಮಾಜ ಸೇವೆ ಮುಖಾಂತರ ಸಾವಿರಾರು ಜನರ ಮನದಲ್ಲಿ ಇಂದಿಗೂ ನೆಲೆಸಿದ್ದಾರೆ ಅವರು ಭೀಮೈಕ್ಯರಾದ ನಂತರ ಅವರ ಆಶಯದಂತೆ ಅವರ ಧರ್ಮಪತ್ನಿಯವರಾದ ಶ್ರೀಮತಿ ಪ್ರೇಮಲತಾ ಕೃಷ್ಣಸ್ವಾಮಿ ರವರು ಹಾಗೂ ಅವರ ಸುಪುತ್ರರಾದಂತಹ ಎಚ್ ಕೆ ಮಹಾನಂದರವರು ಮತ್ತು ಅವರ ಕುಟುಂಬ ವರ್ಗದವರು ಅವರು ತೋರಿದ ಮಾರ್ಗದಲ್ಲಿ ಸಮಾಜ ಸೇವೆಯನ್ನು ಮುಂದುವರಿಸುತ್ತಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಭೀಮೈಕರನ್ನು ಸ್ಮರಿಸಿದರು ಕಣ್ಣಿನ ತಪಾಸಣಾ ಶಿಬಿರದಲ್ಲಿ 586 ಜನರು ಪಾಲ್ಗೊಂಡಿದ್ದು 38 ಜನರನ್ನು ಶಸ್ತ್ರಚಿಕಿತ್ಸೆಗೆ ಕಳುಹಿಸಿಕೊಡಲಾಯಿತು. ರಕ್ತದಾನ ಶಿಬಿರದಲ್ಲಿ 55ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು ಕಾರ್ಯಕ್ರಮದಲ್ಲಿ ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೇಮಲತಾ ಕೃಷ್ಣಸ್ವಾಮಿ ರವರು ಅವರ ಸುಪುತ್ರರಾದಂತಹ ಹೆಚ್‌.ಕೆ ಮಹಾನಂದರವರು ಜಂಟಿ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ರಮೇಶ್ ಕುಮಾರ್ ರವರು ಚಲನಚಿತ್ರ ಖ್ಯಾತ ಗಾಯಕರಾದ ಶಿವ ರವರು ಸಿಸಿಬಿ ವಿಭಾಗದ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರವರು ಎ.ಎಸ್.ಐ ಚಿದಾನಂದ್ ರವರು ಮಾಜಿ ನಗರಸಭೆ ಉಪಾಧ್ಯಕ್ಷರಾದ ಜೆ ಹರ್ಷ ನಗರಸಭೆ ಮಾಜಿ ಸದಸ್ಯರಾದ ಶಿವಾನಂದ ರೋ, ಗಿರೀಶ್ ಜಡೆ ಮುಖಂಡರುಗಳಾದ ನಾಗರಾಜು, ಮಂಜುನಾಥ್, ಪ್ರಭುಸ್ವಾಮಿ, ವಿಶ್ವಚೇತನ ಸಮೂಹ ವಿದ್ಯಾ ಸಂಸ್ಥೆಯ ಸಂಯೋಜಕರಾದ  ಜಗದೀಶ್, ರಾಜೇಶ್ ಸಂಸ್ಥೆಯ ವ್ಯವಸ್ಥಾಪಕರಾದ ರವಿತೇಜ ಕಾಲೇಜಿನ ಪ್ರಾಂಶುಪಾಲರಾದ ಬಿಸಿ ಮಾದೇವಯ್ಯ ಮುಖ್ಯ ಶಿಕ್ಷಕರಾದ ಕವಿತಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು

ವರದಿ ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.