ನೀರಿಗಾಗಿ ರೈತ ಮುಖಂಡರಿಂದ ಅನಿರ್ದಿಷ್ಟಾವಧಿ ಮುಷ್ಕರ
ಕೊಳ್ಳೇಗಾಲ: ಕಾವೇರಿ ನದಿ ಮತ್ತು ಗುಂಡಲ್ ಡ್ಯಾಮ್ ವ್ಯಾಪ್ತಿಯ ರೈತರ ಹಿತ ಕಾಯುವ ನಿಟ್ಟಿನಲ್ಲಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರವರ್ಗದವರು ನಿರ್ಲಕ್ಷೆ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ, ಕೊಳ್ಳೇಗಾಲ ರೈತ ಸಂಘದ ಮುಖಂಡರು ಇಂದಿನಿಂದ ಕೊಳ್ಳೇಗಾಲ ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ರೈತ ಮುಖಂಡರಾದ ದಶರತ್ ಅಣಗಳ್ಳಿಯವರ ನೇತೃತ್ವದಲ್ಲಿ ಹಲವಾರು ಗ್ರಾಮಗಳ ರೈತರು ತಾಲೂಕು ಕಚೇರಿ ಮುಂದೆ ಅನಿರ್ದಿಷ್ಟ ಅವಧಿ ಧರಣಿ ನಡೆಸುತ್ತಿದ್ದಾರೆ.
ರೈತರ ಬೇಡಿಕೆಗಳನ್ನು ಈಡೇರಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಬಿಗಿಪಟ್ಟು ಹಿಡಿದು ಕುಳಿತಿದ್ದಾರೆ ಕಾವೇರಿ ಪ್ರಾಧಿಕಾರ ಮಂಡಳಿ ಆದೇಶದಂತೆ ಕರ್ನಾಟಕ ಸರ್ಕಾರ ತಮಿಳುನಾಡು ರಾಜ್ಯಕ್ಕೆ ನೀರು ಬಿಡುತ್ತಿದೆ ಅದೇ ರೀತಿ ಕಾವೇರಿ ಪ್ರಾಧಿಕಾರ ನ್ಯಾಯಮಂಡಳಿ ಕರ್ನಾಟಕದ ರೈತರಿಗೂ ಇಂತಿಷ್ಟು ಟಿಎಂಸಿ ನೀರು ಬಿಡಬೇಕೆಂದು ಆದೇಶಿಸಿದೆ ಹಾಗಾಗಿ ಕರ್ನಾಟಕ ಸರ್ಕಾರ ಈ ಕಾವೇರಿ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನಮಗೂ ಸಹ ನೀರು ಬಿಡಬೇಕಾಗಿರುವುದು ಅತಿ ಮುಖ್ಯ ಎಂದು ಅವರು ಒತ್ತಾಯಿಸಿದ್ದಾರೆ.
ಅಲ್ಲದೆ ಸಮೀಪದ ಗುಂಡಲ್ ಡ್ಯಾಮ್ ನಿಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ಎಕರೆಗೆ ಕೃಷಿ ಚಟುವಟಿಕೆಗಳಿಗೆ ಇದುವರೆಗೂ ನೀರು ಬಿಟ್ಟಿಲ್ಲ ಆದ್ದರಿಂದ ಪ್ರಸಕ್ತ ಸಾಲಿನಲ್ಲಿ ರೈತರ ಜಮೀನುಗಳಿಗೆ ಗುಂಡಾಲ್ ಜಲಾಶಯದಿಂದ ನೀರು ಬಿಡಲೇಬೇಕು ಎಂದು ಒತ್ತಾಯಿಸಿದ್ದಾರೆ ಇದರ ಜೊತೆಗೆ ಕಾಲುವೆಗಳು ಹಾಗೂ ಕೆರೆ ಅಭಿವೃದ್ಧಿ ವಿಷಯದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಇದರ ಬಗ್ಗೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು ಈ ಭಾಗದಲ್ಲಿ ಸುಮಾರು ಪ್ರದೇಶ ಅರಣ್ಯ ವ್ಯಾಪ್ತಿಗೆ ಒಳಪಟ್ಟಿದೆ ಅವುಗಳಲ್ಲಿ ಕೆಲವು ಸರ್ಕಾರಿ ಆಸ್ತಿಗಳು ಇದ್ದರೂ ಸಹ ಆರ್ ಟಿ ಸಿ ಕಂಡುಬಂದಿಲ್ಲ ಆದ್ದರಿಂದ ಸರ್ಕಾರಿ ಆಸ್ತಿಗಳಿಗೆ ಆರ್ ಟಿ ಸಿ ನಮೂದಿಸಬೇಕೆಂದು ಒತ್ತಾಯಿಸಿದ್ದಾರೆ ಇನ್ನೂ ಅನೇಕ ಬೇಡಿಕೆಗಳು ಈಡೇರಿಕೆಗಾಗಿ ರೈತರು ಬಿಗಿಪಟ್ಟು ಹಿಡಿದಿದ್ದು ತಮ್ಮ ಬೇಡಿಕೆಗಳು ಈಡೇರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಬಿಗಿಪಟ್ಟು ಹಿಡಿದು ಮುಷ್ಕರ ಮುಂದುವರಿಸಿದ್ದಾರೆ
ವರದಿ ನಿಂಪು ರಾಜೇಶ್
ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.