ಕೊಳ್ಳೇಗಾಲ: ಕಳೆದ ಹಲವು ವರ್ಷಗಳಿಂದ ಯಾವುದೇ ಪ್ರಗತಿ ಕಾಣದೆ ನಷ್ಟದಲ್ಲಿದ್ದ ಕೊಳ್ಳೇಗಾಲ ಸಮಗ್ರ ಗ್ರಾಮೀಣಾಭಿವೃದ್ಧಿ ವಿವಿಧೋದ್ದೇಶ ಸಹಕಾರ ಸಂಘ ಹೊಸ ಚೈತನ್ಯದೊಂದಿಗೆ ಮುನ್ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಲಾಭಾಂಶದಲ್ಲಿ ಮುನ್ನಡೆಯಲ್ಲಿದೆ ಎಂದು ನಿರ್ದೇಶಕ ಬಸವಣ್ಣ ಅವರು ತಿಳಿಸಿದರು.
 ಕೊಳ್ಳೇಗಾಲ ಪಟ್ಟಣದ ಸರ್ಕಾರಿ ನೌಕರ ಸಭಾಂಗಣದಲ್ಲಿ ಬುಧವಾರ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡವರು ಮಾತನಾಡಿದರು.
ಸುಮಾರು 22 ವರ್ಷಗಳ ಇತಿಹಾಸ ಇರುವ ಸಮಗ್ರ ಗ್ರಾಮೀಣ ವಿವಿದ್ಧೋದೇಶ ಸಹಕಾರ ಸಂಘ 3 ವರ್ಷಗಳ ಹಿಂದೆ  ತುಂಬಾ ನಷ್ಟದಲ್ಲಿದ್ದ ಸಂಘವನ್ನೇ ಮುಚ್ಚುವ ಸ್ಥಿತಿ ಹಂತಕ್ಕೆ ತಲುಪಿತ್ತು.
 ಆದರೆ ನೂತನವಾಗಿ ಮಧುನಹಳ್ಳಿ ಶಾಂತರಾಜು ಅವರು ಅಧ್ಯಕ್ಷರಾದ ಮೇಲೆ ಸಂಘಕ್ಕೆ ಮರುಜೀವ ಬಂದಿದ್ದು ಕಳೆದ ಮೂರು ವರ್ಷಗಳಿಂದ ಸಂಘ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಶೇರುದಾರರು ಹಾಗೂ ಎಲ್ಲಾ ಸದಸ್ಯರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
 ಶಾಂತರಾಜು ಅವರು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ನಷ್ಟದಲ್ಲಿದ್ದ ಸಹಕಾರ ಸಂಘದ ಮುನ್ನಡೆಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ ಇದೀಗ 26 27ನೇ ಸಾಲಿನ ಅಂದಾಜು ಬಜೆಟ್ ನಲ್ಲಿ 5 90 ಸಾವಿರ ವಾರ್ಷಿಕ ವಹಿವಾಟು ಉಲ್ಲೇಖಿಸಲಾಗಿದ್ದು ಸುಮಾರು 30,000 ದಷ್ಟು ಲಾಭಾಂಶ ತೋರಿಸಲಾಗಿದೆ ಇದು ನಿಜಕ್ಕೂ ಸಂಘದ ಚೇತರಿಕೆಗೆ ಅತ್ಯುನ್ನತ ಉದಾಹರಣೆಯಾಗಿದೆ ಎಂದವರು ತಿಳಿಸಿದರು.
 ಸಂಘದ ಅಧ್ಯಕ್ಷರಾದ ಸಾಂತರಾಜು ಮದುವನಹಳ್ಳಿ ಅವರು ಮಾತನಾಡಿ ಮುಂದಿನ ವರ್ಷಗಳಿಂದ ನಮ್ಮ ಸಹಕಾರ ಸಂಘವು ಅಭಿವೃದ್ಧಿಯತ್ತ ಮುನ್ನಡೆಯಲ್ಲಿದೆ ಎಲ್ಲಾ ಶೇರುದಾರರಿಗೆ ಹಾಗೂ ಸದಸ್ಯರುಗಳಿಗೆ ಸಾಲ ನೀಡುವ ನಿಟ್ಟಿನಲ್ಲಿ ಗಮನಹರಿಸಲಾಗುವುದೆಂದು ತಿಳಿಸಿದರು.
 ಸಂಘದ ಮುಖ್ಯ  ಕಾರ್ಯನಿರ್ವಾಹಣಾಧಿಕಾರಿ ಯೋಗಾನಂದ ಹೂಂಡರಬಾಳು ಅವರು ವಾರ್ಷಿಕ ವರದಿಯನ್ನು ಕಾರ್ಯಕ್ರಮದಲ್ಲಿ ಮಂಡಿಸಿದರು ಕಾರ್ಯಕ್ರಮದಲ್ಲಿ ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು
ವರದಿ ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.